Advertisement

ಅತ್ತೆಯೂ ಅಮ್ಮನಂತೆಯೇ ಎಂದು ಸೊಸೆ ಯಾಕೆ ಯೋಚಿಸಲ್ಲ?

01:41 AM Aug 18, 2019 | sudhir |

“ಎಲ್ರಿಗೂ ಭಾರ ಆಗಿºದ್ದೀನಿ ಸ್ವಾಮಿ. ಏನ್ಮಾಡಲಿ? ನಾನು ಹಳ್ಳಿ ಹೆಂಗುÕ, ಸಿಟಿಯವರ ಥರ ಬದುಕೋಕೆ ಬರಲ್ಲ. ರೈಲ್‌ಗೋ, ಬಸ್‌ಗೊà ಸಿಕ್ಕಿ ಸತ್ತೋಗೋಣ ಅನ್ಸುತ್ತೆ. ಹಂಗೇನಾದ್ರೂ ಆದ್ರೆ ಮಗನಿಗೆ ಕೆಟ್ಟ ಹೆಸ್ರು ಬರುತ್ತೆ. ಉಹುಂ, ಹಾಗಾಗಬಾರ್ಧು. ಸೊಸೆಗೆ ಯಾಕೆ ಅಂಥ ಸಿಟ್ಟೋ ಗೊತ್ತಾಗ್ತಿಲ್ಲ. ಅವರ ಮನೆಯವರು ಬಂದ್ರೆ ಚೆನ್ನಾಗಿ ಮಾತಾಡಿಸ್ತಾಳೆ. ನನ್ಕಡೆ ಮಾತ್ರ ತಿರುಗಿಯೂ ನೋಡೋದಿಲ್ಲ. ಮನೇಲಿ ಮಾತಾಡೊÕàರೇ ದಿಕ್ಕಿಲ್ಲ ಸ್ವಾಮೀ…’ ಅಂದಳು. ನಂತರ, ಸಂಕೋಚದಿಂದಲೇ ಒಂದು ಚೀಟಿ ಕೊಟ್ಟು “ಇದು ನನ್ನ ಮಗಳ ನಂಬರ್‌. ಅವಳಿಗೆ ನನ್ನ ಕಥೆ ಹೇಳಿ ಸ್ವಾಮಿ… ಸ್ವಲ್ಪ ದಿನ ಅವಳ ಮನೇಗಾದ್ರೂ ಹೋಗಿ ಬರಿ¤àನಿ’ ಅಂದಳು.

Advertisement

“ನಿಮಗೆ ಬಿ.ಪಿ. ಜಾಸ್ತಿಯಾಗಿದೆ. ಅದನ್ನು ಕಂಟ್ರೋಲ್‌ ಮಾಡಿಕೊಳ್ಳಿ. ಅದರರ್ಥ, ದಿನಕ್ಕೆರಡು ಮಾತ್ರೆ ನುಂಗಬೇಕು ಅಂತ ಹೇಳ್ತಿಲ್ಲ. ದಿನಾಲೂ ತಪ್ಪದೆ ನಾಲ್ಕು ಕಿಲೋಮೀಟರ್‌ ಬ್ರಿಸ್ಕ್ ವಾಕ್‌ ಮಾಡಿ. ಬೆಳಗ್ಗೆ ಅಥವಾ ರಾತ್ರಿ, ತಪ್ಪದೇ 40 ನಿಮಿಷ ಅಥವಾ 1 ಗಂಟೆ ಕಾಲ ವಾಕ್‌ ಮಾಡಿದ್ರೆ ಆರೇಳು ತಿಂಗಳಲ್ಲಿ ಬಿ.ಪಿ. ಕಂಟ್ರೋಲ್‌ಗೆ ಬರುತ್ತೆ. ಹೀಗೆ ಮಾಡಿದ ಮೇಲೆ, ಅವಸರದಲ್ಲೇ ಮನೆಗೆ ಹೋಗಿ ಕೆಲಸದಲ್ಲಿ ತೊಡಗಬೇಡಿ. ಕೂತು ಸ್ವಲ್ಪ ಹೊತ್ತು ರೆಸ್ಟ್‌ ತಗೊಳ್ಳಿ…

ಡಾಕ್ಟರು, ವಾರ್ನ್ ಮಾಡುವ ಧಾಟಿಯಲ್ಲಿಯೇ ಹೀಗೆಲ್ಲ ಹೇಳಿದರು. “ವಾರಕ್ಕೆ ಒಮ್ಮೆಯಾದರೂ ತಲೆನೋವು ಬರುತ್ತೆ. ಅದೇ ಸಮಯಕ್ಕೆ, ಐದಾರು ಬಾರಿ ವಾಂತಿಯಾಗುತ್ತೆ. ಯಾಕೆ ಹೀಗಾಗ್ತಿದೆ ಸ್ವಲ್ಪ ನೋಡಿ ಡಾಕ್ಟ್ರೇ…’ ಎಂದು ಶಾಪ್‌ಗೆ ಹೋಗಿದ್ದೆ. ವೈದ್ಯರು, ರೋಗ ಪತ್ತೆಹಚ್ಚಿದ್ದು ಮಾತ್ರವಲ್ಲ; ಅದಕ್ಕೆ ಸುಲಭದ ಪರಿಹಾರವನ್ನೂ ಸೂಚಿಸಿದ್ದರು.

