Advertisement
ಹಾಗಾದರೆ ಇವುಗಳನ್ನು ಮುಚ್ಚುವ ಬದಲು ಇಂಗು ಗುಂಡಿ ಯ ಮೂಲ ಕ ಜಲ ಮರು ಪೂರಣ ಮಾಡಿ ಮುಂದಿನ ದಿನಗಳಲ್ಲಿ ಬಳಸಬಾರದೇ ಎಂಬ ಪ್ರಶ್ನೆ ಮೂಡಿದೆ.
ಜಿಲ್ಲೆಯಲ್ಲಿ ಕೊರೆಯಲಾದ ಕೊಳವೆ ಬಾವಿಗಳು ಈ ಹಿಂದೆ 4 ಇಂಚು, ತದನಂತರ 6 ಇಂಚು ಆಗಿದ್ದು, ಈಗ ಸುಮಾರು 15 ವರ್ಷದಿಂದ 6.5 ಇಂಚು ವ್ಯಾಸ ಹೊಂದಿರುತ್ತವೆ. ಇದರಿಂದ ಇದರೊಳಗೆ ಮಗು ಬೀಳುವ ಸಾಧ್ಯತೆ ಕಡಿಮೆ. ಈ ಮಾದರಿಯನ್ನು ಹೆಚ್ಚಿನ ರಾಜ್ಯದಲ್ಲಿ ಉಪ ಯೋಗಿ ಸಿದರೆ ಒಳ್ಳೆಯದು. ಇಂಥ ನೀರು ಸಿಗದ ಕೊಳವೆ ಬಾವಿಗಳನ್ನು ಮುಚ್ಚಲಾ ಗುತ್ತಿದೆ. ಹಲವು ಕಡೆ ಕೃಷಿಕರು ತಮ್ಮ ಬತ್ತಿದ ಕೊಳವೆ ಬಾವಿಗಳಿಗೆ ಜಲ ಮರುಪೂರಣ ಮಾಡಿ ಗೆದ್ದ ಪ್ರಸಂಗಗಳಿವೆ. ಮಂಗಳೂರು ತಾಲೂಕು ಅಲ್ಲದೇ ಜಿಲ್ಲೆಯ ಹಲವೆಡೆ ಹಲವು ಕೃಷಿಕರು ಈ ಪ್ರಯೋಗದಲ್ಲಿ ನಿರತರಾಗಿದ್ದಾರೆ. ಎರಡು ವರ್ಷ ನೀರಿಲ್ಲದೇ ಸೋತವರೂ ಕೊನೆಗೆ ಈ ಉಪಾಯಕ್ಕೆ ಮೊರೆ ಹೋದವರೂ ಇದ್ದಾರೆ.
Related Articles
ಈ ಪ್ರಸಂಗಗಳನ್ನೇ ಉದಾಹರಣೆಯಾಗಿಟ್ಟುಕೊಂಡು ಜಿ.ಪಂ. ಮತ್ತು ತಾ.ಪಂ. ಸ್ಥಳೀಯ ಕೆಟ್ಟು ಹೋದ ಬೋರ್‌ವೆಲ್‌ಗಳಿಗೆ ಜಲ ಮರುಪೂರಣ ಮಾಡಿದರೆ ಪರ್ಯಾಯ ಜಲಮೂಲಗಳಿಗೆ ವೆಚ್ಚ ಮಾಡುವ ಸಮಸ್ಯೆ ಬಗೆಹರಿಯಲಿದೆ. ಇದರೊಂದಿಗೆ ಸ್ಥಳೀಯವಾಗಿ ಜಲ ಸಂಪನ್ಮೂಲವನ್ನು ಹೊಂದಿಸುವಲ್ಲಿ ಯಶಸ್ವಿಯಾದಂತಾಗುತ್ತದೆ. ಇದರಿಂದ ಅಪಾಯವೂ ತಪ್ಪಲಿದೆ ಹಾಗೂ ಸಮರ್ಪಕ ನಿರ್ವಹಣೆಯೂ ಸಾಧ್ಯವಾಗಲಿದೆ. ಯಾಕೆಂದರೆ ಅಂತರ್ಜಲ ಕುಸಿತವೇ ಈ ಕೊಳವೆಬಾವಿಗಳು ಬತ್ತಲು ಕಾರಣ. ಹಾಗಾಗಿ ಸಮೀಪದಲ್ಲಿರುವ ಮನೆಯ ಛಾವಣಿಗೆ ಪೈಪ್ ಹಾಕಿ ಸೋಸುವ ಮೂಲಕ ನೇರ ಕೊಳವೆ ಬಾವಿಗೆ ಬಿಟ್ಟರೆ ಅಂತರ್ಜಲ ವೃದ್ಧಿಗೆ ಕಾರಣವಾಗಲಿದೆ. ಗ್ರಾಮ ಪಂಚಾಯತ್ ಹಾಗೂ ಖಾಸಗಿ ಕೊಳವೆ ಬಾವಿ ಕೊರೆದವರೂ ಇದರತ್ತ ಆಲೋಚಿಸುವುದು ಸೂಕ್ತ ಎನ್ನುತ್ತಾರೆ ಪರಿಣಿತರು.
