Advertisement

ಗೊರಿಲ್ಲಾಗಳು ತಮ್ಮ ಕೈಗಳಿಂದ ಎದೆ ಬಡಿದುಕೊಳ್ಳುವುದು ಯಾಕೆ ಗೊತ್ತಾ?

06:31 PM Apr 11, 2021 | Team Udayavani |

ನವದೆಹಲಿ : ಸಾಮಾನ್ಯವಾಗಿ ಎಲ್ಲರೂ ಗೊರಿಲ್ಲಾ ಪ್ರಾಣಿಯ ಬಗ್ಗೆ ಕೇಳಿದ್ದೀರಿ. ಆದ್ರೆ ಗಂಡು ಗೊರಿಲ್ಲಾ ಎರಡೂ ಕೈಗಳಿಂದ ತನ್ನ ಎದೆಯನ್ನು ಜೋರಾಗಿ ಬಡಿದುಕೊಂಡು ಕೂಗುತ್ತದೆ. ಯಾಕೆ ಆ ರೀತಿ ಶಬ್ದ ಮಾಡುತ್ತದೆ ಎಂದು ನಿಮಗೆ ಗೊತ್ತೇ. ಗೊತ್ತಿಲ್ಲ ಅಂದ್ರೆ ಈ ಸ್ಟೋರಿಯನ್ನ ಸಂಪೂರ್ಣವಾಗಿ ಓದಿ.

Advertisement

ನಮಗೆಲ್ಲ ಗೊರಿಲ್ಲಾ ಅಂದ ತಕ್ಷಣ ನೆನಪಿಗೆ ಬರುವುದು ಎದೆ ಭಾಗಕ್ಕೆ ಜೋರಾಗಿ ಬಡಿದುಕೊಂಡು ಕೂಗುತ್ತ ನಿಲ್ಲುವ ದೈತ್ಯ ಗಾತ್ರದ ಪ್ರಾಣಿ. ಆದ್ರೆ ಯಾಕೆ ಈ ರೀತಿ ಶಬ್ದ ಮಾಡುತ್ತದೆ ಎಂದು ಜರ್ಮನಿಯ ವಿಜ್ಞಾನಿಗಳು ಕೊನೆಗೂ ಕಂಡು ಹಿಡಿದಿದ್ದಾರೆ.

ಗಂಡು ಗೊರಿಲ್ಲಾ ಪ್ರಾಣಿಯನ್ನು ಸಂಶೋಧನೆ ಮಾಡಿರುವ ವಿಜ್ಞಾನಿಗಳು ವರದಿಯೊಂದನ್ನು ತಿಳಿಸಿದ್ದಾರೆ. ರ್ವಾಂಡಾದಲ್ಲಿರುವ ಗೊರಿಲ್ಲಾ ಪ್ರಾಣಿಯ ಚಲನ ವಲನಗಳ ಮೇಲೆ ಸಂಶೋಧನೆ ಮಾಡುವಾಗ ತಿಳಿದಿರುವ ಅಂಶ ಏನಂದ್ರೆ, ಪರಸ್ಪರ ಸಂವಹನ ಮಾಡಲು, ಮತ್ತು ತನ್ನ ಶಕ್ತಿಯನ್ನು ಇತರ ಗೊರಿಲ್ಲಾಗಳಿಗೆ ತಿಳಿಸುವ ಉದ್ದೇಶದಿಂದ ಈ ರೀತಿ ಎದೆಯ ಭಾಗಕ್ಕೆ ಬಡಿದುಕೊಳ್ಳುತ್ತದೆ ಎಂದು ಹೇಳಿದ್ದಾರೆ.

ಮತ್ತೊಂದು ಅಂಶವನ್ನು ತಿಳಿಸಿರುವ ಸಂಶೋಧಕರು, ಹೆಣ್ಣು ಗೊರಿಲ್ಲಾವನ್ನು ತನ್ನ ಕಡೆ ಆಕರ್ಷಣೆ ಮಾಡುವ ಉದ್ದೇಶದಿಂದಲೂ ಈ ರೀತಿ ಮಾಡುತ್ತದೆ ಎಂದಿದ್ದಾರೆ. ಪ್ರತಿಯೊಂದು ಗೊರಿಲ್ಲಾದ ಎದೆ ಬಡಿತದಿಂದ ಬರುವ ಶಬ್ದವು ಬೇರೆ ಬೇರೆಯಾಗಿರುತ್ತದೆ. ಗೊರಿಲ್ಲಾ ವಯಸ್ಸು ಹೆಚ್ಚಾದಂತೆ ಅದರ ಶಬ್ದ ಕೂಡ ಹೆಚ್ಚಾಗುತ್ತದೆ ಎಂದು ಸಂಶೋಧ‍ಕರು ತಿಳಿಸಿದ್ದಾರೆ.

ಈ ಸಂಶೋಧನೆಗೆ ವೋಲ್ಕೆನೋಸ್ ರಾಷ್ಟ್ರೀಯ ಉದ್ಯಾನವನದ ಆರು ಗೊರಿಲ್ಲಾಗಳನ್ನು ಬಳಸಲಾಗಿದೆ. ಆ ಗೊರಿಲ್ಲಾಗಳ 36 ಬಾರಿಯ ಎದೆ ಬಡಿದುದೊಳ್ಳುವುದನ್ನು ಮಾಪನ ಮಾಡಲಾಗಿದೆ. ಹಾಗೂ ಆಡಿಯೋ ರೆಕಾರ್ಡ್ ಮಾಡಲಾಗಿದೆ. ಗೊರಿಲ್ಲಾ ವಯಸ್ಸು ಮತ್ತು ಗಾತ್ರದ ಮೇಲೂ ಈ ಶಬ್ದ ಹೆಚ್ಚು ಕಡಿಮೆ ಆಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next