ಆರೋಗ್ಯ ಕಾಪಾಡಿಕೊಳ್ಳಬೇಕು ಎಂಬ ಆಸೆಯಿಂದ ನಮ್ಮ ಜನ ಮಾಡುವ ಬಗೆಬಗೆಯ ಸರ್ಕಸ್‌ಗಳನ್ನು ನೋಡಬೇಕೆಂದರೆ, ಬೆಳಗಿನ ಹೊತ್ತು ಪಾರ್ಕ್‌ಗೆ ಹೋಗಬೇಕು. ಕೆಲವರು ಓಡುತ್ತಿರುತ್ತಾರೆ. ಮತ್ತೆ ಕೆಲವರು ಜಿಗಿಯುತ್ತಿರುತ್ತಾರೆ. ಒಂದಷ್ಟು ಜನ ವೇಗವಾಗಿ, ನಿಧಾನವಾಗಿ ಅಥವಾ ಸ್ಲೋಮೋಷನ್‌ನಲ್ಲಿ ವಾಕ್‌ ಮಾಡುತ್ತಿರುತ್ತಾರೆ. ಕೆಲವರು ಧ್ಯಾನಕ್ಕೆ ಕೂತಿರುತ್ತಾರೆ. ಅಲ್ಲೊಂದು ಮೂಲೆಯಲ್ಲಿ ಲಾಫಿಂಗ್‌ ಕ್ಲಬ್‌ನವರು “ಹಹØಹಾØ, ಹೊಹೊØಹೊØà…’ ಎಂದು ಚಿತ್ರವಿಚಿತ್ರ ಶೈಲಿಯಲ್ಲಿ ನಗುತ್ತಿರುತ್ತಾರೆ. ಅಂಥವರನ್ನೆಲ್ಲ ನೋಡಿದಾಗ, ನಮಗಿರುವುದು ಸಮಸ್ಯೆಯೇ ಅಲ್ಲ ಅನಿಸುವುದುಂಟು. ಹೀಗೆಲ್ಲ ಆಲೋಚಿಸುತ್ತ ಕಲ್ಲುಬೆಂಚಿನ ಮೇಲೆ ಆಸೀನನಾದೆ.

ಬೆಂಚಿನ ಮತ್ತೂಂದು ತುದಿಯಲ್ಲಿ ಒಬ್ಬಳು ಅಜ್ಜಿ ಕೂತಿದ್ದಳು. ಸುತ್ತಲಿನ ಪರಿವೆಯೇ ಇಲ್ಲವೆಂಬಂತೆ, ಎದುರಿನ ಮರವನ್ನೇ ನೋಡುತ್ತಾ ಆಕೆ ಹೇಳುತ್ತಿದ್ದಳು: “ಸರೀನಾ ನೀನು ಮಾಡಿದ್ದು? ಹೇಳದೇ ಹೋಗಿಬಿಟ್ಯಲ್ಲ? ನಾನೀಗ ಏನು ಮಾಡ್ಬೇಕು? ನನ್ನನ್ನೂ ಜೊತೇಲಿ ಕರ್ಕೊಂಡು ಹೋಗಬೇಕಿತ್ತು ತಾನೆ? ನಿನ್ನ ದಮ್ಮಯ್ಯ ಅಂತೀನಿ. ನನ್ನನ್ನೂ ಕರ್ಕೊಂಡು ಹೋಗು…’ ಹೀಗೆಂದವಳು ಇದ್ದಕ್ಕಿದ್ದಂತೆ ಮಾತು ನಿಲ್ಲಿಸಿದಳು. ಆನಂತರ, ನಿಧಾನಕ್ಕೆ ಎದ್ದು, ಪ್ರಯಾಸದಿಂದಲೇ ಹೆಜ್ಜೆಯಿಡುತ್ತಾ ಹೋಗಿಬಿಟ್ಟಳು.

Advertisement

ಯಾರೂ ಎದುರಿಲ್ಲದಿದ್ದರೂ ಆಕೆ ನ್ಯಾಯ ಕೇಳುವ ಧಾಟಿಯಲ್ಲಿ ಮಾತಾಡುತ್ತಿದ್ದಳು. ಬಹುಶಃ ಆಕೆ ಹುಚ್ಚಿ ಇರಬೇಕು. ಅದೇ ಕಾರಣಕ್ಕೆ ಏನೇನೋ ಬಡಬಡಿಸಿ ಹೋಗಿಬಿಟ್ಟಳು ಎಂದು ನನಗೆ ನಾನೇ ಹೇಳಿಕೊಂಡೆ.

