Advertisement

ಯಾರಾದ್ರೂ ಸಿಎಂ ಆಗಲಿ ರಾಜ್ಯದ ಜನರನ್ನು ಕೋವಿಡ್ ಇಂದ ರಕ್ಷಣೆ ಮಾಡಬೇಕು : ಬೇಳೂರು

04:50 PM Jun 26, 2021 | Team Udayavani |

ಶಿವಮೊಗ್ಗ : ಅವರ ಪಕ್ಷದವರೇ ಹೇಳ್ತಾರೆ, ಕಿವಿ ಕೇಳಲ್ಲ, ಕಣ್ಣು ಕಾಣಲ್ಲ, ಕೈ ನಡುಗುತ್ತೇ ಅಂತಾ. ಅವರೇ ಇರ್ತಾರೋ.. ಇನ್ನೋಬ್ಬರು ಆಗ್ತಾರೋ ನಮಗೆ ಸಂಬಂಧ ಇಲ್ಲ. ಅದು ಅವರ ಪಕ್ಷ, ಯಾರಾದ್ರೂ ಸಿಎಂ ಆಗಲಿ, ರಾಜ್ಯದ ಜನರನ್ನು ಕೋವಿಡ್ ಇಂದ ರಕ್ಷಣೆ ಮಾಡಬೇಕು ಎಂದು ಶಿವಮೊಗ್ಗದಲ್ಲಿ ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಹೇಳಿಕೆ ನೀಡಿದ್ದಾರೆ.

Advertisement

ಯಡಿಯೂರಪ್ಪ ಅವರು ಸಿಎಂ ಆಗಿದ್ದಾರೆ. ಈ ಸಮಯದಲ್ಲಿ ಕಚ್ಚಾಡೋಕೆ ಹೋಗಬೇಡಿ. ಯಾವುದನ್ನು ಮಾಡ್ಬೇಡಿ. ಅವರೇ ಪಕ್ಷದವರೇ ಸಿಎಂ ಹಾಗೂ ಅವರ ಮಗನ ಭ್ರಷ್ಟಾಚಾರದ ಬಗ್ಗೆ ಮಾತನಾಡ್ತಾರೆ. ಅವರ ಪಕ್ಷದ ವಿಶ್ವನಾಥ್ ಅವರೇ ಎಲ್ಲವನ್ನು ಹೇಳುತ್ತಿದ್ದಾರೆ. ಕೂಲಿ ಕಾರ್ಮಿಕರು, ಬಡವರು ಎಲ್ಲರೂ ಸಂಕಷ್ಟದಲ್ಲಿ ಇದ್ದಾರೆ. ಅವರಿಗೆ ಏನು ಸಿಕ್ತಾ ಇಲ್ಲ. ಈ ಸಂದರ್ಭದಲ್ಲಿ ಮಠ- ಮಂದಿರಗಳಿಗೆ ಕೋಟಿಗಟ್ಟಲೇ ಹಣ ನೀಡುವುದು ಬೇಡ.

ಮೊದಲು ಬಡವರಿಗೆ ನೀಡಿ, ಊಟವನ್ನು ಮಾಡ್ತಾರೆ. ನಂತರ ಬೇಕಿದ್ದರೇ ಮತ್ತೇ ಮಠ ಮಾನ್ಯಗಳಿಗೆ ನೀಡಿ. ಕೇಂದ್ರ ಸರ್ಕಾರ ಸಹ ಬಡವರಿಗೆ ಪ್ರತಿ ತಿಂಗಳು 5 ಸಾವಿರ ನೀಡಿ ಸಾಕು.. 15 ಲಕ್ಷ ಹಾಕೋದು ಬೇಡ. ಪೆಟ್ರೋಲ್, ಡಿಸೇಲ್, ಅಗತ್ಯ ವಸ್ತು ಬೆಲೆ ಏರಿಕೆ ಆಗಿದೆ. ಬೇಕಿದ್ದರೇ ನೀವು ಹೇಳಿದಂತೆ ಗಂಟೆ ಹೊಡೆಯುತ್ತೇವೆ, ದೀಪ ಹಚ್ತೇವೆ. ಚಪ್ಪಾಳೆನು ಹೋಡಿತ್ತಿವಿ. ಸಾಧ್ಯವಾದ್ರೇ, ಬಡ ವರ್ಗದ ಜನರಿಗೆ ಅನುಕೂಲ ಮಾಡಿಕೊಡಿ ಎಂದು ಬೇಳೂರು ಹೇಳಿದ್ದಾರೆ.

ಕಾಂಗ್ರೆಸ್ ನಲ್ಲಿ ಸಿಎಂ ಸ್ಥಾನಕ್ಕೆ ಪೈಪೋಟಿ ವಿಚಾರವಾಗಿ ಮಾತನಾಡಿದ ಅವರು,  ಹೈಕಮಾಂಡ್ ತೀರ್ಮಾನ ಮಾಡಿದವರಿಗೆ ನಮ್ಮ ಬೆಂಬಲ‌ ಇರುತ್ತೇ. ಹೈಕಮಾಂಡ್ ಹೇಳಿದವರ ನಾಯಕತ್ವದಲ್ಲಿ ನಾವು ಹೋಗ್ತೇವೆ. ಅವರ ತೀರ್ಮಾನಕ್ಕೆ ನಾವು ಬದ್ಧ. ಈಗಾಗಲೇ ಈ ರೀತಿಯ ಹೇಳಿಕೆ‌ ನೀಡದಂತೆ ಹೈಕಮಾಂಡ್ ಸೂಚಿಸಿದೆ. ಇನ್ಮುಂದೆ ಯಾರು ಹಾಗೇ ಹೇಳಿಕೆ ಕೊಡಲ್ಲ ಎಂದುಕೊಂಡಿದ್ದೇನೆ ಎಂದು ಬೇಳೂರು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next