Advertisement

ಜಡೇಜಾಗೆ ಸಮಸ್ಯೆಯಾಗಿದ್ದೇ ಧೋನಿ; ಸಿಎಸ್ ಕೆಯಲ್ಲಿ ಧೋನಿಯದ್ದೇ ಮಾತು, ಜಡ್ಡು ನಗಣ್ಯ!

12:25 PM May 01, 2022 | Team Udayavani |

ಮುಂಬೈ: ಅನಿರೀಕ್ಷಿತ ಬೆಳವಣಿಗೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವಕ್ಕೆ ರವೀಂದ್ರ ಜಡೇಜಾ ರಾಜೀನಾಮೆ ನೀಡಿದ್ದಾರೆ. ನಾಯಕನಾಗಿ ಮೊದಲ ಸೀಸನ್ ನಲ್ಲೇ ನಿರೀಕ್ಷಿತ ಪ್ರದರ್ಶನ ತೋರಲು ವಿಫಲರಾದ ಜಡೇಜಾ ನಾಯಕತ್ವವನ್ನು ಮತ್ತೆ ಮಹೇಂದ್ರ ಸಿಂಗ್ ಧೋನಿಗೆ ನೀಡಿದ್ದಾರೆ.

Advertisement

ಸದ್ಯ ಸಾಗುತ್ತಿರುವ ಐಪಿಎಲ್‌ನಲ್ಲಿ ಆಡಿದ ಎಂಟು ಪಂದ್ಯಗಳಲ್ಲಿ ಆರರಲ್ಲಿ ಸೋಲನ್ನು ಕಂಡಿರುವ ಹಿನ್ನೆಲೆಯಲ್ಲಿ ರವೀಂದ್ರ ಜಡೇಜ ಅವರು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಹೀಗಾಗಿ ಈ ಕೂಟದ ಇನ್ನುಳಿದ ಪಂದ್ಯಗಳಿಗೆ ಮಹೇಂದ್ರ ಸಿಂಗ್‌ ಧೋನಿ ಅವರು ತಂಡವನ್ನು ಮುನ್ನಡೆಸಲಿದ್ದಾರೆ.

ತನ್ನ ಆಟಕ್ಕೆ ಹೆಚ್ಚಿನ ಗಮನ ಹರಿಸುವ ಉದ್ದೇಶದಿಂದ ಜಡೇಜ ಅವರು ನಾಯಕತ್ವ ತೊರೆಯಲು ನಿರ್ಧರಿಸಿದ್ದಾರೆ ಮತ್ತು ತಂಡವನ್ನು ಮುನ್ನಡೆಸಲು ಧೋನಿ ಅವರಲ್ಲಿ ಕೇಳಿಕೊಂಡಿದ್ದಾರೆ. ಜಡೇಜ ಅವರ ಮನವಿಗೆ ಸಮ್ಮತಿ ಸೂಚಿಸಿರುವ ಧೋನಿ ಅವರು ತಂಡವನ್ನು ಮುನ್ನಡೆಸಲು ಒಪ್ಪಿಕೊಂಡಿದ್ದಾರೆ ಎಂದು ಸಿಎಸ್ಕೆ ಪ್ರಕಟಣೆ ತಿಳಿಸಿದೆ.

ಆದರೆ ಪ್ರಕಟಣೆಗೆ ವ್ತತಿರಿಕ್ತವಾದ ಸುದ್ದಿಯೊಂದು ಸಿಎಸ್ ಕೆ ಮೂಲಗಳಿಂದ ಬರುತ್ತಿದೆ. ಸಿಎಸ್ ಕೆ ಪ್ರಕರಣದ ಪ್ರಕಾರ, ಜಡೇಜಾ ಅವರು ನಿರ್ಧಾರ ತೆಗೆದುಕೊಂಡಿದ್ದಾರೆಂದು ತೋರುತ್ತದೆ. ಆದರೆ ಧೋನಿ ಅವರ ಒಪ್ಪಿಗೆಯಿಲ್ಲದೆ ಸಿಎಸ್‌ಕೆಯಲ್ಲಿ ಏನೂ ನಡೆಯುವುದಿಲ್ಲ ಎಂದು ವರದಿ ಹೇಳುತ್ತಿದೆ.

