ನವದೆಹಲಿ:ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸಿರುವ ಭಾರತದ ನಿರ್ಧಾರದ ವಿರುದ್ಧ ಮಲೇಷ್ಯಾ ಪ್ರಧಾನಿ ಮೊಹಮ್ಮದ್ ಅಪಸ್ವರ ಎತ್ತಿದ ನಂತರ ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಮಲೇಷ್ಯಾವನ್ನು ಬಹಿಷ್ಕರಿಸಿ ಎಂಬ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದ್ದು, ಭಾರತೀಯರು ಮತ್ತು ಮಲೇಷಿಯಾ ನಡುವೆ ಟ್ವೀಟರ್ ಸಮರ ತಾರಕ್ಕೇರಿದೆ ಎಂದು ವರದಿ ತಿಳಿಸಿದೆ.
ಟ್ವೀಟರ್ ಸಮರ ಆರಂಭವಾಗಿದ್ದು ಹೇಗೆ?
ಜಮ್ಮು-ಕಾಶ್ಮೀರದ ಮೇಲೆ ಆಕ್ರಮಣ ನಡೆಸಿ ಭಾರತ ಅದನ್ನು ವಶಪಡಿಸಿಕೊಂಡಿದೆ ಎಂದು ಮಲೇಷ್ಯಾ ಪ್ರಧಾನಿ ಮಹತಿರ್ ಬಿನ್ ಮೊಹಮ್ಮದ್ ಟ್ವೀಟ್ ಮಾಡಿದ್ದು, ಬಳಿಕ ಭಾರತೀಯರು ಅದಕ್ಕೆ ಪ್ರತಿಕ್ರಿಯೆ ನೀಡುವ ಮೂಲಕ ಟ್ವೀಟ್ ಸಮರ ತಾರಕಕ್ಕೇರಲು ಕಾರಣವಾಗಿದೆ.
ವಿಶ್ವಸಂಸ್ಥೆಯಲ್ಲಿ ನಡೆದ ಮಹಾ ಅಧಿವೇಶನದಲ್ಲಿಯೂ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕಾಶ್ಮೀರದ ವಿಚಾರದಲ್ಲಿ ಭಾರತದ ವಿರುದ್ಧ ಆರೋಪಿಸಿದ್ದರು. ಮಲೇಷ್ಯಾ ಪ್ರಧಾನಿ ಮಹತಿರ್ ಕೂಡಾ ವಿಷಯ ಪ್ರಸ್ತಾಪಿಸಿದ್ದರು. ಪಾಕ್ ವಾದ ಬೆಂಬಲಿಸಿದ್ದ ಮಲೇಷ್ಯಾ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತೆ ಭಾರತಕ್ಕೆ ಸಲಹೆ ಕೂಡಾ ನೀಡಿತ್ತು.
Related Articles
ಜಮ್ಮು-ಕಾಶ್ಮೀರದ ಈ ವಿಚಾರದಲ್ಲಿ ಮಲೇಷ್ಯಾ ನಿಲುವು ಹೊರಬೀಳುತ್ತಿದ್ದಂತೆಯೇ ಟ್ವೀಟರ್ ನಲ್ಲಿ ಭಾರತೀಯರು #BoycottMalasia ಹ್ಯಾಶ್ ಟ್ಯಾಗ್ ಆರಂಭ ಮಾಡುವ ಮೂಲಕ ಟ್ರೆಂಡಿಂಗ್ ಆಗಿದೆ.
ಟ್ವೀಟ್ ಸಮರ ತಾರಕಕ್ಕೇರಿದ್ದು, ಮಲೇಷ್ಯಾದ ಟ್ವೀಟಿಗರು ಕೂಡಾ ಭಾರತವನ್ನು ಬಹಿಷ್ಕರಿಸಿ ಎಂಬ ಹ್ಯಾಶ್ ಟ್ಯಾಗ್ ಉಪಯೋಗಿಸಿ ಟ್ವೀಟ್ ಮಾಡುತ್ತಿರುವುದಾಗಿ ವರದಿ ತಿಳಿಸಿದೆ.