Advertisement
ನಗರದಲ್ಲಿರುವ ಸಂಚಾರ ಪೊಲೀಸ್ ಠಾಣೆಗಳಿಗೆ ಮಂಜೂರಾದ ಹುದ್ದೆಗಳು ಪೂರ್ಣಪ್ರಮಾಣದಲ್ಲಿ ಭರ್ತಿಯಾಗಿಲ್ಲ. ಹಾಲಿ ಸಿಬ್ಬಂದಿಯಲ್ಲಿ ಹಳೆ ಕರಣಗಳ ತನಿಖೆ, ಕೋರ್ಟ್, ಠಾಣಾ ನಿರ್ವಹಣೆಗೆ ಒಂದಿಷ್ಟು ಮಂದಿ ನಿಯೋಜನೆಗೊಂಡಿರುತ್ತಾರೆ. ಉಳಿದಂತೆ ಆಗಾಗ್ಗೆ ನಡೆಯುವ ರಾಜಕೀಯ ಪಕ್ಷಗಳ ರ್ಯಾಲಿ, ಸಮಾವೇಶ, ಪ್ರತಿಭಟನೆ, ಬಂದೋಬಸ್ತ್, ರಾಜ್ಯದ ವಿವಿಧೆಡೆ ನಡೆಯುವ ವಿಶೇಷ ಕಾರ್ಯಕ್ರಮಗಳಿಗೂ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತದೆ. ಸದ್ಯ ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೂ ನಗರದ ಸಂಚಾರ ಪೊಲೀಸ್ ವಿಭಾಗದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
Related Articles
Advertisement
ಎಎಸ್‌ಐಗೆ ಸಹಾಯಕ್ಕೆ ಒಬ್ಬ ಸಿಬ್ಬಂದಿ!: ನಾಲ್ಕು ತಿಂಗಳಿಂದೀಚೆಗೆ ಸಂಚಾರ ವಿಭಾಗದ ಸಹಾಯಕ ಸಬ್ ಇನ್ಸ್‌ಪೆಕ್ಟರ್‌ಗೆ ಒಬ್ಬ ಸಹಾಯಕ ಸಿಬ್ಬಂದಿ ಜೊತೆಗಿರಬೇಕು ಎಂಬ ನಿಯಮ ಜಾರಿಯಾಯಿತು. ಇದರಿಂದ ಸಿಬ್ಬಂದಿ ಕೊರತೆಯ ನಡುವೆಯೂ ಅವರ ಜೊತೆ ಒಬ್ಬ ಪೇದೆ ತೆರಳುತ್ತಾರೆ. ಇದರಿಂದ ಸಂಚಾರ ನಿರ್ವಹಣೆ ಸಿಬ್ಬಂದಿ ಸಂಖ್ಯೆ ಇನ್ನಷ್ಟು ಇಳಿಕೆಯಾಯಿತು ಎನ್ನುತ್ತಾರೆ ಪೊಲೀಸ್ ಪೇದೆ.
