Advertisement
2005ರಲ್ಲಿದ್ದ ಹಣದುಬ್ಬರಕ್ಕೆ ಹೋಲಿಸಿದರೆ ಈ ಬಾರಿಯ ಹಣದುಬ್ಬರ ಅಧಿಕ ಎಂದು ಹೇಳಲಾಗಿದೆ. ಇಲಾಖೆಯ ಈ ವರದಿಯನ್ನು ತಜ್ಞರ ಮುಖೇನ ವಿಶ್ಲೇಷಣೆ ಮಾಡಿ ಪ್ರಕಟಿಸಿರುವ ಸಿಎನ್‌ಬಿಸಿ ಸುದ್ದಿ ಜಾಲತಾಣ, ಇದು ಕಳೆದ 40 ವರ್ಷಗಳಲ್ಲೇ ಅತ್ಯಧಿಕ ಎಂದಿದೆ.
ಸೆಪ್ಟಂಬರ್‌ನಲ್ಲಿ ಶೇ. 11.80ರಷ್ಟಿ ದೇಶದ ಸಗಟು ದರ ಸೂಚ್ಯಂಕ (ಡಬ್ಲ್ಯೂಪಿಐ), ಆನಂತರ ಇದು ಅಕ್ಟೋಬರ್ ನಲ್ಲಿ ಶೇ. 12.54ರಷ್ಟಾಯಿತು. ನವೆಂಬರ್‌ನಲ್ಲಿ ಶೇ. 14.23ಕ್ಕೆ ಏರಿತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಕಳೆದ ವರ್ಷದ ನವೆಂಬರ್‌ನಲ್ಲಿ ದೇಶಾದ್ಯಂತ ಸಗಟು ಹಣದುಬ್ಬರ ಶೇ. 2.29ರಷ್ಟಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ. ಕಾರಣವೇನು?
2021ರ ನವೆಂಬರ್‌ನಲ್ಲಿ ಆದ ಹಣದುಬ್ಬರ ಏರಿಕೆಗೆ ಖನಿಜ ಯುಕ್ತ ತೈಲ, ಮೂಲ ರೂಪದ ಲೋಹಗಳು, ಪೆಟ್ರೋಲ್ ಮತ್ತು ಡೀಸೆಲ್‌ನ ಕಚ್ಚಾ ತೈಲ, ರಾಸಾಯನಿಕಗಳು, ಆಹಾರ ಉತ್ಪನ್ನಗಳ ಬೆಲೆಯು ಗಣನೀಯವಾಗಿ ಹೆಚ್ಚಳವಾಗಿರುವುದೇ ಈ ಮಟ್ಟಿನ ಹಣದುಬ್ಬರ ಹೆಚ್ಚಾಗಲು ಕಾರಣ ಎಂದು ಹೇಳಲಾಗಿದೆ.
Related Articles
ನವೆಂಬರ್‌ನಲ್ಲಿ ಆಹಾರ ಉತ್ಪನ್ನಗಳ ಬೆಲೆಗಳು ಶೇ. 4.88ರಷ್ಟು ಏರಿಕೆಯಾಗಿದ್ದರೆ, ತರಕಾರಿಗಳ ಬೆಲೆ ಶೇ. 3.91ರಷ್ಟು, ಮೊಟ್ಟೆ- ಮಾಂಸ ಹಾಗೂ ಮೀನುಗಳ ಬೆಲೆಗಳಲ್ಲಿ ಶೇ. 9.66ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಲಾಗಿದೆ.
Advertisement
ಇದನ್ನೂ ಓದಿ:ರಾಜ್ಯದಲ್ಲಿಂದು 327 ಕೋವಿಡ್ ಪಾಸಿಟಿವ್ ಪತ್ತೆ: 7 ಸಾವು
ಹಾಗೆಯೇ, ಪೆಟ್ರೋಲ್, ಡೀಸೆಲ್ ಹಾಗೂ ವಿವಿಧ ಇಂಧನ ಗಳ ಬೆಲೆ ಶೇ. 39.81ರಷ್ಟು ಹೆಚ್ಚಾಗಿದ್ದು ಇದರಲ್ಲಿ ಪೆಟ್ರೋಲ್ ಬೆಲೆ ಶೇ. 85.38, ಹೈ ಸ್ಪೀಡ್ ಡೀಸೆಲ್ ಬೆಲೆ ಶೇ. 86.07 ಹಾಗೂ ಎಲ್‌ಪಿಜಿಯ ಬೆಲೆ ಶೇ. 65.24ರಷ್ಟು ಹೆಚ್ಚಳವಾಗಿತ್ತೆಂದು ವರದಿಯಲ್ಲಿ ಹೇಳಲಾಗಿದೆ.
ಅಂಕಿ-ಅಂಶ: ಶೇ. 4.88
– ಆಹಾರ ಉತ್ಪನ್ನಗಳ ಬೆಲೆಯಲ್ಲಿ ಆಗಿದ್ದ ಏರಿಕೆ ಶೇ. 3.91
ತರಕಾರಿಗಳ ಬೆಲೆಯಲ್ಲಿ ಆಗಿದ್ದ ಏರಿಕೆ ಶೇ. 85.38
– ಪೆಟ್ರೋಲ್ ಬೆಲೆಯಲ್ಲಿ ಆಗಿದ್ದ ಹೆಚ್ಚಳ ಶೇ. 86.07
ಡೀಸೆಲ್ ಬೆಲೆಯಲ್ಲಿ ಆಗಿದ್ದ ಹೆಚ್ಚಳ