ಮರುದಿನ ವಾಕಿಂಗ್‌ಗೆ ಬಂದರೆ, ಅಚ್ಚರಿಯೊಂದು ಕಾದಿತ್ತು. ನಿನ್ನೆ ಬಂದಿದ್ದಳಲ್ಲ; ಅದೇ ಮುದುಕಿ ಮತ್ತೆ ವಟವಟ ಶುರು ಮಾಡಿದ್ದಳು. “ನಾನು ಏನು ತಪ್ಪು ಮಾಡಿದೀನಿ ಸ್ವಾಮಿ? ಯಾಕೆ ಹಿಂಗೆ ಪರೀಕ್ಷೆ ಮಾಡ್ತಾ ಇದೀಯ? ಒಬ್ಬರಿಗೆ ಮೋಸ ಮಾಡಲಿಲ್ಲ, ಒಬ್ರ ಜೊತೆ ಜಗಳಕ್ಕೆ ಹೋಗಲಿಲ್ಲ. ಕನಸಲ್ಲೂ ಕೇಡು ಬಯಸಲಿಲ್ಲ. ಹಾಗಿದ್ರೂ ಯಾಕೆ ಶಿಕ್ಷೆ ಕೊಡ್ತಿದೀಯ? ಯಾಕೆ ಸುಮ್ನಿದೀಯ, ಮಾತಾಡು…’

ಹೀಗೆಲ್ಲ ಮಾತಾಡಿ ಹೋಗುವುದನ್ನು ಮತ್ತೂಮ್ಮೆ ಕಂಡ ಮೇಲೆ, ಆಕೆ ಹುಚ್ಚಿ ಇರಬೇಕು ಎಂಬ ಶಂಕೆ ಮತ್ತಷ್ಟು ಬಲವಾಯಿತು. ಆದರೂ, ಆಕೆಯ ಹೆಸರನ್ನಾದರೂ ತಿಳಿಯಬೇಕು ಅನ್ನಿಸಿ, ಐದಾರು ಮಂದಿಯನ್ನು ವಿಚಾರಿಸಿದೆ. “ಪಾಪ ಸಾರ್‌ ಅವಳು. ಕಲ್ಯಾಣಮ್ಮ ಅಂತ ಆಕೆಯ ಹೆಸರು. ಪಾಪದ ಹೆಂಗಸು. ಜೀವನದಲ್ಲಿ ತುಂಬಾ ನೊಂದಿದಾಳೆ. ಆಕೆ ತುಂಬಾ ಸ್ವಾಭಿಮಾನಿ. ಯಾರ ಮುಂದೇನೂ ಕೈಚಾಚಿದವಳಲ್ಲ. ಇಲ್ಲಿ ಬಂದು ಸ್ವಲ್ಪ ಹೊತ್ತು ಕೂತಿದ್ದು ಹೋಗ್ತಾಳೆ…’ ಅಂದರು. ಕಲ್ಯಾಣಮ್ಮನ ಜೊತೆ ಮಾತಾಡಬೇಕು ಎಂಬ ಆಸೆ ಆ ಕ್ಷಣದಲ್ಲೇ ಮೊಳಕೆಯೊಡೆಯಿತು.

ರಜೆ ಇದ್ದುದರಿಂದ, ಮರುದಿನ ಪಾರ್ಕಿನಲ್ಲಿ ಹೆಚ್ಚು ಜನರಿರಲಿಲ್ಲ. ಆದರೆ ಈ ಅಜ್ಜಿ ಮಾತ್ರ ಅವತ್ತೂ ತಪ್ಪದೇ ಬಂದಿದ್ದಳು. ಫಾರ್‌ ಎ ಛೇಂಜ್‌ ಎಂಬಂತೆ, ಆಕೆ ಏನೊಂದೂ ಮಾತಾಡದೆ ಕಲ್ಲಿನಂತೆ ಕೂತಿದ್ದಳು. ಆಕೆಯೊಂದಿಗೆ ಮಾತಾಡಲು ಇದೇ ಸುಸಮಯ ಅನ್ನಿಸಿ- “ಅಜ್ಜೀ, ಧ್ಯಾನ ಮಾಡ್ತಿದೀಯ?’ ಅಂದೆ. ಆಕೆ ಛಕ್ಕನೆ ತಿರುಗಿದಳು. ಈಗ, ಬೆಚ್ಚಿಬೀಳುವ ಸರದಿ ನನ್ನದಾಗಿತ್ತು. ಏಕೆಂದರೆ, ಅಜ್ಜಿಯ ದವಡೆಗಳು ಊದಿಕೊಂಡಿದ್ದವು. ಯಾರೋ ಬಲವಾಗಿ ಗುದ್ದಿದ್ದಾರೆ ಎಂಬುದಕ್ಕೆ ಅಲ್ಲಿ ಸಾಕ್ಷಿಯಿತ್ತು. ಆಕೆಯ ಸುಕ್ಕುಗಟ್ಟಿದ ಚರ್ಮ, ಕಣ್ಣೀರಿನಿಂದ ತೊಯ್ದು ಹೋಗಿತ್ತು. ಅಂದರೆ- ಆಕೆ ಸುಮ್ಮನೇ ಕೂತಿರಲಿಲ್ಲ. ಮೌನವಾಗಿ ಅಳುತ್ತಿದ್ದಳು!

