Advertisement

ಕಾರ್‌ ಸ್ಟಾರ್ಟ್‌ ಆಗ್ತಿಲ್ಲ ಯಾಕೆ?

04:03 PM May 18, 2018 | |

ಕಾರು ನಿಲ್ಲಿಸಿ ಕೆಲವು ದಿನ ಆಯ್ತು. ಆದ್ರೆ ಈಗ ಸ್ಟಾರ್ಟ್‌ ಮಾಡಲು ನೋಡ್ತಿದ್ರೆ ಜಪ್ಪಯ್ಯ ಅಂದ್ರೂ ಸ್ಟಾರ್ಟ್‌ ಅಗ್ತಿಲ್ಲ! ಯಾಕಿರಬಹುದು? ಎಂಬ ಪ್ರಶ್ನೆಯೇ? ಕಾರಣಗಳಿವೆ.

Advertisement

ಬ್ಯಾಟರಿ ಡೆಡ್‌!
ಸಾಮಾನ್ಯವಾಗಿ ಕಾರು ಸ್ಟಾರ್ಟ್‌ ಆಗದಿರಲು ಬ್ಯಾಟರಿ ಡೆಡ್‌ ಆಗಿರುವುದು ಕಾರಣ. ಬ್ಯಾಟರಿ ಚಾರ್ಜ್‌ ಇಲ್ಲದ್ದರಿಂದ, ಹಲವಾರು ದಿನ ನಿಂತಲ್ಲೇ ನಿಲ್ಲಿಸಿರುವುದರಿಂದ ಹೀಗಾಗುತ್ತದೆ. ಹೆಚ್ಚಾಗಿ ಬ್ಯಾಟರಿ ಹಳತಾಗಿದ್ದರೆ ಇಂತಹ ಸಮಸ್ಯೆ ಕಾಣುತ್ತದೆ. ಇಂತಹ ಸಂದರ್ಭದಲ್ಲಿ ಜೆರ್ಕ್‌ ಮೂಲಕ ಸ್ಟಾರ್ಟ್‌ ಮಾಡಲು ಯತ್ನಿಸಬಹುದು. ಇದರಲ್ಲಿ ಫ‌ಲ ಕಂಡರೆ ಅದು ಬ್ಯಾಟರಿಯದ್ದೇ ಸಮಸ್ಯೆ. ಹೊಸ ಬ್ಯಾಟರಿ ಹಾಕುವುದು ಅಥವಾ ಇರುವ ಬ್ಯಾಟರಿಯ ಡಿಸ್ಟಿಲ್‌ ವಾಟರ್‌ ಪರಿಶೀಲಿಸಿ ಚಾರ್ಜ್‌ ಮಾಡಿಸುವುದು ಉತ್ತಮ. ಕಾರು ನಿಂತಲ್ಲೇ ಇದ್ದರೂ ಕನಿಷ್ಠ ವಾರಕ್ಕೊಮ್ಮೆ ಸ್ಟಾರ್ಟ್‌ ಮಾಡುವುದು ಬೆಸ್ಟ್‌.

ಇಂಧನ ಫಿಲ್ಟರ್‌ ಬ್ಲಾಕ್‌
ಇಂಧನ ಫಿಲ್ಟರ್‌ನಲ್ಲಿ ಕಸ ಕಟ್ಟಿಕೊಂಡಿರುವುದು, ಫಿಲ್ಟರ್‌ ಬದಲಾವಣೆ ಮಾಡಿ ಹಲವಾರು ಸಮಯ ಆಗಿರುವುದರಿಂದಲೂ ಕಾರು ಸ್ಟಾರ್ಟ್‌ ಆಗದೇ ಇರಬಹುದು. ಹೀಗೆ ಕಸ ಕಟ್ಟಿಕೊಂಡಿರುವುದರಿಂದ ಎಂಜಿನ್‌ಗೆ ಸರಿಯಾಗಿ ಇಂಧನ ಪೂರೈಕೆಯಾಗದೇ ಸಮಸ್ಯೆಯಾಗುತ್ತದೆ. ಸಾಮಾನ್ಯವಾಗಿ ಎಲ್ಲ ಕಾರುಗಳ  ಫ್ಯುಯೆಲ್‌ಫಿಲ್ಟರ್‌ಗಳು 50 ಸಾವಿರ ಕಿ.ಮೀ.ಗೂ ಹೆಚ್ಚು ಚೆನ್ನಾಗಿ ಬಾಳಿಕೆ ಬರುತ್ತವೆ. ಪೆಟ್ರೋಲ್‌, ಡೀಸೆಲ್‌ ಕಲಬೆರಕೆ ಇದ್ದ ಸಂದರ್ಭದಲ್ಲಿ ಫಿಲ್ಟರ್‌ ಬಾಳಿಕೆ ಕಡಿಮೆ ಇರುತ್ತದೆ.

