Advertisement
ಕಾಂಗ್ರೆಸ್ ಮಾಡಿರುವ ಈ ಮೂರು ಟ್ವೀಟ್ ಗೆ ಬೊಮ್ಮಾಯಿ ಅವರು ಈ ಮಟ್ಟದಲ್ಲಿ ಕಳವಳಗೊಳ್ಳುವ ಅಗತ್ಯವಿತ್ತೇ ? ಅಷ್ಟಕ್ಕೂ ಅವರು ಆತಂಕಗೊಳ್ಳುವಂಥ ವಿದ್ಯಮಾನಗಳು ಬಿಜೆಪಿಯಲ್ಲಿ ನಡೆಯುತ್ತಿವೆಯೇ ? ಎಂಬ ಪ್ರಶ್ನೆಗಳಿಗೆ ಉತ್ತರ ಕೆದಕುವುದಕ್ಕೆ ಅವರೇ ಈಗ ದಾರಿ ಮಾಡಿಕೊಟ್ಟಂತಾಗಿದೆ.
Related Articles
Advertisement
ಬೊಮ್ಮಾಯಿ ಅವರ ಗೊಂಬೆಯಾಟ ಮುಗಿಯುವ ಹಂತಕ್ಕೆ ಬಂದಿದೆ.ಅಮಿತ್ ಶಾ ಅವರ ಭೇಟಿಯ ಬಗ್ಗೆ ಸರ್ಕಾರದ ಯಾವೊಬ್ಬ ಸಚಿವರು ಮಾತಾಡುತ್ತಿಲ್ಲ. ಯಾರಲ್ಲೂ ಸಂಭ್ರಮ ಇಲ್ಲದಿರುವುದೇ ಇದಕ್ಕೆ ನಿದರ್ಶನ ಎಂದು ಟ್ವೀಟ್ ಮೂಲಕ ಸಿಎಂ ಬಗ್ಗೆ ಕಾಂಗ್ರೆಸ್ ವ್ಯಂಗ್ಯವಾಡಿತ್ತು.
ಬಿಜೆಪಿಯಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆ ಇದೆ, ಸಂಘಟನಾತ್ಮಕವಾಗಿ ಬದಲಾವಣೆಯಾಗುತ್ತದೆ ಎಂಬ ಬಿಸಿ ಬಿಸಿ ಚರ್ಚೆ ಮಧ್ಯೆಯೇ ಕಾಂಗ್ರೆಸ್ ಈ ರೀತಿಯ ವ್ಯಂಗ್ಯಬರಿತ ಟ್ವೀಟ್ ಮಾಡಿ, ಬೊಮ್ಮಾಯಿ ಅವರನ್ನು “ಕೈಗೊಂಬೆ ಸಿಎಂ” ಎಂದು ಟೀಕಿಸಿತ್ತು.