ಮುಂಬೈ: ಕೆಲವೇ ದಿನಗಳಲ್ಲಿ ಬಹುನಿರೀಕ್ಷಿತ ಬಾರ್ಡರ್- ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿ ಆರಂಭವಾಗಲಿದೆ. ಆದರೆ ಇತ್ತೀಚಿನ ಎರಡು ಬಾರ್ಡರ್- ಗಾವಸ್ಕರ್ ಸರಣಿಯಲ್ಲಿ ಭಾರತದ ಪರ ಮಿಂಚಿದ್ದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರು ಭಾರತದ ಸೇವೆಗೆ ಲಭ್ಯರಾಗುತ್ತಿಲ್ಲ. ಇತ್ತೀಚೆಗೆ ನಡೆದ ರಸ್ತೆ ಅಪಘಾತದಲ್ಲಿ ಪಂತ್ ಗಾಯಗೊಂಡಿದ್ದು, ಇನ್ನು ಕೆಲವು ತಿಂಗಳು ಅವರು ಕ್ರಿಕೆಟ್ ಆಡುವುದು ಕಷ್ಟ ಸಾಧ್ಯವಾಗಿದೆ.
ಈ ಬಾರಿಯ ಸರಣಿಯಲ್ಲಿ ಭಾರತ ತಂಡದಲ್ಲಿ ಕೆಎಸ್ ಭರತ್ ಮತ್ತು ಇಶಾನ್ ಕಿಶನ್ ಕೀಪರ್ ಆಗಿ ಆಯ್ಕೆಯಾಗಿದ್ದಾರೆ. ಆದರೆ ಆಡುವ ಬಳಗದಲ್ಲಿ ಯಾರು ಸ್ಥಾನ ಪಡೆಯುತ್ತಾರೆ ಎನ್ನುವುದು ಖಚಿತವಾಗಿಲ್ಲ.
ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಅವರು ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ಗೆ ಮೊದಲು ಭಾರತದ ಆಡುವ ಬಳಗದಲ್ಲಿ ಉತ್ತಮ ಕ್ವಾಲಿಟಿಯ ವಿಕೆಟ್ ಕೀಪರ್ ಆಡಬೇಕು ಎಂದಿದ್ದಾರೆ.
ಇದನ್ನೂ ಓದಿ:ಬುಗಾಟ್ಟಿಚೇರಾನ್ ಪ್ರೊಫಿಲೀ ಕಾರು ಬರೋಬ್ಬರಿ 88.23 ಕೋಟಿ ರೂಪಾಯಿಗಳಿಗೆ ಹರಾಜು
ಸರಣಿಯಲ್ಲಿ ಪಿಚ್ ನೋಡಿ ಕೀಪರ್ ಆಯ್ಕೆ ಮಾಡಬೇಕು. ಒಂದು ವೇಳೆ ಸ್ಪಿನ್ ಗೆ ಅನುಕೂಲವಾಗುವ ಪಿಚ್ ಇದ್ದರೆ ಆಗ ಉತ್ತಮ ವಿಕೆಟ್ ಕೀಪರ್ ಗೆ ಅವಕಾಶ ನೀಡಬೇಕು ಎಂದು ಶಾಸ್ತ್ರಿ ಹೇಳಿದರು.
“ಉತ್ತಮ ಕೀಪರ್ ಏಕೆಂದರೆ ರವೀಂದ್ರ ಜಡೇಜಾ, ಕುಲದೀಪ್ ಯಾದವ್, ರವಿಚಂದ್ರನ್ ಅಶ್ವಿನ್, ಅಕ್ಸರ್ ಪಟೇಲ್ ಅವರಂತಹ ಹುಡುಗರಿಗೆ ಸ್ಟಂಪ್ ಗಳ ಹಿಂದೆ ಉತ್ತಮ ಕೀಪರ್ ಅಗತ್ಯವಿರುತ್ತದೆ” ಎಂದರು.