ಟ್ಯಾಂಕ್‌ ಖಾಲಿ!
ಕಾರುಗಳಲ್ಲಿ ಇಂಧನ ಕನಿಷ್ಠ ಪಕ್ಷ ಕಾಲು ಭಾಗ ಆದರೂ ಇರುವಂತೆ ನೋಡಿಕೊಳ್ಳಬೇಕಾದ್ದು ಅಗತ್ಯ. ಇಲ್ಲದಿದ್ದರೆ, ಅದರಲ್ಲಿ ಇಂಧನ ಹರಿಯುವ ವ್ಯವಸ್ಥೆ, ಪೆಟ್ರೋಲ್‌ ಕಾರುಗಳಲ್ಲಾದರೆ ಫ್ಯುಯೆಲ್‌ ಇಂಜೆಕ್ಷನ್‌ ಸಿಸ್ಟಂ ತೊಂದರೆಗೆ ಕಾರಣವಾಗುತ್ತದೆ. ಟ್ಯಾಂಕ್‌ನಲ್ಲಿ ಇಂಧನ ಕಡಿಮೆಯಾದರೆ ತೀರ ಅಪರೂಪಕ್ಕೊಮ್ಮೆ ಸಮಸ್ಯೆ ಆಗದಿದ್ದರೂ, ಇಂಧನ ಯಾವಾಗಲೂ ಇರುವಂತೆ ನೋಡಿಕೊಳ್ಳಬೇಕಾದ್ದು ಅಗತ್ಯ. 

ಇಗ್ನೀಶನ್‌ ಸ್ವಿಚ್‌ ಸಮಸ್ಯೆ
ಕೆಲವೊಮ್ಮೆ ಇಗ್ನೀಶನ್‌ ಸ್ವಿಚ್‌ ಕೈಕೊಟ್ಟರೂ ಕಾರು ಸ್ಟಾರ್ಟ್‌ ಆಗುವುದಿಲ್ಲ. ಲೈಟ್‌ಗಳು ಉರಿಯುತ್ತವೆ. ಹೆಡ್‌ಲೈಟ್‌ ಆನ್‌ ಆಗುತ್ತದೆ. ಆದರೆ ಸ್ಟಾರ್ಟ್‌ ಆಗುತ್ತಿಲ್ಲ ಎಂದರೆ ಇಗ್ನೀಶನ್‌ ಸ್ವಿಚ್‌ ಸಮಸ್ಯೆ ಇರುತ್ತದೆ. ಇದರ ಬಗ್ಗೆ ಮೆಕ್ಯಾನಿಕ್‌ ಬಳಿ ಕೂಡಲೇ ಪರಿಶೀಲಿಸುವುದು ಉತ್ತಮ.

Advertisement

ಸ್ಪಾ ರ್ಟರ್‌ ಸಮಸ್ಯೆ
ಕಾರಿನೊಳಗೆ ಇಂಜಿನ್‌ ಚಾಲೂ ಮಾಡಲು ಸ್ಟಾರ್ಟರ್‌ ಎಂಬ ಸಾಧನ ಇರುತ್ತದೆ. ಕಾರು ಸ್ಟಾರ್ಟ್‌ ಮಾಡುವ ವೇಳೆ ಇದು ಚಾಲೂ ಆಗದೇ ಇಂಜಿನ್‌ ಚಾಲೂ ಆಗದು. ಒಂದು ವೇಳೆ ಸ್ಟಾರ್ಟಿಂಗ್‌ನಲ್ಲಿ ಕೇವಲ ಶಬ್ದ ಮಾತ್ರ ಬರುತ್ತದೆ. ಇಂಜಿನ್‌ ಸ್ಟಾರ್ಟ್‌ ಆಗಲು ಕೇಳುತ್ತಿಲ್ಲ ಎಂದರೆ ಅದು ಸ್ಟಾರ್ಟರ್‌ನದ್ದೇ ಸಮಸ್ಯೆ.

 ಈಶ

Advertisement

Udayavani is now on Telegram. Click here to join our channel and stay updated with the latest news.

Next