Advertisement

ಮೈಮೇಲೆ ಇರುವೆ ಬಿಟ್ಟುಕೊಳ್ಳುವ ಆಸೆ ಯಾರಿಗಿದೆ? 

04:24 PM May 17, 2018 | Harsha Rao |

ಫೇಸ್‌ಬುಕ್ಕಿಗರಿಗಿದೆ. ಕ್ರಿಕೆಟ್‌ ಬುಕ್ಕಿಗಳ ಬಗ್ಗೆ ಕೇಳಿದ್ದೀರಿ, ರೇಸ್‌ಬುಕ್ಕಿಗಳ ಬಗ್ಗೆಯೂ ಕೇಳಿದ್ದೀರಿ, ಫೇಸ್‌ಬುಕ್ಕಿಗಳ ಬಗ್ಗೆ? ಅವರ ಬಗ್ಗೆಯೂ ಕೇಳಿದ್ದೀರಿ ಮತ್ತು ನೋಡಿದ್ದೀರಿ. ಇದೊಂದು ಹೊಸದಾಗಿ ಶುರುವಾಗಿರುವ ಚಟ.

Advertisement

ಫೇಸ್‌ಬುಕ್ಕಿನಲ್ಲಿ ಮಾತ್ರವೇ ಇವರ ಪ್ರಲಾಪ, ಪೌರುಷವೆಲ್ಲವೂ. ಹಾಗಾಗಿ “ಫೇಸ್‌ಬುಕ್ಕಿನಲ್ಲಿ ಹುಲಿ, ಹೊರಗಡೆ ಇಲಿ’ ಎಂದು ಹೊಸ ಗಾದೆಯನ್ನೂ ಸೃಷ್ಟಿಸಿಬಿಡಬಹುದೆನ್ನಿ. ಇರುವೆ ಬಿಟ್ಟುಕೊಳ್ಳುವ ಇವರ್ಯಾರೂ ನಿಜಕ್ಕೂ ಇರುವೆ ಬಿಟ್ಟುಕೊಂಡಿರುವುದಿಲ್ಲ. ಎಲ್ಲಾ ವಿಷಯದಲ್ಲೂ ಮೂಗು ತೂರಿಸಿ ರಾಡಿ ಎಬ್ಬಿಸುವವರನ್ನು ಜಾಡಿಸಲು ಬಳಸುವ ಉಪಮೆಯಷ್ಟೇ ಇದು. ಆದರೆ, ಕಾಗೆ ಪ್ರಭೇದಕ್ಕೆ ಸೇರಿದ “ಜೇ’ ಎಂದು ಕರೆಯಲ್ಪಡುವ ಹಕ್ಕಿಯೊಂದಿದೆ. ಅದಕ್ಕೆ ನಿಜಕ್ಕೂ ಮೈಮೇಲೆ ಇರುವೆ ಬಿಟ್ಟುಕೊಳ್ಳುವುದೆಂದರೆ ಇಷ್ಟ. ಅದಕ್ಕಾಗಿ ಇರುವೆ ಗೂಡಿನ ಬಳಿ ನಿಲ್ಲುತ್ತದೆ. ಜೇ ಪಕ್ಷಿಯ ಪುಕ್ಕಗಳಲ್ಲಿ ಸೇರಿಕೊಂಡು ಉಪಟಳ ಕೊಡುವ ಪರಾವಲಂಬಿ ಜೀವಿಗಳಾದ ಕ್ರಿಮಿಗಳನ್ನು ಮೈಮೇಲೆ ಹತ್ತಿಕೊಂಡ ಇರುವೆ ತಿಂದು ಮೈಯನ್ನು ಸ್ವತ್ಛಗೊಳಿಸುತ್ತದೆ. ಮೊಸಳೆ ಕೂಡಾ ತನ್ನ ಹಲ್ಲಿನ ನಡುವೆ ಸಿಲುಕಿದ ಆಹಾರದ ತುಣುಕುಗಳನ್ನು ಪಕ್ಷಿಗಳ ಸಹಾಯದಿಂದ ಸ್ವತ್ಛಗೊಳಿಸಿಕೊಳ್ಳುವುದು ನಿಮಗೆ ತಿಳಿದಿರಬೇಕು.

ಮೊಸಳೆಗಳು ತಮ್ಮ ಬಾಯಿ ಶುದ್ಧೀಕರಣಕ್ಕಾಗಿ “ಫ್ಲೋವರ್‌’ ಪ್ರಭೇದದ ಪಕ್ಷಿಗಳನ್ನು ಬಳಸಿಕೊಳ್ಳುತ್ತವೆ. ಪಕ್ಷಿಗಳು ಮೈ ಶುದ್ಧಿಗಾಗಿ ಇರುವೆಗಳನ್ನು ಬಳಸಿಕೊಳ್ಳುತ್ತವೆ. ಇದಲ್ಲವೆ ಪ್ರಕೃತಿಯ ಸಾಮರಸ್ಯದ ಸೈಕಲ್‌ಗೆ ಉದಾಹರಣೆ!

Advertisement

Udayavani is now on Telegram. Click here to join our channel and stay updated with the latest news.

Next