Advertisement
ಹೀಗೆ ಮಾರ್ಗದುದ್ದಕ್ಕೂ ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಾ ಸುಮಾರು 7 ಕಿ.ಮೀ. ದೂರ ಸಾಗಿದಾಗ ಮನಸ್ಸು ಮನಸೂರೆಗೊಳ್ಳುವ ದೃಶ್ಯವೊಂದು ಕಣ್ಣಮುಂದೆ ಕಂಡುಬಂತು.
Related Articles
Advertisement
ನಾವು ಬೆಳೆಯುತ್ತಾ ಹೋದ ಹಾಗೆ ಚಿಕ್ಕವರಿದ್ದಾಗ ನಮ್ಮ ಪ್ರತೀ ತಪ್ಪು, ಸರಿಗಳನ್ನು ತಿದ್ದಿ ತೀಡಿದ ಹೆತ್ತವರೇ ನಮಗೇ ಬೇಡವಾಗಿ ಬಿಟ್ಟಿದ್ದಾರೆ. ಅವರು ತೋರಿದ ಪ್ರೀತಿ, ಕಾಳಜಿಯನ್ನು ಹಿಂತಿರುಗಿ ನೀಡದಷ್ಟೂ ಅಬಲರಾಗಿ ಹೋಗಿದ್ದೇವೆ. ಮಗ ಎಲ್ಲಿಯಾದರೂ ಜಾತ್ರೆ, ಮದುವೆಗೆ ಸ್ನೇಹಿತರ ಜತೆ ಹೋಗುತ್ತಿದ್ದರೆ ಅಪ್ಪ ನೀನು ಬರೋದ್ ಬೇಡ, ಫ್ರೆಂಡ್ಸ್ ಬರ್ತಾರೆ ನನ್ ಬೈಕ್‌ಲ್ಲಿ ಅಂತ ಹೇಳಿಯೇ ಬಿಡುತ್ತೇವೆ.
ಅದೇ, ಚಿಕ್ಕವರಿದ್ದಾಗ ಅಪ್ಪ ನಮ್ಮನ್ನು ಬೈಕ್‌ನಲ್ಲಿ ಊರಿಡೀ ಸುತ್ತಾಡಿಸಿದ್ದೂ? ಈಗ ಅಪ್ಪನಿಗೆ ವಯಸ್ಸಾಗಿದೆ, ಅಪ್ಪನ ಜತೆಗೆ ಹೊರಗೆ ಹೋದ್ರೆ ಫ್ರೆಂಡ್ಸ್ ಗೇಲಿ ಮಾಡಿ ನಗ್ತಾರೆ ಅಲ್ವಾ…? ಬಾಲ್ಯದಲ್ಲಿ ಅವರು ನೀಡಿದ ಮಮತೆಯನ್ನು ಹಿಂದಿರುಗಿಸಲು ಅಷ್ಟೂ ತಾತ್ಸಾರ ಯಾಕೆ? ಪೇಟೆಯಲ್ಲಿ ಅಪ್ಪನ ಕೈ ಹಿಡಿದು ನಡೆಯಲು ಅಷ್ಟು ಅಂಜಿಕೆ ಯಾಕೆ? ಒಮ್ಮೆ ಯೋಚಿಸಿ ನಮ್ಮ ಕಿಂಚಿತ್ತು ಪ್ರೀತಿ, ಕಾಳಜಿ, ಗೌರವ ಆ ಜೀವಗಳಿಗೆ ಎಷ್ಟು ಖುಷಿ ಕೊಡಬಹುದಲ್ವಾ.
ಹೀಗೆ ಬಸ್ ಕಿಟಕಿಗೆ ಒರಗಿ ಯೋಚಿಸ್ತಾ ಇದ್ದವಳಿಗೆ ರಾಶಿ ರಾಶಿ ಬ್ಯಾಗ್‌ಗಳು ಬಂದು ಮೈ ಮೇಲೆ ಬಿದ್ದಾಗಲೇ ತಿಳಿದದ್ದು ಅದಾಗಲೆ 27 ಕಿ.ಮೀ. ಕಳೆದು ಮುಂದೆ ಸಾಗುತ್ತಿದ್ದೇನೆಂದು. ಇಲ್ಲಿಂದ ಇನ್ನೂ ನನ್ನ ಪಯಣದ ಹಾದಿ ದೂರವೇ ಇರುವುದರಿಂದ ನಿಟ್ಟುಸಿರು ಬಿಟ್ಟು ಅಲ್ಲಿಂದ ನಿದ್ರಾಲೋಕಕ್ಕೆ ಜಾರಿದೆ.
-ಶೈನಿತಾ ಸುಬ್ರಹ್ಮಣ್ಯ
ವಿವೇಕಾನಂದ ಕಾಲೇಜು ಪುತ್ತೂರು