“ಅಯ್ಯಯ್ಯೋ, ಏನಾಯ್ತಜ್ಜೀ, ಕೆನ್ನೆ ಊದಿಕೊಂಡಿದೆಯಲ್ಲ, ಏನ್ಮಾಡ್ಕೊಂಡೆ? ಎಲ್ಲಾದ್ರೂ ಬಿದ್ದುಬಿಟ್ಯಾ? ನಿಮ್ಮ ಮನೆ ಎಲ್ಲಿ? ಆಸ್ಪತ್ರೆಗೆ ಹೋಗಲಿಲ್ವ? ಅಳ್ತಾ ಇದೀಯಲ್ಲ ಯಾಕೆ?’- ಆಕೆಯ ಸ್ಥಿತಿ ಕಂಡಾಗ, ಹೀಗೆಲ್ಲ ಕೇಳಲೇಬೇಕಾಯಿತು. ಅಜ್ಜಿ, ನ್ಯಾಯ ಒಪ್ಪಿಸುವವಳಂತೆ, ಬಿಕ್ಕಳಿಸುತ್ತಲೇ ಹೇಳಿದಳು: “ವಯಸ್ಸಾಗಿದೆ ಕಣಪ್ಪ. ಕಣ್ಣು ಸರಿಯಾಗಿ ಕಾಣÕಲ್ಲ. ಕಾಫಿ ಲೋಟ ಬೀಳಿಸಿ ಒಡೆದು ಹಾಕಿºಟ್ಟೆ ಅಂತ ಹೀಗೆ ಗುದ್ದಿ ಬಿಡೋದೇನಪ್ಪ? ಮಗ, ಇದನ್ನೆಲ್ಲ ಕಂಡೂ ಕಾಣದವನಂತೆ ಇದ್ದುಬಿಡ್ತಾನೆ. ಕರ್ಕೊಂಡೋಗಯ್ಯ ಸ್ವಾಮೀ ಅಂತ ದಿನಾಲೂ ಕೇಳ್ಕೊತಾ ಇದೀನಿ. ಈ ದೇವ್ರು ಇನ್ನೂ ಮನಸ್ಸು ಮಾಡಿಲ್ಲ…’ ಅಂದಳು. ಆನಂತರದಲ್ಲಿ ಗೊತ್ತಾಗಿದ್ದೇನೆಂದರೆ- “ಈಕೆಗೂ- ಸೊಸೆಗೂ ಆಗಿಬರುವುದಿಲ್ಲ. ಸೊಸೆ, ಸಣ್ಣಪುಟ್ಟ ತಪ್ಪಾದರೂ ಅತ್ತೆಯನ್ನು ಹಂಗಿಸುತ್ತಾಳೆ.

ಸಿಟ್ಟು ಹೆಚ್ಚಾದರೆ, ನಾಲ್ಕೇಟು ಹಾಕಿಯೂ ಬಿಡುತ್ತಾಳೆ. ಕಲ್ಯಾಣಮ್ಮನ ಮಗ, ಹೆಂಡತಿಗೆ ಹೆದರುತ್ತಾನೆ. ಈಕೆಗೆ ನಾಲ್ಕು ಮಕ್ಕಳು. ಅವರೆಲ್ಲಾ ಬೇರೆ ಬೇರೆ ಊರುಗಳಲ್ಲಿ ಜೋರಾಗಿಯೇ ಇದ್ದಾರೆ. ಆದರೆ, ಕಲ್ಯಾಣಮ್ಮನ ಜವಾಬ್ದಾರಿ ವಹಿಸಿಕೊಳ್ಳಲು ಅವರ್ಯಾರೂ ರೆಡಿ ಇಲ್ಲ…’