“ಎಂಎಸ್‌ ಧೋನಿ ಅನುಮೋದನೆಯಿಲ್ಲದೆ ಸಿಎಸ್‌ಕೆಯಲ್ಲಿ ಏನೂ ಆಗುವುದಿಲ್ಲ. ಕ್ರಿಕೆಟ್ ವಿಷಯಕ್ಕೆ ಬಂದಾಗ ಅವರೇ ಮೊದಲ, ಎರಡನೇ, ಮೂರನೇ ಮತ್ತು ಕೊನೆಯ ಮಾತು. ತಂಡದ ನಾಯಕ ಯಾರು ಎಂಬುದು ಮುಖ್ಯವಲ್ಲ. ಐಪಿಎಲ್‌ ಆರಂಭಕ್ಕೆ ಎರಡು ತಿಂಗಳ ಮೊದಲು ಧೋನಿ ನಿರ್ಗಮಿಸುವ ನಿರ್ಧಾರವನ್ನು ಸಿಎಸ್‌ ಕೆ ಘೋಷಿಸಿದ್ದರೆ, ಅದು ಸಂಭಾವ್ಯ ಪ್ರಾಯೋಜಕರ ನೈತಿಕತೆಯ ಮೇಲೆ ಪರಿಣಾಮ ಬೀರುತ್ತಿತ್ತು. ಇದೇ ಕಾರಣಕ್ಕೆ ಪ್ರಾಯೋಜಕರು ಎಲ್ಲರೂ ಲಾಕ್ ಆದ ಬಳಿಕ ಘೋಷಣೆ ಮಾಡಿದ್ದಾರೆ” ಎಂದು ಬಿಸಿಸಿಐ ಇನ್ ಸೈಡ್ ಮಾಹಿತಿ ಹೇಳಿದ್ದಾರೆ.

Advertisement

ಇದನ್ನೂ ಓದಿ:ಐಪಿಎಲ್‌ ಫಸ್ಟ್‌ ಮ್ಯಾಚ್‌-2013: ಡೇರ್‌ಡೆವಿಲ್ಸ್‌ ಮೇಲೆ ನೈಟ್‌ರೈಡರ್ ಸವಾರಿ

ಸಿಎಸ್‌ ಕೆಯಲ್ಲಿ ಧೋನಿಯ ಪ್ರಾಬಲ್ಯದಿಂದಾಗಿ, ಪ್ರಸ್ತುತ ಐಪಿಎಲ್ ನಾಯಕರಲ್ಲಿ ಒಬ್ಬರು ಚೆನ್ನೈ ತಂಡವನ್ನು ಮುನ್ನಡೆಸಲು ನಿರಾಕರಿಸಿದರು.

ಟೂರ್ನಮೆಂಟ್‌ನಲ್ಲಿ ಮತ್ತೊಂದು ಫ್ರಾಂಚೈಸಿಯನ್ನು ಮುನ್ನಡೆಸುತ್ತಿರುವ ಭಾರತದ ಪ್ರಮುಖ ಆಟಗಾರರಲ್ಲಿ ಒಬ್ಬರಿಗೆ ಸಿಎಸ್ ಕೆ ಫ್ರಾಂಚೈಸಿ ನಾಯಕತ್ವದ ಆಫರ್ ನೀಡಿತ್ತು. ಆದರೆ ಧೋನಿ ಜೊತೆಗೆ ಜಂಟಿ ನಾಯಕತ್ವದ ಆಫರ್ ನ್ನು ಆ ಆಟಗಾರನು ನಿರಾಕರಿಸಿದನು. ಒಂದು ವೇಳೆ ತಂಡವು ವಿಫಲವಾದರೆ, ಆಪಾದನೆಯು ಆತನ ಮೇಲಿರುತ್ತದೆ ಆದರೆ ತಂಡ ಗೆದ್ದರೆ, ಪುರಸ್ಕಾರಗಳು ಧೋನಿಗೆ ಸಲ್ಲುತ್ತವೆ ಎಂದು ಆತ ಕಾರಣ ನೀಡಿದ್ದ ಎಂದು ಪಿಟಿಐ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next