Advertisement

ನಾಡಧ್ವಜ ವಿಚಾರ; ಎಲ್ಲದಕ್ಕೂ ಪೊಲಿಟಿಕಲ್ ಗಿಮಿಕ್ ಅನ್ನೋದು ಯಾಕೆ? ಸಿಎಂ

12:43 PM Jul 22, 2017 | Team Udayavani |

ಬೆಂಗಳೂರು: ನಾಡಧ್ವಜ ಮಾಡಿದ್ರೆ ಅವಮಾನ ಆಗುತ್ತಾ? ಐ ಕಾಂಟ್ ಅಂಡರ್ ಸ್ಟಾಂಡ್. ಎಲ್ಲದಕ್ಕೂ ಪೊಲಿಟಿಕಲ್ ಗಿಮಿಕ್ ಅನ್ನೋದು ಯಾಕೆಂದು ಅರ್ಥವಾಗ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ನಾಡಧ್ವಜದ ವಿಚಾರವನ್ನು ಪ್ರಸ್ತಾಪಿಸಿ ಅಸಮಾಧಾನ ಹೊರಹಾಕಿದ್ದಾರೆ.

Advertisement

ಶನಿವಾರ ಮಾಗಡಿ ರಸ್ತೆಯ ಕೆಳಸೇತುವೆ ಉದ್ಘಾಟನಾ ಸಮಾರಂಭದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದರು. ಸಂವಿಧಾನ ಸರಿಯಾಗಿ ಓದಲ್ಲ, ಕಾನೂನು ಸರಿಯಾಗಿ ತಿಳಿದುಕೊಳ್ಳಲ್ಲ. ಅನಾವಶ್ಯಕವಾಗಿ ಆರೋಪ ಮಾಡುವುದು ಚಾಳಿಯಾಗಿದೆ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರತ್ಯೇಕ ನಾಡಧ್ವಜ ಸಂಬಂಧ ಸರ್ಕಾರ ಒಂದು ಸಮಿತಿ ರಚಿಸಿದೆ. ಸಮಿತಿ ವರದಿ ನೀಡಿದ ನಂತರ ಮುಂದಿನ ನಿರ್ಧಾರ. ಆದರೆ ಈ ವಿಚಾರವಾಗಿ ವಿವಾದ ಹುಟ್ಟುಹಾಕಲಾಗುತ್ತಿದೆ. ಈ ಬಗ್ಗೆ ಇನ್ನು ನಾನೇನು ಹೇಳಲ್ಲ, ಜನರ ತೀರ್ಮಾನಕ್ಕೆ ಬಿಡುತ್ತೇನೆ ಎಂದು ಸಿಎಂ ಹೇಳಿದರು.

ಅವನಿಗೇನು ಲೆಕ್ಕ ಬರಲ್ವಾ? ಎನ್ ಆರ್ ರಮೇಶ್ ಗೆ ಸಿಎಂ ಚಾಟಿ
ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ ಬಿಜೆಪಿಯ ಬೆಂಗಳೂರು ನಗರ ವಕ್ತಾರ ಎನ್ ಆರ್ ರಮೇಶ್ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿ, ಆ ಎನ್ ಆರ್ ರಮೇಶ್ ಮನೆ ಹಾಳ ಇದ್ದಂಗೆ. ಯೋಜನೆಗೆ ಬಿಡುಗಡೆ ಮಾಡಿರುವುದೇ 100 ಕೋಟಿ, ಅದರಲ್ಲಿ 65 ಕೋಟಿ ಅವ್ಯವಹಾರ ನಡೆದಿದೆ ಎಂದು ಹೇಳುತ್ತಾನಲ್ಲ, ಅವನಿಗೇನು ಲೆಕ್ಕ ಬರಲ್ವಾ ಎಂದು ಪ್ರಶ್ನಿಸಿದರು.

ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ:
ಮಾಗಡಿ ಕೆಳಸೇತುವೆ ಉದ್ಘಾಟನಾ ಸಮಾರಂಭದಲ್ಲಿ ಅವ್ಯಸ್ಥೆಯ ಆಗರವಾಗಿದ್ದು, ಈ ಸಂದರ್ಭದಲ್ಲಿ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆಯಿತು. ಒಂದು ಹಂತದಲ್ಲಿ ಸಿಎಂ ಎದುರಲ್ಲಿಯೇ ಎಂಎಲ್ ಸಿ ಎಚ್ ಎಂ ರೇವಣ್ಣ ಅವರು, ಬಿಜೆಪಿ ಕಾರ್ಪೋರೇಟರ್ ಉಮೇಶ್ ಶೆಟ್ಟಿ ಅವರಿಗೆ ಧಮ್ಕಿ ಹಾಕಿದರು. ಕೂಡಲೇ ನಿಮ್ಮ ಕಡೆಯವರಿಗೆ ಘೋಷಣೆ ನಿಲ್ಲಿಸಲು ಹೇಳಿ. ಇಲ್ಲದಿದ್ದರೆ ಪೊಲೀಸರಿಗೆ ಒಪ್ಪಿಸುತ್ತೇವೆ ಎಂದು ಎಚ್ಚರಿಗೆ ನೀಡಿದರು. ಎಲ್ಲರಿಗಿಂತ ಮೊದಲೇ ಪಾಲಿಕೆ ಸದಸ್ಯ ವೇದಿಕೆ ಹತ್ತಿರುವುದೇ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿಗೆ ಕಾರಣ ಎಂದು ಮಾಧ್ಯಮದ ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next