Advertisement
ಸರಳವಾದ ಒಂದು ಸಾಲಿನ ಉತ್ತರ. ಒಳ್ಳೆ ಕಥೆಗಳಿರಬೇಕು. ಎರಡನೇ ಸಾಲಿನ ಉತ್ತರವೇನೆಂದರೆ ಭಾರತದಲ್ಲಿ ಅಂಥ ಬಹಳಷ್ಟು ಕಥೆಗಳಿವೆ. ಇದೇ ಸಂದರ್ಭದಲ್ಲಿ ಆಸ್ಕರ್ ಗೆಂದೇ ಸಿನೆಮಾ ಮಾಡುವುದರಲ್ಲಿ ಅರ್ಥವಿಲ್ಲ. ಅದಷ್ಟೇ ನಮ್ಮ ಗುರಿಯಾಗಬಾರದೂ ಸಹ. ಒಂದು ಸರ್ವಶ್ರೇಷ್ಠ ಸಿನೆಮಾ ಮಾಡುವುದು ನಮ್ಮ ಗುರಿಯಾಗಬೇಕು. ಉಳಿದೆಲ್ಲವೂ ಹಿಂಬಾಲಿಸುತ್ತದೆ ಎಂಬುದು ಒಟ್ಟೂ ಅಭಿಪ್ರಾಯವಾಗಿತ್ತು.
ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಹಯೋಗವೂ ಪ್ರಶಸ್ತಿಯ ಬಳಿ ಕೊಂಡೊಯ್ಯಬಲ್ಲದು ಎಂದ ಅವರು, ಸರಕಾರಗಳೂ ಆಸ್ಕರ್ ಸ್ಪರ್ಧೆಗೆ ಇಳಿಯುವ ಚಲನಚಿತ್ರಗಳ ತಂಡವನ್ನು ಬೆಂಬಲಿಸಲು ಆರ್ಥಿಕ ಸಹಕಾರ ನೀಡಲು ಪ್ರತ್ಯೇಕ ನಿಧಿಯನ್ನು ಸ್ಥಾಪಿಸಬೇಕು ಎಂದವರು ರಸೂಲ್ 1982 ರಲ್ಲಿ ಭಾನು ಆಥೈಯ ಈ ಗಾಜಿನ ಮನೆ ಒಡೆದು ಒಳಹೊಕ್ಕಿದ್ದರು. “ಗಾಂಧಿ’ ಚಿತ್ರದ ಕಾಸ್ಟೂಮ್ಸ್ ಡಿಸೈನ್‌ಗೆ ಆಸ್ಕರ್ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದರು. ಬಳಿಕ ಎ.ಆರ್. ರೆಹಮಾನ್, ರಸೂಲ್ ಕುಟ್ಟಿ, ಎಂ.ಎಂ. ಕೀರವಾಣಿ, ಗುಣೀತ್ ಮೊಂಗ ಕಪೂರ್ ಹಾಗೂ ಕಾರ್ತಿಕಿ ಗೊನ್ಸಾಲ್ವೇಸ್ ಎಲ್ಲರೂ ಈ ಹಾದಿಯಲ್ಲಿ ಗುರಿ ಮುಟ್ಟಿದ್ಧಾರೆ ಎಂದರು.
Related Articles
Advertisement
ಹಾಗೆಯೇ ಆಸ್ಕರ್ ಹಾದಿಯಲ್ಲಿ ಚಿತ್ರೋತ್ಸವಗಳ ಕೊಡುಗೆಯನ್ನು ಉಲ್ಲೇಖೀಸಲು ಮರೆಯಲಿಲ್ಲ. ಚಿತ್ರೋತ್ಸವಗಳಲ್ಲಿ ನಮ್ಮ ಚಿತ್ರಗಳು ಸರಿಯಾಗಿ ಬಿಂಬಿತವಾದರೆ ಆಸ್ಕರ್ ಹಾದಿ ಕಠಿನವೆನಿಸದು. ಆದ ಕಾರಣ ಸೂಕ್ತವಾದ ಅಂತಾರಾಷ್ಟ್ರೀಯ ಸಿನೆಮೋತ್ಸವಗಳಲ್ಲಿ ನಮ್ಮ ಚಿತ್ರಗಳು ಪ್ರದರ್ಶನಗೊಳ್ಳಬೇಕು ಎಂದರು.
ಶಾರ್ಟ್ಸ್ ಟಿವಿಯ ಕಾರ್ಟರ್ ಪಿಲ್ಚರ್ ಅವರ ಸಲಹೆಯಂತೆ, ಭಾರತದ ಕಥೆಗಳನ್ನು ಹೇಳಬೇಕು. ಇಲ್ಲಿ ಸಾಕಷ್ಟು ಕಥೆಗಳಿವೆ. ಅವುಗಳನ್ನು ಸರಿಯಾಗಿ ಬಿಂಬಿಸಬೇಕು. ಅದೇ ಆಸ್ಕರ್‌ಗೆ ದಾರಿ ಎಂದರು. ಸೋನಲ್ ಕರ್ಲಾ ಸಂವಾದ ನಡೆಸಿಕೊಟ್ಟರು.