Advertisement

ಅಪಾಯಕರ ಸೋಂಕು ನಿವಾರಕ ಸುರಂಗಗಳನ್ನೇಕೆ ನಿಷೇಧಿಸಿಲ್ಲ?

11:51 PM Sep 07, 2020 | mahesh |

ನವದೆಹಲಿ: ಕೋವಿಡ್ ಸೋಂಕು ನಿವಾರಕ ಸುರಂಗಗಳಲ್ಲಿ ಬಳಸಲಾಗುವ ರಾಸಾಯನಿಕಗಳು ಅಪಾಯಕಾರಿ ಎಂದು ತಿಳಿದಿದ್ದರೂ ಅವುಗಳನ್ನೇಕೆ ನಿಷೇಧಿಸಿಲ್ಲ ಎಂದು ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್‌ ಸೋಮವಾರ ಪ್ರಶ್ನಿಸಿದೆ.

Advertisement

ಇತ್ತೀಚೆಗೆ ಗುರುಸಿಮ್ರನ್‌ ಸಿಂಗ್‌ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌, ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾರನ್ನು ಹೀಗೆ ಪ್ರಶ್ನೆ ಮಾಡಿದೆ.

ಡಿಸ್‌ಇನ್‌ಫೆಕ್ಟೆಂಟ್‌ ಟನಲ್‌ಗಳಲ್ಲಿ ಬಳಸಲಾಗುವ ಸೋಂಕು ನಿವಾರಕ ದ್ರಾವಣಗಳು ಮಾನವರಿಗೆ ಅಪಾಯಕಾರಿ ಎಂಬ ಎಚ್ಚರಿಕೆ ಆರಂಭದಿಂದಲೂ ಕೇಳಿಬರುತ್ತಿತ್ತು. ಇಂಥ ಸುರಂಗಗಳ ಪರಿಣಾಮಕಾರಿತ್ವದ ಬಗ್ಗೆ ಅಧ್ಯಯನ ನಡೆಸಲು ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಿತ್ತು.

ಆ ಸಮಿತಿಯು ರಾಸಾಯನಿಕ ದ್ರಾವಣಗಳ ಬಳಕೆ, ಅಲ್ಟ್ರಾವೈಲಟ್‌ ಲೈಟ್‌ಗಳ ಅಪಾಯದ ಬಗ್ಗೆ ಎಚ್ಚರಿಸಿತ್ತು. ಇದು ಗೊತ್ತಿದ್ದರೂ ಇಂಥ ಸುರಂಗಗಳನ್ನು ನಿಷೇಧಿಸಿಲ್ಲವೇಕೆ ಎಂದು ಪ್ರಶ್ನಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next