Advertisement

ಪಾಕ್‌ಗೆ ಏಕೆ ಕಾಶ್ಮೀರ? 

06:42 AM Nov 15, 2018 | Team Udayavani |

ಲಂಡನ್‌/ಲಾಹೋರ್‌: “ಪಾಕಿಸ್ಥಾನಕ್ಕೆ ಈಗ ಹೊಂದಿರುವ ನಾಲ್ಕು ಪ್ರಾಂತ್ಯಗಳನ್ನೇ ಸಂಭಾ ಳಿ ಸಲು ಸಾಧ್ಯವಾಗುತ್ತಿಲ್ಲ. ಹೀಗಿದ್ದ ಮೇಲೆ ಜಮ್ಮು ಮತ್ತು ಕಾಶ್ಮೀರವೇಕೆ ಬೇಕು’?  ಹೀಗೆಂದು ಪಾಕಿಸ್ಥಾನದ ಮಾಜಿ ಕ್ರಿಕೆಟಿಗ ಶಾಹಿದ್‌ ಅಫ್ರಿದಿ ಪ್ರಶ್ನೆ ಮಾಡಿದ್ದಾರೆ. ಅಫ್ರಿದಿ ಅವರ ಹೇಳಿಕೆ ಪಾಕಿಸ್ಥಾನದಲ್ಲಿರುವ ಇಮ್ರಾನ್‌ ಖಾನ್‌ ನೇತೃತ್ವದ ಸರಕಾರಕ್ಕೆ ಇರಿಸು ಮುರಿಸು ಉಂಟು ಮಾಡುವುದು ಖಚಿತ ವಾಗಿದೆ. ಪಾಕಿ ಸ್ತಾನಕ್ಕೆ ಕಾಶ್ಮೀರ ಬೇಡ ವೆಂದು ಹೇಳಿದ ಅಫ್ರಿದಿ, ಭಾರತಕ್ಕೆ ಅದನ್ನು ನೀಡಬೇಡಿ. ಅದನ್ನು ಸ್ವತಂತ್ರ ರಾಷ್ಟ್ರ ವನ್ನಾಗಿಸಿ ಎಂದೂ ಹೇಳಿದ್ದಾರೆ. ಮಂಗಳವಾರ ಲಂಡನ್‌ನ ಬ್ರಿಟಿಷ್‌ ಸಂಸತ್‌ನಲ್ಲಿ ವಿದ್ಯಾರ್ಥಿ ಗಳನ್ನುದ್ದೇಶಿಸಿ ಮಾತನಾಡುತ್ತಿದ್ದರು. ಪಾಕಿ ಸ್ತಾನ ಸರಕಾರ ತನ್ನ ಜನರನ್ನೇ ಒಗ್ಗಟ್ಟಿನಲ್ಲಿ ಇರಿಸಲು ವಿಫ‌ಲವಾಗಿದೆ ಮತ್ತು ಭಯೋ ತ್ಪಾದಕರಿಂದ ರಕ್ಷಣೆ ನೀಡಲು ಸಾಧ್ಯವಾಗು ತ್ತಿಲ್ಲ ಎಂದು ಹೇಳಿದ್ದಾರೆ. ಕಾಶ್ಮೀರದಲ್ಲಿ ಜನರು ಸಾಯುತ್ತಿರುವುದು ನಿಲ್ಲಬೇಕು ಎಂದಿ   ದ್ದಾರೆ. ಇದರಿಂದ ನೋವಾಗುತ್ತದೆ ಎಂದರು.

Advertisement

ಇದೇ ವೇಳೆ ಭಾರತಕ್ಕೆ ಶೀಘ್ರದಲ್ಲಿಯೇ “ಪರಮಾಪ್ತ ಸ್ಥಾನ ರಾಷ್ಟ್ರ’ದ ಸ್ಥಾನ ಮಾನ ನೀಡುವ ಇರಾದೆ ಪಾಕಿಸ್ಥಾನ ಸರಕಾರಕ್ಕೆ ಇಲ್ಲವೆಂದು ಪ್ರಧಾನಿ ಇಮ್ರಾನ್‌ ಖಾನ್‌ರ ನಿಕಟವರ್ತಿ ಅಬ್ದುಲ್‌ ರಜಾಕ್‌ ದಾವೂದ್‌ ತಿಳಿಸಿದ್ದಾರೆ. ಚೀನ ಸೇರಿದಂತೆ ಇತರ ರಾಷ್ಟ್ರಗಳ ಜತೆ ಮುಕ್ತ ವ್ಯಾಪಾರ ನಡೆಸುವ ನಿಟ್ಟಿನಲ್ಲಿ ಮಾತುಕತೆ ನಡೆಸುತ್ತಿದೆ ಎಂದು ಹೇಳಿದ್ದಾರೆ. ಡಬ್ಲೂéಟಿಒ ನಿಯಮ ಪ್ರಕಾರ ಪ್ರತಿಯೊಂದು ಸದಸ್ಯ ರಾಷ್ಟ್ರವೂ ಈ ನಿಯಮ ಪಾಲಿಸಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next