ಪಿಎಸ್‌ಐ ಪರೀಕ್ಷೆ ಬರೆಯುವ ಅವಕಾಶ ತಪ್ಪಿತು! ಕಳೆದ ವರ್ಷ ರಾಜ್ಯದ ಪ್ರಭಾವಿ ರಾಜಕಾರಣಿ ಯೊಬ್ಬರ ನಿವಾಸದ ಮೇಲೆ ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು. ಮೂರು ದಿನ ರಾಜಕಾರಣಿಯ ನಿವಾಸದಲ್ಲಿ ಐಟಿ ಶೋಧ ಕಾರ್ಯಾಚರಣೆ ನಡೆಸಿತು. ಈ ವೇಳೆ ಅಲ್ಲಿ ವಿಶೇಷ ಸೇವೆಗೆ ನನ್ನನ್ನು ನಿಯೋಜನೆಗೊಳಿಸಲಾಗಿತ್ತು. ಆ ಮೂರು ದಿನಗಳಲ್ಲಿ ಒಂದು ದಿನ ನನಗೆ ಪಿಎಸ್‌ಐ ಪರೀಕ್ಷೆ ಇತ್ತು. ಈ ಮೊದಲು ಪರೀಕ್ಷೆಗೆ ಹಾಜರಾಗಲು ಇಲಾಖೆ ವತಿಯಿಂದ ಅನುಮತಿ ದೊರೆತಿತ್ತು. ಆದರೆ, ವಿಶೇಷ ಸೇವೆಗೆ ನಿಯೋಜನೆಯಾಗಿದ್ದರಿಂದ, ನನ್ನ ಬದಲಿಗೆ ಮತ್ತೂಬ್ಬ ಸಿಬ್ಬಂದಿ ಇರಲಿಲ್ಲ. ಹೀಗಾಗಿ ನಾನೇ ಕರ್ತವ್ಯ ಮುಂದುವರಿಸಬೇಕಾಯಿತು ಎಂಬುದು ಉತ್ತರ ವಿಭಾಗದ ಸಂಚಾರ ಠಾಣೆಯ ಪೇದೆಯೊಬ್ಬರು ಅಳಲು ತೋಡಿಕೊಂಡರು
ಆರೋಗ್ಯ ತಪಾಸಣೆ ಮಾಡ್ತಾರೆ; ಸಮಸ್ಯೆ ಏನೆಂದು ಹೇಳಲ್ಲ! ಸಂಚಾರ ಪೊಲೀಸರಿಗೆ ವರ್ಷಕ್ಕೊಮ್ಮೆ ಇಲಾಖೆಯಿಂದಲೇ ಆರೋಗ್ಯ ತಪಾಸಣೆ ಆಯೋಜಿಸಲಾಗುತ್ತದೆ. ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಖಾಸಗಿ ಆಸ್ಪತ್ರೆಗೆ ಆರೋಗ್ಯ ತಪಾಸಣೆಯ ಜವಾಬ್ದಾರಿ ವಹಿಸಲಾಗಿರುತ್ತದೆ.
ಐದು ನಿಮಿಷ ಕೌನ್ಸಿಲಿಂಗ್ ಮೂಲಕ ತಪಾಸಣೆ ನಡೆಸುವ ವೈದ್ಯರು, ಬಳಿಕ ಠಾಣೆಗೆ ವೈಯಕ್ತಿಕ ವರದಿ ಕೊಟ್ಟು ಕಳುಹಿಸುತ್ತಾರೆ. ಆದರೆ, ಯಾವ ಸಮಸ್ಯೆಯಿದೆ ಎಂಬುದನ್ನು ಖಚಿತವಾಗಿ ತಿಳಿಸುವುದಿಲ್ಲ. ಹೀಗಾಗಿ ನಾವೇ ಆಗಾಗ್ಗೆ ಖಾಸಗಿ ಆಸ್ಪತ್ರೆಗಳಲ್ಲಿ ಆರೋಗ್ಯ ತಪಾಸಣೆ ಮಾಡಿಸಿ ಕೊಳ್ಳುವುದು ಅನಿವಾರ್ಯ ಎಂದು ಪೇದೆ ಯೊಬ್ಬರು ಅಳಲು ತೋಡಿಕೊಂಡರು. ಒಟ್ಟಿನಲ್ಲಿ ಮಂಜೂರಾದ ಹುದ್ದೆಯಲ್ಲಿ ಶೇ 30ರಷ್ಟು ಸಿಬ್ಬಂದಿ ಕೊರತೆಯಿಂದಾಗಿ ಹಾಲಿ ಸಿಬ್ಬಂದಿ ಕಾರ್ಯಭಾರದಿಂದ ಬಳಲುವಂತಾಗಿದೆ. ಕಳೆದ ಎರಡು ವರ್ಷದಿಂದ ಇದೇ ಸ್ಥಿತಿಯಿದ್ದು, ಹೊಸ ನೇಮಕಾತಿ ಪ್ರಕ್ರಿಯೆ ನಡೆಯದ ಕಾರಣ ಸಿಬ್ಬಂದಿಯ ಆತಂಕ ಮತ್ತಷ್ಟು ಹೆಚ್ಚಿಸಿದೆ. ಈ ವಿಳಂಬ ಪ್ರಕ್ರಿಯೆ ಸಹಜವಾಗಿ ಅವರ ಆರೋಗ್ಯದ ಮೇಲೆಯೂ ಪರಿಣಾಮ ಬೀರಲಿದೆ.