Advertisement
ಸ್ಟೇಟ್‌ಬ್ಯಾಂಕ್ ಬಸ್ ನಿಲ್ದಾಣದ ಎದುರಿನ ರಸ್ತೆ ಸಹಿತ ನಗರದ ಅನೇಕ ಮುಖ್ಯರಸ್ತೆಗ ಳಲ್ಲಿ ವಾಹನಗಳನ್ನು ಬೇಕಾಬಿಟ್ಟಿಯಾಗಿ ನಿಲುಗಡೆ ಮಾಡುತ್ತಿರುವುದರಿಂದ ಇತರ ವಾಹನಗಳ ಸಂಚಾರಕ್ಕೆ ತೊಡಕಾಗುತ್ತಿದೆ. ಹೆಚ್ಚಿನ ಕಟ್ಟಡಗಳು ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಂಡಿಲ್ಲ. ಸಾರ್ವಜನಿಕ ರಸ್ತೆಯೇ ಪಾರ್ಕಿಂಗ್ ಸ್ಥಳವಾಗಿ ಆಗಿ ಮಾರ್ಪಟ್ಟಿದೆ. ಇತ್ತೀಚೆಗೆ ರಸ್ತೆಗಳ ವಿಸ್ತರಣೆ ನಡೆದಿದ್ದರೂ ಅದರಿಂದ ವಾಹನಗಳ ಸಂಚಾರಕ್ಕೆ ಹೆಚ್ಚು ಪ್ರಯೋಜನವಾಗಿಲ್ಲ. ಇಂತಹ ರಸ್ತೆಗಳಲ್ಲಿ ವಾಹನಗಳ ಪಾರ್ಕಿಂಗ್ ಮಾಡುತ್ತಿರುವುದು ಇದಕ್ಕೆ ಮುಖ್ಯ ಕಾರಣ.
Related Articles
Advertisement
ಪಾಲಿಕೆ ಟೈಗರ್ ಕಾರ್ಯಾಚರಣೆ ಹೆಸರಿ ನಲ್ಲಿ ಬೀದಿಬದಿ ವ್ಯಾಪಾರಸ್ಥರನ್ನು ತೆರವು ಮಾಡಿದೆ. ಆದರೆ ಈ ಹಿಂದೆ ರಸ್ತೆಯಲ್ಲಿ, ನೋ ಪಾರ್ಕಿಂಗ್ ಸ್ಥಳಗಳಲ್ಲಿ ನಿಲುಗಡೆ ಮಾಡುತ್ತಿದ್ದ ವಾಹನಗಳ ತೆರವಿಗೆ ಪೊಲೀಸರು ನಡೆಸುತ್ತಿದ್ದ ಟೈಗರ್ ಕಾರ್ಯಾಚರಣೆ ನಿಂತಿದೆ. ಈಗ ನಿಯಮ ಮೀರಿ ನಿಲುಗಡೆಯಾಗುವ ವಾಹನಗಳ ಚಕ್ರಗಳಿಗೆ ಲಾಕ್ ಹಾಕಿ ಕೇಸು ದಾಖಲಿಸುವ, ಅಂತಹ ವಾಹನಗಳನ್ನು ಠಾಣೆಗೆ ಎಳೆದೊಯ್ಯುವ (ಟೋಯಿಂಗ್) ಕಾರ್ಯಾಚರಣೆ ಯಾಕೆ ನಡೆಸುತ್ತಿಲ್ಲ ಎಂಬುದು ಕೆಲವು ಬೀದಿಬದಿ ವ್ಯಾಪಾರಸ್ಥರು, ಪಾದಚಾರಿಗಳ ಪ್ರಶ್ನೆ.
ಆಟೋರಿಕ್ಷಾ ನಿಲುಗಡೆ
ಅನಧಿಕೃತ ಆಟೋರಿಕ್ಷಾ ಪಾರ್ಕಿಂಗ್ ಕೂಡ ಹೆಚ್ಚಾಗುತ್ತಿದೆ. ರಸ್ತೆ ಬದಿಯಲ್ಲಿ ಸ್ವಲ್ಪವೇ ಜಾಗ ಸಿಕ್ಕಿದರೂ ಅಲ್ಲಿ ಆಟೋ ರಿಕ್ಷಾಗಳನ್ನು ನಿಲುಗಡೆ ಮಾಡಲಾಗುತ್ತಿದೆ. ಈಗ ತೆರವುಗೊಳಿಸುವ ಬೀದಿ ಬದಿ ವ್ಯಾಪಾರದ ಸ್ಥಳದಲ್ಲಿ ಕೆಲವೆಡೆ ಆಟೋ ರಿಕ್ಷಾಗಳು ನಿಲುಗಡೆಯಾಗುತ್ತಿವೆ. ಇದ ರಿಂದ ತೊಂದರೆಯಾಗುತ್ತಿದೆ. ಇದನ್ನು ಅಧಿಕಾರಿಗಳು ಯಾಕೆ ಗಮನಿಸುತ್ತಿಲ್ಲ ಎಂಬುದು ಕೂಡ ಸಾರ್ವಜನಿಕರ ದೂರು.