Advertisement
ಸಿಬಿಡಿಟಿ (ಕೇಂದ್ರ ನೇರ ತೆರಿಗೆ ಮಂಡಳಿ) ಅಧಿಸೂಚನೆಯೊಂದನ್ನು ಹೊರಡಿಸಿ ಆದಾಯ ತೆರಿಗೆ ನಿಯಮಗಳಿಗೆ ತಿದ್ದುಪಡಿ ತಂದಿದೆ. ಇದರ ಮೂಲಕ ಅಂತರ್ಜಾಲ ಆಧಾರಿತ ಮಾರಾಟ ಸಂಸ್ಥೆಗಳ ಮೇಲಿನ (ಇ-ಕಾಮರ್ಸ್) ಟಿಡಿಎಸ್, ಮ್ಯೂಚ್ಯುವಲ್ ಫಂಡ್‌ಗಳು ಮತ್ತು ಉದ್ದಿಮೆ ಟ್ರಸ್ಟ್‌ಗಳಿಂದ ವಿತರಣೆಯಾದ ಲಾಭಾಂಶ, ನಗದು ಹಿಂತೆಗೆತ, ವೃತ್ತಿಪರ ಶುಲ್ಕ ಮತ್ತು ಬಡ್ಡಿ ಇವೆನ್ನೆಲ್ಲ ಆದಾಯ ತೆರಿಗೆ ವ್ಯಾಪ್ತಿಗೆ ತರಲು ತೀರ್ಮಾನಿಸಲಾಗಿದೆ. ಕೇಂದ್ರಸರ್ಕಾರ 26 ಕ್ಯೂ ಮತ್ತು 27 ಕ್ಯೂ ಪತ್ರಕವನ್ನೂ ತಿದ್ದುಪಡಿ ಮಾಡಿದೆ. ಈ ಪತ್ರಕಗಳಲ್ಲಿ ಟಿಡಿಎಸ್ ಕಡಿತಗೊಳಿಸಲ್ಪಟ್ಟ ಹಾಗೆಯೇ ಠೇವಣಿ ಇಡಲ್ಪಟ್ಟ ಮಾಹಿತಿಯಿರುತ್ತದೆ.
ನವದೆಹಲಿ: ಕೇಂದ್ರಸರ್ಕಾರ ಇತ್ತೀಚೆಗೆ ಮ್ಯೂಚುವಲ್ ಫಂಡ್ ಗಳ ಮೇಲೆ ಶೇ.0.005 ಮುದ್ರಾ ತೆರಿಗೆಯನ್ನು (ಸ್ಟಾಂಪ್ ಡ್ನೂಟಿ) ನಿಗದಿಪಡಿಸಿದೆ. ಇದರಿಂದ ಮುಂದಿನದಿನಗಳಲ್ಲಿ ಎಲ್ಲ ರೀತಿಯ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ದುಬಾರಿಯಾಗಲಿದೆ. ವಿವಿಧ ರೀತಿಯ ಮ್ಯೂಚುವಲ್ ಫಂಡ್
ಯೋಜನೆಗಳಾದ ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್‌ಐಪಿ), ವ್ಯವಸ್ಥಿತ ವರ್ಗಾವಣೆ ಯೋಜನೆ (ಎಸ್‌ಟಿಪಿ)ಗಳು ವೆಚ್ಚವನ್ನು ಹೆಚ್ಚಿಸಲಿವೆ. ಅಷ್ಟು ಮಾತ್ರವಲ್ಲ ಈಕ್ವಿಟಿ ಸಂಪರ್ಕಿತ ಉಳಿತಾಯ ಯೋಜನೆ (ಇಎಲ್‌ಎಸ್‌ಎಸ್), ಯುಲಿಪ್, ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್), ಭವಿಷ್ಯ ನಿಧಿ (ಪಿಎಫ್) ಗಳಲ್ಲಿ ಹೂಡಿಕೆ ಕೂಡ ದುಬಾರಿಯಾಗಲಿದೆ. ಈ ಎಲ್ಲವನ್ನೂ ಡೆಟ್ ಆಥವಾ ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡುವುದರಿಂದ, ಈ ರೀತಿಯ ವ್ಯವಹಾರ ಮಾಡುವಾಗ ವೆಚ್ಚ ಹೆಚ್ಚಾಗುವುದು ಅನಿವಾರ್ಯ.