Advertisement
ನೀರಿನ ಗಣಿತನಾವು ಜೀನ್ಸ್ ಪ್ಯಾಂಟ್ ಶರ್ಟ್ ಹಾಕಿಕೊಂಡು ಸಂಭ್ರಮಿಸುವುದು ಇದ್ದೇ ಇದೆ. ಆದರೆ, ಅವುಗಳು ಕಬಳಿಸುವ ನೀರಿನ ಪ್ರಮಾಣ ಎಷ್ಟು ಗೊತ್ತೇ? ಒಂದು ಅಂದಾಜಿನ ಪ್ರಕಾರ ಒಂದು ಜೊತೆ ಜೀನ್ಸ್ ತಯಾರಿಸಲು ಸುಮಾರು ಹತ್ತು ಸಾವಿರ ಲೀಟರ್ ನೀರು ಬೇಕು. ಹೀಗೂ ಉಳಿಸಿ
ಮಕ್ಕಳು ನೀರಿನಲ್ಲಿ ಆಡುವುದನ್ನು ಹೆಚ್ಚು ಇಷ್ಟಪಡುತ್ತಾರೆ. ಇದಕ್ಕೆ ಬೇಕಾದ ರೀತಿಯ ಆಟಿಕೆಗಳು ಮಾರುಕಟ್ಟೆಯಲ್ಲಿವೆ. ಮಕ್ಕಳು ಆಟವಾಡುವಾಗ ಹೆಚ್ಚಿನ ನೀರು ಪೋಲು ಮಾಡುತ್ತಾರೆ. ಹೀಗಾಗಿ ಮಕ್ಕಳಿಗೆ ನೀರು ತುಂಬಿಸಿ ಆಡಬಹುದಾದ ಆಟಿಕೆಗಳನ್ನು ತಂದುಕೊಡಬೇಡಿ. ಇದರಿಂದ ಸಾಕಷ್ಟು ನೀರನ್ನು ಉಳಿಸಬಹುದು. ಅರ್ಥ ಹನಿ
ಪ್ರತಿ ಬಾರಿ ಸೋತಾಗಲೂ ನೆರವಿಗೆ ಬರುವುದು ನೀರೇ. ಹಾಗಾಗಿ ನೀರನ್ನು ಸಂರಕ್ಷಿಸಿ. 43%
ಕೀನ್ಯಾದಲ್ಲಿರುವ 44 ಮಿಲಿಯನ್ ಜನರಲ್ಲಿ ಸುಮಾರು 18 ಮಿಲಿಯನ್ ಅಂದರೆ ಶೇ. 43ರಷ್ಟು ಮಂದಿಗೆ ಪರಿಶುದ್ಧವಾದ ಕುಡಿಯುವ ನೀರು ಸಿಗುತ್ತಿಲ್ಲ. 2,110
ನಾವು ಹೆಚ್ಚಾಗಿ ಬಳಸುವ ಲೆದರ್ ಶೂ ನ ಒಂದು ಜತೆ ತಯಾರಿಬೇಕಾದರೆ 2,110 ಗ್ಯಾಲನ್ ನೀರು ಬೇಕಾಗುತ್ತದೆ.