Advertisement

ಯಾರಿಗೆ ಸಿಗಲಿದೆ ದಿಲ್ಲಿ ಸಿಂಹಾಸನ? ಮೋದಿಗೆ ಮೂರನೇ ಅವಧಿಯೋ? ಐಎನ್‌ಡಿಐಎಗೆ ಗಾದಿಯೋ?

12:57 AM Jun 04, 2024 | Team Udayavani |

ಹೊಸದಿಲ್ಲಿ: ಜಗತ್ತಿನ ಅತೀ ದೊಡ್ಡ ಚುನಾವಣೆಯ ಫ‌ಲಿತಾಂಶದ ಕುತೂಹಲಕ್ಕೆ ಮಂಗಳವಾರ ತೆರೆ ಬೀಳಲಿದೆ. ಸುಮಾರು 82 ದಿನಗಳ ಕಾಲ ನಡೆದ ಸುದೀರ್ಘ‌ ಲೋಕಸಭೆ ಚುನಾವಣೆಯ ಮತ ಎಣಿ ಕೆ ಪ್ರಕ್ರಿಯೆಗಳು ಬೆಳಗ್ಗೆ 8 ಗಂಟೆಯಿಂದ ಆರಂಭವಾಗಲಿದ್ದು, ಚುನಾವಣ ಆಯೋಗವು ಮತ ಎಣಿಕೆಗೆ ಬೇಕಾಗಿರುವ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದೆ.

Advertisement

543 ಲೋಕಸಭಾ ಕ್ಷೇತ್ರಗಳಿಗಾಗಿ ಒಟ್ಟು 8,360 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಅವರ ಹಣೆಬರಹ ಮಂಗಳವಾರ ತಿಳಿಯಲಿದೆ. ಆಂಧ್ರ ಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆ, 25 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫ‌ಲಿತಾಂಶವೂ ಮಂಗಳವಾರವೇ ಹೊರಬೀಳಲಿದೆ.

ಎ. 19ರಿಂದ ಜೂ. 1ರ ವರೆಗೆ ಒಟ್ಟು 7 ಹಂತದಲ್ಲಿ ಲೋಕಸಭೆಗೆ ಚುನಾವಣೆ ನಡೆದಿತ್ತು. ಪ್ರಸಕ್ತ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ 3ನೇ ಬಾರಿಗೆ ಅಧಿಕಾರಕ್ಕೇರಿ, ನರೇಂದ್ರ ಮೋದಿ ಅವರು ಪ್ರಧಾನಿಯಾಗಿ “ಹ್ಯಾಟ್ರಿಕ್‌’ ಸಾಧಿಸುವ ನಿರೀಕ್ಷೆಯಲ್ಲಿದ್ದಾರೆ. ಮತಗಟ್ಟೆ ಸಮೀಕ್ಷೆಗಳೂ ಬಿಜೆಪಿ 3ನೇ ಅವಧಿಗೆ ಸರಕಾರ ರಚಿಸುವ ಭವಿಷ್ಯವನ್ನು ನುಡಿದಿವೆ. ಮತ್ತೂಂದೆಡೆ ಕಾಂಗ್ರೆಸ್‌ ನೇತೃತ್ವದಲ್ಲಿ ಒಂದಾಗಿರುವ 23 ಪಕ್ಷಗಳ ಐಎನ್‌ಡಿಐಎ ಒಕ್ಕೂಟವು ಅಚ್ಚರಿಯ ಫ‌ಲಿತಾಂಶವನ್ನು ಎದುರು ನೋಡುತ್ತಿದೆ.

ಮಂಗಳವಾರ ಬೆಳಗ್ಗೆ 8 ಗಂಟೆಗೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಮೊದಲಿಗೆ ಅಂಚೆ ಮತಗಳ ಎಣಿಕೆ ನಡೆಯಲಿದೆ. ಬಳಿಕ ವಿದ್ಯುನ್ಮಾನ ಮತಯಂತ್ರಗಳಲ್ಲಿರುವ ಮತ ಗಳನ್ನು ಲೆಕ್ಕ ಹಾಕಲಾಗುತ್ತದೆ. ಬೆಳಗ್ಗೆ 10 ಗಂಟೆಯ ಸುಮಾರಿಗೆ ಚುನಾವಣೆ ಫ‌ಲಿತಾಂಶದ ಆರಂಭಿಕ ಚಿತ್ರಣ ದೊರೆತರೆ, ಮಧ್ಯಾಹ್ನ 12 ಗಂಟೆ ವೇಳೆಗೆ ಸ್ಪಷ್ಟ ಚಿತ್ರಣ ದೊರೆಯಬಹುದು. ಇವಿಎಂ ಮತ ಗಳೊಂದಿಗೆ ವಿವಿ ಪ್ಯಾಟ್‌ ತಾಳೆ ಹಾಕಬೇಕಾದ್ದ ರಿಂದ ಅಧಿಕೃತ ಚಿತ್ರಣವು ಸಂಜೆ 6 ಗಂಟೆ ವೇಳೆಗೆ ಹೊರಬೀಳುವ ನಿರೀಕ್ಷೆ ಇದೆ.

ತುರುಸಿನ ಸ್ಪರ್ಧೆ
3ನೇ ಅವಧಿಗೆ ಅಧಿಕಾರಕ್ಕೇರುವ ಭರವಸೆ ಯೊಂದಿಗೆ ಬಿಜೆಪಿ ನೇತೃತ್ವದ ಎನ್‌ಡಿಎ ಯು ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಚುನಾವಣೆಯನ್ನು ಎದುರಿಸಿದೆ. ಮೋದಿ ಅವರು ಮುಸ್ಲಿಮರಿಗೆ ಮೀಸಲಾತಿ ಹುನ್ನಾರ, ಅಭಿವೃದ್ಧಿ ಭಾರತದಂಥ ವಿಷಯಗಳನ್ನು ಮುನ್ನೆಲೆಗೆ ತಂದರೆ, ಮೋದಿ ಆಡಳಿತವನ್ನು ಕೊನೆ ಗಾಣಿಸುವ ಪಣ ತೊಟ್ಟಿರುವ ಕಾಂಗ್ರೆಸ್‌ ನೇತೃತ್ವದ ಐಎನ್‌ಡಿಐಎ ಕೂಟವು ಸಂವಿ ಧಾನ ಬದಲಾವಣೆ ತಡೆ, ನಿರುದ್ಯೋಗ ಮತ್ತು ಬೆಲೆ ಏರಿಕೆಯಂಥ ವಿಷಯಗಳನ್ನು ಪ್ರಸ್ತಾ ವಿಸಿ, ಗೆಲ್ಲುವ ಭರವಸೆ ಹೊಂದಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next