Advertisement
ಬಿಜೆಪಿಯ ಕಿರಣ್ ಕುಮಾರ್ ಕೊಡ್ಗಿ ಗೆದ್ದರೆ ಬಂಟರ ವಿಜಯದ ಸರಪಳಿ ಮುರಿದ ದಾಖಲೆ, ಕಾಂಗ್ರೆಸ್ ಮೊಳಹಳ್ಳಿ ದಿನೇಶ್ ಹೆಗ್ಡೆ ಗೆದ್ದರೆ ಬಿಜೆಪಿ ವಿಜಯದ ಜೈತ್ರಯಾತ್ರೆಗೆ ಅಡ್ಡಗಾಲಿಟ್ಟು ಕಾಂಗ್ರೆಸ್ ತೆಕ್ಕೆಗೆ ಕ್ಷೇತ್ರ ವನ್ನು ವಾಪಸು ತಂದ ದಾಖಲೆ. ಇಬ್ಬರೂ ಹೊಸಮುಖಗಳೇ. ಬಿಜೆಪಿಗೆ ಉಳಿಸಿಕೊಳ್ಳುವ ಕಾತರ, ಕಾಂಗ್ರೆಸ್‌ಗೆ ಮರಳಿ ಪಡೆಯುವ ಆತುರ.
Related Articles
Advertisement
ಜಾತಿ ಲೆಕ್ಕಇಲ್ಲಿ ಬಂಟ ಸಮುದಾಯದವರು ಅಧಿಕ ಸಂಖ್ಯೆಯಲ್ಲಿದ್ದಾರೆ. ಬಿಜೆಪಿಯಿಂದ ಬ್ರಾಹ್ಮಣ ಅಭ್ಯರ್ಥಿ ಸ್ಪರ್ಧಿಸಿದ ಕಾರಣ ಕಾಂಗ್ರೆಸ್‌ನ ಬಂಟ ಅಭ್ಯರ್ಥಿ ಕಡೆ ಜಾತಿ ಮತಗಳು ಧ್ರುವೀಕರಣ ಆಗಬಹುದು ಎಂಬ ಮಾತು ಚಾಲ್ತಿಯಲ್ಲಿದೆ. ಆದರೆ ಇಂಥ ಲೆಕ್ಕಾಚಾರ ಕರಾವಳಿಯಲ್ಲಿ ಕಡಿಮೆ. ಪಕ್ಕದ ಬೈಂದೂರು, ಉಡುಪಿಯಲ್ಲೂ ಹೆಚ್ಚಿನ ಸಂಖ್ಯೆಯವರು ಇರುವ ಸಮುದಾಯದವರ ಬದಲಿಗೆ ಬೇರೆಯವರು ಅನೇಕ ಬಾರಿ ಆರಿಸಿ ಬಂದದ್ದಿದೆ ಎನ್ನುತ್ತಾರೆ ವಿಶ್ಲೇಷಕರು. ಧನಾತ್ಮಕ-ಋಣಾತ್ಮಕ ಅಂಶಗಳು
ಎರಡೂ ಪಕ್ಷದ ಅಭ್ಯರ್ಥಿಗಳು ವಿಧಾನಸಭೆ ಚುನಾವಣೆಗೆ ಹೊಸಬರಾದರೂ ಕ್ಷೇತ್ರಕ್ಕೆ ಹಳ ಬರೇ. ಕೊಡ್ಗಿ ಪಕ್ಷದ ವಿವಿಧ ಹುದ್ದೆಗಳಲ್ಲಿದ್ದು ರಾಜಕೀಯದಲ್ಲಿ 40 ವರ್ಷಗಳಿಂದ ಇದ್ದಾರೆ. ದಿನೇಶ್ ಹೆಗ್ಡೆಯವರು ಮೊಳಹಳ್ಳಿ ಪಂಚಾಯತ್ ಸದಸ್ಯರಾಗಿ, ಅಧ್ಯಕ್ಷರಾಗಿ 15 ವರ್ಷ ಸೇವೆ ಸಲ್ಲಿಸಿ ರಾಜಕಾರಣದಲ್ಲಿ ಸಕ್ರಿಯರಾಗಿದ್ದವರು. ರಾಷ್ಟ್ರ , ರಾಜ್ಯ ನಾಯಕರ ದಂಡೇ ಬಿಜೆಪಿ ಪಾಳಯದಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಂಡಿದೆ. ಕಾಂಗ್ರೆಸ್ ಪಾಳಯದಲ್ಲಿ ಹಿರಿಯ ನಾಯಕರು ಮೌನಕ್ಕೆ ಶರಣಾಗಿದ್ದಾರೆ. ಜೆಡಿಎಸ್ ಮತ್ತಿತರ ಪಕ್ಷಗಳು, ಪಕ್ಷೇತರ ಅಭ್ಯರ್ಥಿಗಳು ಪಡೆಯುವ ಮತಗಳು ಇಲ್ಲಿ ಫಲಿತಾಂಶದ ಮೇಲೆ ಪರಿಣಾಮ ಬೀರುವುದು ಕಡಿಮೆ. ಕಣದಲ್ಲಿರುವ ಅಭ್ಯರ್ಥಿಗಳು 5
- ಎ. ಕಿರಣ್ ಕುಮಾರ್ ಕೊಡ್ಗಿ (ಬಿಜೆಪಿ )
- ದಿನೇಶ್ ಹೆಗ್ಡೆ ಮೊಳಹಳ್ಳಿ (ಕಾಂಗ್ರೆಸ್ )
- ರಮೇಶ (ಜೆಡಿಎಸ್)
- ಅರುಣ್ ದೀಪಕ್ ಮೆಂಡೋನ್ಸಾ (ಉತ್ತಮ ಪ್ರಜಾಕೀಯ ಪಕ್ಷ )
- ಚಂದ್ರಶೇಖರ ಜಿ.(ಪಕ್ಷೇತರ) ಲೆಕ್ಕಾಚಾರ ಏನು?
ಇಬ್ಬರೂ ಹೊಸಬರಾದರೂ ಮತ ಗಳಿಕೆಯ ಮೇಲೆ ಹೆಚ್ಚಿನ ಪರಿಣಾಮ ಬೀರದು. ಹಾಲಾಡಿ ನೆರಳು ಒಬ್ಬರಿಗೆ ಆಶ್ರಯವಾದರೆ, ಸಾಂಪ್ರದಾಯಕ ಮತ ಬ್ಯಾಂಕ್ ಇನ್ನೊಬ್ಬರಿಗೆ ಆಸರೆ. – ಲಕ್ಷ್ಮೀ ಮಚ್ಚಿನ