ಅಯ್ಯೋ ಪಾಪ, ಎಂದು ಉದ್ಗರಿಸಿ, ಅನುಕಂಪ ಸೂಚಿಸುವುದು ಬಿಟ್ಟರೆ, ಅವತ್ತು ಮತ್ತೇನು ಮಾಡಲೂ ಸಾಧ್ಯವಾಗಲಿಲ್ಲ. ಪರಿಚಯದ ಗೆಳೆಯರಿಗೆ ಕಲ್ಯಾಣಮ್ಮನ ಕಥೆ ಹೇಳಿದಾಗ, ಅವರೆಲ್ಲ ನೀಡಿದ ವಿವರಗಳು ಗಾಬರಿ ಹುಟ್ಟಿಸುವಂತಿದ್ದವು. ಈ ಅಜ್ಜಿಗೆ, ಸೊಸೆಯಿಂದ ಪದೇಪದೆ ಹೊಡೆತಗಳು ಬೀಳುತ್ತಿದ್ದವು. ಈಕೆಯನ್ನು ಪಾರ್ಕ್‌ಗೆ ಕಳಿಸಿ, ಬೀಗ ಹಾಕಿಕೊಂಡು ಶಾಪಿಂಗ್‌ ಹೋಗಿಬಿಡುವುದು, ತಂಗಳು ಊಟ ಕೊಡುವುದು, ವಿಪರೀತ ಹಂಗಿಸುವುದು- ಮುಂತಾದ ಟಾರ್ಚರ್‌ಗಳು ಸಾಮಾನ್ಯವಾಗಿದ್ದವು. ಈ ಪಾಪದ ಅಜ್ಜಿ, ಎಲ್ಲವನ್ನೂ ಮೌನವಾಗಿ ಸಹಿಸಿಕೊಳ್ಳುತ್ತಿತ್ತು. ಇದನ್ನೆಲ್ಲ ಕೇಳಿದ ಮೇಲೆ, ಅಜ್ಜಿ ಪಾರ್ಕ್‌ನಲ್ಲಿ ಕೂತು ಒಬ್ಬಳೇ ಮಾತಾಡುತ್ತಿದ್ದಳಲ್ಲ; ಅದರಲ್ಲಿ ಏನೋ ಗುಟ್ಟಿದೆ ಅನಿಸಿತು. ಈಕೆ ಮಾತಾಡುತ್ತಿದ್ದದ್ದು ಯಾರ ಜೊತೆಗೆ ಎಂಬ ಕುತೂಹಲದಿಂದಲೇ ಹೋಗಿ ನೋಡಿದರೆ, ಅಜ್ಜಿ ಕೂರುತ್ತಿದ್ದಳಲ್ಲ; ಆ ಮರದ ಕೆಳಗೆ, ನರಸಿಂಹಸ್ವಾಮಿಯ ಹಳೆಯದೊಂದು ಫೋಟೋ ಇತ್ತು. “ಇದು ನಮ್ಮ ಮನೆದೇವರು ಕಣಪ್ಪ. ಯಾರೋ ಪುಣ್ಯಾತ್ಮರು ತಂದಿಟ್ಟು ಹೋಗಿದಾರೆ.

ದೇವರ ಮುಂದೆ ಕಷ್ಟ ಹೇಳಿಕೊಂಡ್ರೆ ಮನಸ್ಸಿಗೆ ಸ್ವಲ್ಪ ಸಮಾಧಾನ ಆಗ್ತಿತ್ತು’ -ಮುಂದೊಂದು ದಿನ, ಕಲ್ಯಾಣಮ್ಮನೇ ಹೀಗೊಂದು ವಿವರಣೆ ನೀಡಿದ್ದಳು.
ಆನಂತರದಲ್ಲಿ ಕಲ್ಯಾಣಮ್ಮನ ದರ್ಶನ ನಿರಂತರವಾಯಿತು. ಪಾಪ, ಆ ಮುದುಕಿಯ ಮೊಗದಲ್ಲಿ ಸಂಭ್ರಮವೇ ಇರುತ್ತಿರಲಿಲ್ಲ. ಕಡೆಗಾಲದಲ್ಲಿ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳುವುದು ಮಕ್ಕಳ ಕರ್ತವ್ಯವಲ್ಲವೆ? ಸೊಸೆ ಅನ್ನಿಸಿಕೊಂಡವಳೂ ಹೆಂಗಸು. “ಅತ್ತೆ’ ಆಗಿರುವಾಕೆಯೂ ಹೆಂಗಸು.

“ಅತ್ತೆ’ಯಲ್ಲಿ ಅಮ್ಮನನ್ನು ಕಾಣುವ ಬುದ್ಧಿ ಸೊಸೆಗೆ ಯಾಕೆ ಬರಲಿಲ್ಲ? ನನಗೆ ಅಮ್ಮನೇ ಮುಖ್ಯ ಎಂದು ಗಟ್ಟಿಯಾಗಿ ಹೇಳುವ ಧೈರ್ಯ ಕಲ್ಯಾಣಮ್ಮನ ಮಗನಿಗೇಕೆ ಬರಲಿಲ್ಲ…? ಎಂದೆಲ್ಲ ಯೋಚಿಸಿದ್ದಾಯಿತು.

ಹೀಗಿದ್ದಾಗಲೇ ಅದೊಮ್ಮೆ ಕಲ್ಯಾಣಮ್ಮನ ಮಗನೇ ಸಿಕ್ಕಿಬಿಟ್ಟ. “ನಿಮ್ಮ ತಾಯಿಯವರಿಗೆ ವಯಸ್ಸಾಗಿದೆ. ಅವರು ಹೆಚ್ಚಾಗಿ ಮನೆಯಲ್ಲೇ ಇರುವಂತೆ ನೋಡ್ಕೊàಬಹುದಲ್ವಾ ಸಾರ್‌’ ಎಂದರೆ-  “ಅಯ್ಯೋ, ನಮ್ಮಮ್ಮನ ಬಗ್ಗೆ ಯಾಕೆØàಳ್ತೀರಿ ಸಾರ್‌? ಮುದುಕಿ ಸುಮ್ನೆà ಕಣ್ಣೀರು ಹಾಕ್ತಾಳೆ. ಭಾಳ ನಾಟಕ ಆಡ್ತಾಳೆ. ಸ್ವಲ್ಪಾನೂ ಕ್ಲೀನ್‌ ಇಲ್ಲ. ಸರಿಯಾಗಿ ಬಾಯಿ ತೊಳೆಯಲ್ಲ. ರಾತ್ರಿ ಟಾಯ್ಲೆಟ್ಟಿಗೆ ಹೋಗ್ತಾಳೆ. ನೀರೇ ಹಾಕಲ್ಲ. ಹತ್ತು ಮನೆಗೆ ಕೇಳುವಂತೆ ಗೊರಕೆ ಹೊಡೀತಾಳೆ. ಅವಳು ಕೊಡುವ ಕಿರಿಕಿರಿ ಒಂದೆರಡಲ್ಲ, ಬಿಡಿ…’ ಎಂದ. ಈ ಮಾತು ಕೇಳಿ ನಮ್ಮೊಂದಿಗಿದ್ದ ಮೂರ್ತಿಗೆ ರೇಗಿತು. “ರೀ ಸ್ವಾಮಿ, ಏನ್‌ ಮಾತ್‌ ರೀ ನಿಮುª? ಚಿಕ್ಕ ಮಗು ಇದ್ದಾಗ ಬಹುಶಃ ಎಲ್ಲ ಮಕ್ಕಳಿಗೂ ಕಿವಿ ಸೋರುತ್ತೆ.

