Advertisement

RCB IPL ಪ್ರಶಸ್ತಿ ಗೆಲ್ಲುವುದಿಲ್ಲವೇ? ಯುಜ್ವೇಂದ್ರ ಚಾಹಲ್ ದಿಟ್ಟ ಪ್ರತಿಕ್ರಿಯೆ

07:47 PM Jul 16, 2023 | Team Udayavani |

ಮುಂಬಯಿ: ‘ಆರ್‌ಸಿಬಿ ಏಕೆ ಐಪಿಎಲ್ ಪ್ರಶಸ್ತಿ ಗೆಲ್ಲುವುದಿಲ್ಲ?’ ಎಂಬ ಪ್ರಶ್ನೆಗೆ ತಂಡದ ಲೆಗ್ ಸ್ಪಿನ್ನರ್ ದಿಟ್ಟ ಉತ್ತರವನ್ನು ನೀಡಿದ್ದಾರೆ.

Advertisement

ಈಗ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ಚಾಹಲ್  ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ ಅವರ ಪಾಡ್‌ಕಾಸ್ಟ್‌ನಲ್ಲಿ, ಎಂಟು ವರ್ಷಗಳ ಕಾಲ ಆರ್‌ಸಿಬಿ ತಂಡಕ್ಕಾಗಿ ಆಡಿದ ಬಳಿಕ 2022 ರ ಐಪಿಎಲ್ ಮೆಗಾ ಹರಾಜಿಗೆ ಮುಂಚಿತವಾಗಿ ತನ್ನನ್ನು ತಂಡದಲ್ಲಿ ಉಳಿಸಿಕೊಳ್ಳದಿದ್ದ ಕುರಿತು ತಮ್ಮ ಹತಾಶೆಯನ್ನು ತೆರೆದಿಟ್ಟರು. “ಖಂಡಿತವಾಗಿಯೂ ನನಗೆ ತುಂಬಾ ದುಃಖವಾಯಿತು. ನನ್ನ ಪಯಣ ಆರ್‌ಸಿಬಿಯಿಂದ ಆರಂಭವಾಯಿತು. ಅವರೊಂದಿಗೆ ಎಂಟು ವರ್ಷ ಕಳೆದೆ. ಆರ್‌ಸಿಬಿ ನನಗೆ ಅವಕಾಶ ನೀಡಿದೆ ಮತ್ತು ಅವರಿಂದಾಗಿ ನಾನು ಟೀಮ್ ಇಂಡಿಯಾ ಕ್ಯಾಪ್ ಪಡೆದುಕೊಂಡಿದ್ದೇನೆ” ಎಂದರು.

ಚಹಾಲ್‌ ಅವರಿಗೆ ‘ಆರ್‌ಸಿಬಿ ಏಕೆ ಐಪಿಎಲ್ ಪ್ರಶಸ್ತಿ ಗೆಲ್ಲುವುದಿಲ್ಲ ಕೇಳಿದ ಪ್ರಶ್ನೆಗೆ ”ನಾನು 8 ವರ್ಷಗಳಿಂದ ಈ ಪ್ರಶ್ನೆಗೆ ಉತ್ತರವನ್ನು ಹುಡುಕಲು ಪ್ರಯತ್ನಿಸುತ್ತಿದ್ದೇನೆ” ಎಂದರು.

2016 ರ ಫೈನಲ್ ಪಂದ್ಯದಲ್ಲಿ ಆರ್ ಸಿಬಿ ಸನ್‌ರೈಸರ್ಸ್ ಹೈದರಾಬಾದ್‌ ಎದುರು ಸೋತಿದ್ದನ್ನು,ಪ್ರಶಸ್ತಿಯನ್ನು ಗೆಲ್ಲುವ ಹತ್ತಿರಕ್ಕೆ ಬಂದಿದ್ದನ್ನು ಚಾಹಲ್ ನೆನಪಿಸಿಕೊಂಡು ಅದು ನೋವಿನ ವಿಚಾರ ಎಂದರು.

“2016 ರಲ್ಲಿ, ನಾವು ಕ್ರಿಸ್ ಗೇಲ್ ಮತ್ತು ಕೆ.ಎಲ್. ರಾಹುಲ್ ಅವರನ್ನು ಹೊಂದಿದ್ದರಿಂದ ನಮಗೆ ಉತ್ತಮ ಅವಕಾಶ ಸಿಕ್ಕಿತು. ನಾವು ಫೈನಲ್‌ನಲ್ಲಿ ಸೋತಿದ್ದೇವೆ. ದೆಹಲಿ ವಿರುದ್ಧದ ಕ್ವಾಲಿಫೈಯರ್ ಪಂದ್ಯದಲ್ಲಿ ನಾನು ನನ್ನ ಮೊದಲ ಪರ್ಪಲ್ ಕ್ಯಾಪ್ ಅನ್ನು ಎರಡು ದಿನಗಳವರೆಗೆ ಪಡೆದುಕೊಂಡೆ ” ಎಂದು ಹೇಳಿದರು.

Advertisement

“ಮುಂದಿನ ವರ್ಷ ನಾವು ವಿಭಿನ್ನವಾಗಿ ಏನು ಮಾಡಬಹುದು ಎಂಬುದರ ಕುರಿತು ನಾವು ಮಾತನಾಡುತ್ತೇವೆ. ಉತ್ತಮವಾಗಿ ಆಡಿದ ನಂತರ ಸೋತಾಗ ಅದು ಕೆಟ್ಟದಾಗಿ ನೋಯಿಸುವುದಿಲ್ಲ. ಕೆಲವೊಂದನ್ನು ಪ್ರಯತ್ನಿಸಿದ ನಂತರವೂ ಕಳೆದುಕೊಳ್ಳಬೇಕಾಗುತ್ತದೆ , ಇನ್ನೊಂದು ಮೊದಲಿನಿಂದಲೂ ಸೋಲುತ್ತಲೇ ಇರುವುದು ಎಂದರು.

ವಿಶ್ವದ ಅತ್ಯಂತ ನೆಚ್ಚಿನ ಕ್ರೀಡಾ ಫ್ರಾಂಚೈಸಿಗಳಲ್ಲಿ ಒಂದಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತವಾಗಿ 16 ಸೀಸನ್‌ಗಳಲ್ಲಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿಲ್ಲ. ಅಭಿಮಾನಿಗಳು ಪ್ರತಿ ವರ್ಷವೂ ಈ ಸಲ ಕಪ್ ನಮ್ಮದೇ ಎಂದು ಹೇಳಿಕೊಂಡರೂ ಹೆಚ್ಚಿನ ಋತುಗಳಲ್ಲಿ ಲೀಗ್‌ನಲ್ಲಿ ಅತ್ಯುತ್ತಮ ತಂಡಗಳಲ್ಲಿ ಒಂದಾಗಿದ್ದರೂ ಫ್ರಾಂಚೈಸಿಗೆ ಟ್ರೋಫಿಯನ್ನು ಪಡೆಯಲು ಸಾಧ್ಯವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next