Advertisement

ಇಸಿಯು ಅಪ್ಡೇಟ್ ಯಾಕೆ ಮಾಡಬೇಕು?

08:40 AM May 31, 2019 | mahesh |

ಆಧುನಿಕ ಕಾರುಗಳಲ್ಲಿ ಎಲೆಕ್ಟ್ರಾನಿಕ್‌ ಕಂಟ್ರೋಲ್ ಯುನಿಟ್ (ಇಸಿಯು) ಎಂಬ ವ್ಯವಸ್ಥೆಯೊಂದಿದೆ. ಇವುಗಳನ್ನು ಕಾಲಕಾಲಕ್ಕೆ ಅಪ್ಡೇಟ್ ಮಾಡಬೇಕಾದ್ದು ಅಗತ್ಯ. ಸಾಫ್ಟ್ವೇರ್‌ ಮೂಲಕ ಇವುಗಳನ್ನು ಅಪ್ಡೇಟ್ ಮಾಡಲಾಗುತ್ತದೆ. ಎಂಜಿನ್‌ ಟ್ರಾನ್ಸ್‌ಮಿಷನ್‌ನಿಂದ ಹಿಡಿದು ಇಂಧನ ಬಳಕೆಯವರೆಗೆ ಎಲ್ಲವನ್ನೂ ನಿಯಂತ್ರಿಸುವುದು ಇಸಿಯು. ಆದ್ದರಿಂದ ಇದರ ಅಪ್ಡೇಟ್ ಗಮನಾರ್ಹ ಪರಿಣಾಮ ಬೀರುತ್ತದೆ.

Advertisement

ಇಸಿಯು ಸಮಸ್ಯೆ ಪತ್ತೆ ಹೇಗೆ?
ಇಸಿಯು ಕೈಕೊಡುತ್ತಿದ್ದರೆ ಅವುಗಳ ಸಮಸ್ಯೆ ಸುಲಭವಾಗಿ ಗೋಚರಿಸಬಹುದು. ಕೆಲವೊಮ್ಮೆ ಕಾರಿನಲ್ಲಿ ಉಂಟಾಗುವ ಸಮಸ್ಯೆಗೆ ಮೆಕ್ಯಾನಿಕಲ್ ಕಾರಣ ಇರಬಹುದೆಂದು ನೀವು ಭಾವಿಸ ಬಹುದು. ಆದರೆ ಇದು ಇಸಿಯು ನಿಂದಾಗಿಯೂ ಆಗಿರುತ್ತದೆ.

ಎಂಜಿನ್‌ ಆಯಿಲ್ ಲೈಟ್ ಆನ್‌
ಎಂಜಿನ್‌ ಆಯಿಲ್ ಕಡಿಮೆ ಇದೆ ಎಂದು ನಿಮಗೆ ಮೀಟರ್‌ನಲ್ಲಿ ಲೈಟ್ ಗೋಚರಿಸಬಹುದು. ಆದರೆ ಎಂಜಿನ್‌ ಆಯಿಲ್ ಸರಿಯಾಗಿಯೇ ಇರಬಹುದು. ಹೀಗೆ ಇಸಿಯು ಸರ್ಕ್ನೂಟ್‌ನ ಸೆನ್ಸರ್‌ ಸಮಸ್ಯೆಯಿಂದಾಗಿ ಹೀಗೆ ಆಗುವ ಸಾಧ್ಯತೆ ಇದೆ.

ಕಾರು ಸ್ಥಗಿತ ಅಥವಾ ಮಿಸ್‌ ಫೈರಿಂಗ್‌
ಕೆಲವೊಮ್ಮೆ ಕಾರು ಚಾಲನೆಯ ಮಧ್ಯದಲ್ಲಿ ಸ್ಥಗಿತಗೊಳ್ಳುವುದು ಅಥವಾ ಎಂಜಿನ್‌ ಮಿಸ್‌ ಫೈರ್‌ ಆಗುವುದು ಸಮಸ್ಯೆಗಳು ಗೋಚರಿಸಬಹುದು. ಕೆಲವೊಮ್ಮೆ ಎಂಜಿನ್‌ ಪಿಕಪ್‌ ಏಕಾಏಕಿ ಕಡಿಮೆ ಆದಂತೆಯೂ ಗೋಚರಿಸಬಹುದು.

ಸ್ಟಾರ್ಟ್‌ ಆಗದೇ ಇರುವುದು
ಇಸಿಯು ಕೆಟ್ಟರೆ ಎಂಜಿನ್‌ ಸ್ಟಾರ್ಟ್‌ ಆಗಲಾರದು. ಎಂಜಿನ್‌ ಮ್ಯಾನೇಜ್‌ಮೆಂಟ್ ಕಂಟ್ರೋಲ್ ವ್ಯವಸ್ಥೆ ಕೈಕೊಟ್ಟದ್ದರಿಂದ ಕಾರು ಸ್ಟಾರ್ಟ್‌ ಆಗುವುದಿಲ್ಲ. ಆದರೆ ಕಾರು ಕ್ರ್ಯಾಂಕ್‌ ಆಗುತ್ತದೆ. ಇದರ ಸಮಸ್ಯೆ ಗುರುತಿಸಲು ಪರಿಣತ ಮೆಕ್ಯಾನಿಕ್‌ ಬೇಕಾಗುತ್ತದೆ.

Advertisement

ಕಡಿಮೆ ಮೈಲೇಜ್‌
ಇಸಿಯು ಸಮಸ್ಯೆಯಿದ್ದರೆ ಕಾರಿನ ದಹನ ವ್ಯವಸ್ಥೆಗೆ ಬೇಕಾದ್ದಕ್ಕಿಂತಲೂ ಹೆಚ್ಚು ಇಂಧನವನ್ನು ಪೂರೈಸುವಂತೆ ಮಾಡುತ್ತದೆ. ಇದರಿಂದ ಸಹಜವಾಗಿ ಎಂಜಿನ್‌ ಮೈಲೇಜ್‌ ಕಡಿಮೆಯಾಗಬಹುದು. ಅಷ್ಟೇ ಅಲ್ಲದೆ ಕಾರಿನ ಒಟ್ಟಾರೆ ಫ‌ರ್ಫಾಮೆನ್ಸ್‌ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ.

– ಈಶ

Advertisement

Udayavani is now on Telegram. Click here to join our channel and stay updated with the latest news.

Next