ಆಗ ಎಂಥಾ ದುರ್ವಾಸನೆ ಬರುತ್ತೆ ಗೊತ್ತೇನ್ರೀ? ಎಷ್ಟೋ ಸಲ ಮಕ್ಕಳು ಬಟ್ಟೆಯಲ್ಲೇ ಕಕ್ಕ ಮಾಡಿಕೊಂಡಿರ್ತವೆ. ಅದನ್ನೆಲ್ಲಾ ತಾಯಂದಿರು ದೂರ್ತಾರೇನ್ರಿ? ತಾಯಿ ಅಂದ್ರೆ ದೇವರಿದ್ದಂಗೆ ಅಲ್ಲವೇನ್ರಿ… ನಾಲ್ಕು ತುತ್ತು ಅನ್ನ, ಎರಡು ಒಳ್ಳೆಯ ಮಾತು- ಅಷ್ಟೇ ಅಲ್ವಾ ಅವರು ಬಯಸೋದು?’ ಎಂದರು. ಈ ಮಾತಿನಿಂದ ಅವನಿಗೆ ಮುಖಭಂಗವಾಯಿತೇನೋ; “ಸರಿ ಸಾರ್‌. ಚೆನ್ನಾಗಿ ನೋಡ್ಕೊàತೇನೆ’ ಎಂದಷ್ಟೇ ಹೇಳಿ, ಸರಸರನೆ ಹೋಗಿಬಿಟ್ಟ.

ಇದರ ಪರಿಣಾಮ ಮಾತ್ರ ಕೆಟ್ಟದಿತ್ತು. ಐದಾರು ದಿನಗಳ ಕಾಲ ಕಲ್ಯಾಣಮ್ಮ ಪಾರ್ಕಿಗೇ ಬರಲೇ ಇಲ್ಲ. ವಾರದ ನಂತರ ಬಂದವಳು, ತಲೆ ಬಗ್ಗಿಸಿಕೊಂಡೇ “ಎಲಿÅಗೂ ಭಾರ ಆಗಿºದ್ದೀನಿ ಸ್ವಾಮಿ. ಏನ್ಮಾಡಲಿ? ನಾನು ಹಳ್ಳಿ ಹೆಂಗುÕ, ಸಿಟಿಯವರ ಥರ ಬದುಕೋಕೆ ಬರಲ್ಲ. ರೈಲ್‌ಗೋ, ಬಸ್‌ಗೊà ಸಿಕ್ಕಿ ಸತ್ತೋಗೋಣ ಅನ್ಸುತ್ತೆ. ಹಂಗೇನಾದ್ರೂ ಆದ್ರೆ ಮಗನಿಗೆ ಕೆಟ್ಟ ಹೆಸ್ರು ಬರುತ್ತೆ. ಉಹುಂ, ಹಾಗಾಗಬಾರ್ಧು. ಸೊಸೆಗೆ ಯಾಕೆ ಅಂಥ ಸಿಟ್ಟೋ ಗೊತ್ತಾಗ್ತಿಲ್ಲ. ಅವರ ಮನೆಯವರು ಬಂದ್ರೆ ಚೆನ್ನಾಗಿ ಮಾತಾಡಿಸ್ತಾಳೆ. ನನ್ಕಡೆ ಮಾತ್ರ ತಿರುಗಿಯೂ ನೋಡೋದಿಲ್ಲ. ಮನೇಲಿ ಮಾತಾಡೊÕàರೇ ದಿಕ್ಕಿಲ್ಲ ಸ್ವಾಮೀ…’ ಅಂದಳು. ನಂತರ, ಸಂಕೋಚದಿಂದಲೇ ಒಂದು ಚೀಟಿ ಕೊಟ್ಟು “ಇದು ನನ್ನ ಮಗಳ ನಂಬರ್‌. ಅವಳಿಗೆ ನನ್ನ ಕಥೆ ಹೇಳಿ ಸ್ವಾಮಿ… ಸ್ವಲ್ಪ ದಿನ ಅವಳ ಮನೇಗಾದ್ರೂ ಹೋಗಿ ಬರಿ¤àನಿ’ ಅಂದಳು.

