ಬೀಜಿಂಗ್:ಚೀನದ ಮುಂದಿನ ಪ್ರಧಾನಿಯಾಗಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ನಿಕಟವರ್ತಿ ಲಿ ಕಿಯಾಂಗ್ ನೇಮಕಗೊಳ್ಳಲಿದ್ದಾರೆ.
Advertisement
ಆ ದೇಶದ ಪ್ರಮುಖ ವಾಣಿಜ್ಯ ವಹಿವಾಟು ನಡೆಯುವ ನಗರ ಶಾಂಘೈನಲ್ಲಿ ಎರಡು ತಿಂಗಳ ಕಾಲ ಕಡ್ಡಾಯವಾಗಿ ಲಾಕ್‌ಡೌನ್ ಅನ್ನು ಕಟ್ಟುನಿಟ್ಟಾಗಿ ಜಾರಿಯಾಗುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
ಚೀನದ ಷೇರು ಪೇಟೆ ನಿಯಂತ್ರಣ ಪ್ರಾಧಿಕಾರದ ಅಧಿಕಾರಗಳಿಗೆ ಕತ್ತರಿ ಪ್ರಯೋಗ ಮಾಡಿ, ಅದನ್ನು ದುರ್ಬಲಗೊಳಿಸುವಲ್ಲಿಯೂ ಲಿ ಕಿಯಾಂಗ್ ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಲಾಗುತ್ತಿದೆ. ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜತೆಗೆ ಅವರು ಅತ್ಯಂತ ಆಪ್ತರಾಗಿ ಇರುವುದೇ ಪ್ರಧಾನಿ ಹುದ್ದೆಗೆ ನಿಯುಕ್ತಿಗೊಳ್ಳಲು ಕಾರಣ.