Advertisement
ದಾವಣಗೆರೆಯಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮಹಿಳೆಯರನ್ನು ಓದಿಸಿ, ರಕ್ಷಿಸಿ ಎಂದು ಹೇಳುವ ಮೋದಿ, ಬಲಾತ್ಕಾರಕ್ಕೊಳಗಾದ ಮಹಿಳೆಯರ ಬಗ್ಗೆ ಏನನ್ನೂ ಮಾತನಾಡಿಲ್ಲ ಎಂದರು.
Related Articles
Advertisement
ಕೋಟ್ಯಧಿಪತಿಗಳ ಕೈಯಲ್ಲೇ ಇರುವ ಮಾಧ್ಯಮಗಳ ಮೂಲಕ ವಿಪಕ್ಷಗಳನ್ನು ಹತ್ತಿಕ್ಕುವ ಕೆಲಸವೂ ಮಾಡುತ್ತಿದೆ. ಚುನಾವಣೆ ಸಮಯದಲ್ಲಿ ದೇಶದ ಎರಡು ರಾಜ್ಯಗಳ ಮುಖ್ಯಮಂತ್ರಿಗಳನ್ನು ಜೈಲಿನಲ್ಲರಿಸಿದೆ. ಎರಡ್ಮೂರು ದಿನಗಳ ಹಿಂದೆ ಗುಜರಾತಿಗೆ ಹೋದಾಗ ಅಲ್ಲಿ ಪ್ರಧಾನಿ ಮೋದಿಯವರು, ಕಾಂಗ್ರೆಸ್‌ನವರು ಅಧಿಕಾರಕ್ಕೆ ಬಂದರೆ ಎಕ್ಸರೇ ಯಂತ್ರ ತಂದು ತಮ್ಮ ಮನೆಯಲ್ಲಿರುವ ಅರ್ಧ ಸಂಪತ್ತು ಕಿತ್ತುಕೊಳ್ಳುತ್ತಾರೆ. ನಿಮ್ಮ ಮನೆಯಲ್ಲಿ ಎರಡು ಹಸು ಇದ್ದರೆ ಒಂದು ಹಸು ಒಯ್ಯುತ್ತಾರೆ ಎಂದು ಸುಳ್ಳು ಹೇಳಿದ್ದಾರೆ. ಒಬ್ಬ ಪ್ರಧಾನಿಯಾದವರು ರಾಜಕೀಯಕ್ಕಾಗಿ ಈ ರೀತಿ ಸುಳ್ಳು ಹೇಳುವುದನ್ನು ನೀವು ನಿರೀಕ್ಷಿಸಿದ್ದರಾ ಎಂದು ಪ್ರಶ್ನಿಸಿದರು.
ಹತ್ತು ವರ್ಷ ಆಡಳಿತ ನಡೆಸಿ ಜನರೆದುರು ಬಂದ ಪ್ರಧಾನಿಯವರು ತಮ್ಮ ಅವಧಿಯಲ್ಲಿ ಎಷ್ಟು ಶಾಲಾ-ಕಾಲೇಜು ತೆರೆದೆವು, ಎಷ್ಟು ರಸ್ತೆ ಅಭಿವೃದ್ಧಿ ಮಾಡಿದೆವು, ಎಷ್ಟು ಆಸ್ಪತ್ರೆ ಅಭಿವೃದ್ಧಿ ಪಡಿಸಿದೆವು ಎಂದು ತಿಳಿಸಬೇಕಿತ್ತು. ಆದರೆ, ಮೋದಿಯವರು ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ. ಏಕೆಂದರೆ ಅವರು ಈ ವಿಚಾರವಾಗಿ ಅಭಿವೃದ್ಧಿಯೇ ಮಾಡಿಲ್ಲ ಎಂದರು.
ಈಗ ಜನರಿಗೆ ಹೊಸ ಪ್ರಧಾನ ಮಂತ್ರಿಯನ್ನು ಆಯ್ಕೆ ಮಾಡಿಕೊಳ್ಳುವ ಸಮಯ ಬಂದಿದೆ. ಈ ದೇಶ ನಿಮ್ಮದು. ಈ ಸಂಪತ್ತು ನಿಮ್ಮದು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಮ್ಮ ಸಂಪತ್ತನ್ನು ನಿಮಗೆ ಗ್ಯಾರಂಟಿ ಯೋಜನೆಗಳ ರೂಪದಲ್ಲಿ ವಾಪಸ್ ನೀಡಲಿದೆ. ನಿಮಗಾಗಿ, ನಿಮ್ಮ ಜೀವನ ಬದಲಾವಣೆಗಾಗಿ, ದೇಶವನ್ನು ಬಲಿಷ್ಠಗೊಳಿಸುವುದಕ್ಕಾಗಿ ಈ ಬಾರಿ ಯೋಚಿಸಿ ಮತ ಚಲಾಯಿಸಿ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.