ಆ ನಂಬರಿಗೆ ಪೋನ್‌ ಮಾಡಿದರೆ, ಆ ಬದಿಯಲ್ಲಿದ್ದ ಹೆಣ್ಣುಮಗಳು ಗಾಬರಿಯಿಂದ- “ಸಾರ್‌, ನಾನಿರೋದೂ ಮಗನ ಮನೇಲಿ. ಇಲ್ಲಿ ನನ್ನನ್ನು ಸಹಿಸಿಕೊಂಡಿರೋದೇ ಹೆಚ್ಚು. ಯಾವುದೇ ಕಾರಣಕ್ಕೂ ಅಲ್ಲಿಂದ ಎಲ್ಲೂ ಹೋಗಬಾರದಂತೆ. ಕಷ್ಟವೋ ಸುಖವೋ, ಅಲ್ಲೇ ಇರಬೇಕಂತೆ ಅಂದುಬಿಡಿ’ ಎಂದು ಕಾಲ್‌ ಕಟ್‌ ಮಾಡಿದಳು.

ಈ ಅಜ್ಜಿಯನ್ನು, ಯಾವುದಾದ್ರೂ ಅನಾಥಾಶ್ರಮಕ್ಕೆ ಸೇರಿಸಿದರೆ ಹೇಗೆ ಎಂಬ ಯೋಚನೆ ಬಂದದ್ದೇ ಆಗ. ಈ ಸಲಹೆಗೆ ಅಜ್ಜಿ ತಕ್ಷಣವೇ ಒಪ್ಪಿಕೊಂಡಿತು. “ಯಾರಿಗೂ ಹೊರೆಯಾಗದಂತೆ ಇದ್ದು ಸತ್ತು ಹೋಗ್ತಿàನಿ ಕಣಪ್ಪಾ ಎಲ್ಲಾದ್ರೂ ಒಂದ್ಕಡೆ ಸೇರಿಸು. ನಿಮ್ಮ ಹೆಸರು ಹೇಳಿಕೊಂಡು ದಿನ ಕಳೀತೀನಿ’ ಅಂದಿತು. ನಾವು ಐದಾರು ಮಂದಿ ಸಮಾನ ಮನಸ್ಕರು, ಐದಾರು ಅನಾಥಾಶ್ರಮಗಳಿಗೆ ಹೋಗಿ, ಅಷ್ಟೇ ವೇಗದಲ್ಲಿ ವಾಪಸ್‌ ಬಂದೆವು. ಕಾರಣ, ಆಶ್ರಮದ ಮಂದಿ “ಮೂರು ಲಕ್ಷ ಡಿಪಾಸಿಟ್‌ ಇಡಬೇಕು ಸಾರ್‌’ ಎಂದರು. ಅಷ್ಟೊಂದು ಹಣವನ್ನು ತುರ್ತಾಗಿ ಹೊಂದಿಸಲು ನಮಗೂ ಸಾಧ್ಯವಾಗಲಿಲ್ಲ.

ಈ ಮಧ್ಯೆ, ರಾತ್ರಿ ಹೊತ್ತು ಎರಡೆರಡು ಬಾರಿ ಟಾಯ್ಲೆಟ್‌ಗೆ ಹೋಗ್ತಾಳೆ ಎಂಬ ಕಾರಣಕ್ಕೆ ಅಜ್ಜಿಗೆ ರಾತ್ರಿಯ ಊಟ ನಿಲ್ಲಿಸಿದ ಸುದ್ದಿಯೂ ಗೊತ್ತಾಯಿತು. ಈ ಹಳ್ಳಿ ಹೆಂಗಸು ಅದೆಷ್ಟು ನಲುಗಿ ಹೋಗಿದ್ದಳು ಅಂದರೆ, ದಿಕ್ಕು ತೋಚದವಳಂತೆ ಮನೆಯ ಹೊರಗೆ ಆಕಾಶ ನೋಡುತ್ತಾ ಕೂತಿರುತ್ತಿದ್ದಳು. ವಾಕ್‌ ಹೋಗುವ ನೆಪದಲ್ಲಿ ಎರಡು ಬಾಳೆಹಣ್ಣುಗಳನ್ನು ಒಯ್ದು ಕೊಟ್ಟರೆ, ಪುಟ್ಟ ಮಗು ಐಸ್‌ಕ್ರೀಮ್‌ ಪಡೆಯುತ್ತದಲ್ಲ; ಅಷ್ಟೇ ಸಂಭ್ರಮದಿಂದ ಸ್ವೀಕರಿಸುತ್ತಿದ್ದಳು. ಸುತ್ತಮುತ್ತ ಯಾರೂ ಇಲ್ಲ ಎಂಬುದನ್ನು ಗ್ಯಾರಂಟಿ ಮಾಡಿಕೊಂಡು- “ಆಶ್ರಮಕ್ಕೆ ಸೇರಿಸ್ತೀನಿ ಅಂದಿದ್ರಲ್ಲ ಸ್ವಾಮಿ… ಅಲ್ಲಿಗೆ ಯಾವಾಗ ಹೋಗೋದು? ಎರಡು ದಿನ ಮೊದೆÉà ಹೇಳಿಬಿಡಿ. ಹೋಗೋಕ್‌ ಮುಂಚೆ, ಮೊಮ್ಮಕ್ಕಳನ್ನು ಕಣ್ತುಂಬ ನೋಡಿಬಿಡ್ತೀನಿ’ ಅಂದಿದ್ದಳು. “ಅಜ್ಜಿ, ತಪ್ಪು ತಿಳ್ಕೊàಬೇಡ. ಆಶ್ರಮಕ್ಕೆ ಸೇರಿಸಿಕೊಳ್ಳಲು ತುಂಬಾ ದುಡ್ಡು ಕೇಳಿದ್ರು.

