Advertisement

ರಿಬ್ಬನ್‌ನ್ನು ಕತ್ತರಿಸಿ ಏಕೆ ಉದ್ಘಾಟನೆ ಮಾಡಬಾರದು?

12:20 AM Jan 19, 2019 | |

ಯಾವುದೇ ಒಂದು ವಸ್ತುವನ್ನು ಕತ್ತರಿಸುವುದು ವಿಧ್ವಂಸಕ ವೃತ್ತಿಯ ದ್ಯೋತಕವಾಗಿದೆ. ಸಾಮಾನ್ಯ ವ್ಯಕ್ತಿಗಳು ರಾಜಸಿಕ ಮತ್ತು ತಾಮಸಿಕ ವೃತ್ತಿಯವರಾಗಿರುತ್ತಾರೆ. ರಿಬ್ಬನ್‌ ಕತ್ತರಿಸಿ ಉದ್ಘಾಟನೆ ಮಾಡುವಾಗ ಅವರಲ್ಲಿನ ಅಹಂಭಾವವು ಜಾಗೃತವಾಗುತ್ತದೆ. ಅವರ ದೇಹದಿಂದ ಪ್ರಕ್ಷೇಪಿತವಾಗುವ ರಜ-ತಮಾತ್ಮಕ ಲಹರಿಗಳಿಂದಾಗಿ ಅವರ ಸುತ್ತಲೂ ಇರುವ ವಾಯುಮಂಡಲ ಮತ್ತು ಅವರ ಕೈಯಲ್ಲಿರುವ ಕತ್ತರಿಯೂ ಸಹ ರಜ-ತಮಕಣಗಳಿಂದ ತುಂಬಿಹೋಗುತ್ತದೆ. ಇಂತಹ ಕತ್ತರಿಯ ಸ್ಪರ್ಶದಿಂದ ರಿಬ್ಬನ್‌ನ ಸುತ್ತಲೂ ಇರುವ ವಾಯುಮಂಡಲದಲ್ಲಿನ ರಜ-ತಮ ಕಣಗಳಿಗೆ ವೇಗವು ಪ್ರಾಪ್ತವಾಗುತ್ತದೆ ಮತ್ತು ಕತ್ತರಿಯಿಂದ ರಿಬ್ಬನ್‌ಅನ್ನು ಕತ್ತರಿಸುವುದರಿಂದ ಕಾರಂಜಿಯಂಥ ರಜ-ತಮಾತ್ಮಕ ಗತಿಮಾನ ಲಹರಿಗಳು ಸಂಪೂರ್ಣ ವಾಯುಮಂಡಲದಲ್ಲಿ ಪ್ರಕ್ಷೇಪಿತವಾಗುತ್ತವೆ. ಆದುದರಿಂದ ರಿಬ್ಬನ್‌ನ್ನು ಕತ್ತರಿಸಿ ಉದ್ಘಾಟನೆಯನ್ನು ಮಾಡಬಾರದು.

Advertisement

(ಆಧಾರ : ಸನಾತನ ಸಂಸ್ಥೆಯ “ಕೌಟುಂಬಿಕ ಮತ್ತು ಸಾಮಾಜಿಕ ಧಾರ್ಮಿಕ ಕೃತಿಗಳ ಹಿನ್ನೆಲೆಯ ಶಾಸ್ತ್ರ’)

Advertisement

Udayavani is now on Telegram. Click here to join our channel and stay updated with the latest news.

Next