ನಮ್ಮ ಹತ್ರ ಅಷ್ಟೊಂದು ದುಡ್ಡಿರಲಿಲ್ಲ…’ ಅಂದೆ. “ಹಂಗಾ, ಹೋಗ್ಲಿ ಬುಡಿ ಸ್ವಾಮಿ. ಭಗವಂತ ನನ್ನ ಹಣೇಲಿ ಬರೆದಿದ್ದೇ ಇಷ್ಟು ಅನ್ಸುತ್ತೆ. ಇಷ್ಟು ದಿನ ಕಷ್ಟಸುಖ ಕೇಳಿದ್ರಲ್ಲ, ಅಷ್ಟೇ ಸಾಕು ಎಂದು ಕೈ ಮುಗಿದಿದ್ದಳು’.
*****
ಆನಂತರದಲ್ಲಿ, ಕಲ್ಯಾಣಮ್ಮ ಪಾರ್ಕ್‌ಗೆ ಬರುವುದೇ ನಿಂತು ಹೋಯಿತು. ಬಹುಶಃ ಆಕೆ ಮಗಳ ಮನೆಗೆ ಹೋಗಿರಬೇಕು. ಇಲ್ಲವಾದಲ್ಲಿ ಆಕೆ ಖಂಡಿತ ಒಮ್ಮೆಯಾದರೂ ಸಿಗಬೇಕಿತ್ತು ಎಂದು ನನಗೆ ನಾನೇ ಸಮಾಧಾನ ಹೇಳಿ ಕೊಂಡೆ. ಮೊನ್ನೆ, ವಾಕ್‌ ಮುಗಿಸಿ, ಕಲ್ಲುಬೆಂಚಿನ ಮೇಲೆ ರೆಸ್ಟ್‌ ಪಡೆಯುತ್ತಿ ದ್ದಾಗಲೇ “ಏ, ಆ ಮರಕ್ಕೆ ಒಂದು ಪೋಸ್ಟರ್‌ ಹಾಕು, ಈ ಮರಕ್ಕೂ ಒಂದು ಇರಲಿ…’ ಎಂಬ ದನಿ ಕೇಳಿಸಿತು. ಇದೆಲ್ಲೋ ಪರಿಚಯದ ಧ್ವನಿಯಲ್ಲವಾ ಎಂದುಕೊಂಡು ಆ ಪೋಸ್ಟರ್‌ನತ್ತ ನೋಡಿದರೆ ಎದೆಯೊಡೆ ದಂತಾಯಿತು.

ಅಲ್ಲಿ ಕಲ್ಯಾಣಮ್ಮನ ಚಿತ್ರವಿತ್ತು. ತಾಯಿ ಕಣ್ಣೀರಿಡುತ್ತಿದ್ದ ಸ್ಥಳದಲ್ಲಿ ಮಗನೂ ಒಂದರೆಕ್ಷಣ ನಿಂತು ಬಿಕ್ಕಳಿಸಬಹುದಾ ಎಂದು ನೋಡಿದರೆ- ಅವನು, ಸದ್ಯ ತಲೆ ನೋವು ತಪ್ಪಿತು ಎನ್ನುತ್ತಾ ಕೈ ಬೀಸಿಕೊಂಡು ಹೋಗುವುದು ಕಾಣಿಸಿತು.
ಆಗಲೇ ಜೊತೆಯಾಗಿದ್ದು ಈ ಪ್ರಶ್ನೆ: “ಅತ್ತೆಯನ್ನೂ ಸ್ವಂತ ತಾಯಿಯಂತೆಯೇ ನೋಡಬೇಕೆಂಬ ಮನಸ್ಸು ಸೊಸೆಗೆ ಏಕಿಲ್ಲ? ಹೆಂಡತಿಗಿಂತ ನನಗೆ ಅಮ್ಮನೇ ಮುಖ್ಯ ಎನ್ನುವ ಧೈರ್ಯ ಗಂಡು ಮಕ್ಕಳಿಗೆ ಯಾಕೆ ಬರುವುದಿಲ್ಲ?’

– ಎ.ಆರ್‌.ಮಣಿಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next