ಬಾಗಲಕೋಟೆ: ಮೂರು ಬಾರಿ ಆಯ್ಕೆ ಯಾಗಿರುವ ಗದ್ದಿಗೌಡರ ಸಂಸತ್‌ನಲ್ಲಿ ಕರ್ನಾಟಕ ಜ್ವಲಂತ
ಸಮಸ್ಯೆಗಳ ಬಗ್ಗೆ ಚಕಾರ ಎತ್ತಲಿಲ್ಲ. ಜಿಲ್ಲೆಯ ಬೇಕಾಗುವ ರೈಲು, ವಿಮಾನ ನಿಲ್ದಾಣ, ರೈತರ ಹೋರಾಟದ ಬಗ್ಗೆ
ದನಿ ಎತ್ತಲಿಲ್ಲ. ಇಂತಹವರನ್ನು ಮತ್ತೆ ಆಯ್ಕೆ ಮಾಡಬೇಕಾ ? ಬದಲಾವಣೆಗೆ ಕಾಲಬಂದಿದೆ. ಆದ್ದರಿಂದ ಮೈತ್ರಿ
ಅಭ್ಯರ್ಥಿ ವೀಣಾ ಕಾಶಪ್ಪನವರಿಗೆ ಒಂದು ಮತ ನೀಡಿ ಅವಕಾಶ ಕೊಡಿ ಎಂದು ಸಚಿವ ಶಿವಾನಂದ ಪಾಟೀಲ ಮನವಿ
ಮಾಡಿದರು.
ಮೆಣಸಗಿ ಗ್ರಾಮದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬದಲಾವಣೆಗೆ ವೀಣಾ ಕಾಶಪ್ಪನವರ ಮತ ನೀಡಿ ಆಯ್ಕೆ ಮಾಡಬೇಕು. ಬಾಗಲಕೋಟೆ ಲೋಕಸಭಾ ಕ್ಷೇತ್ರದ ಜ್ವಲಂತ ಸಮಸ್ಯೆಗಳ ದನಿಯಾಗಿ ಸಂಸತ್ ನಲ್ಲಿ ಮಾತಾಡಲು ವೀಣಾ ಅವರನ್ನು ಗೆಲ್ಲಿಸುವ ಹೊಣೆ ಜನರ ಮೇಲಿದೆ ಎಂದು ತಿಳಿಸಿದರು.
ಮಾಜಿ ಶಾಸಕ ಬಿ.ಆರ್. ಯಾವಗಲ್ ಮಾತನಾಡಿ, ಬಿಜೆಪಿ ಉಳ್ಳವರ ಪರವಾದ ಪಕ್ಷ. ಕಾಂಗ್ರೆಸ್ ಬಡವರ, ಜನಸಾಮಾನ್ಯರ ಪಕ್ಷವಾಗಿದೆ. ಗೊಂದಲ, ಸುಳ್ಳು ಭರವಸೆ ನೀಡಿ ದಾರಿ ತಪ್ಪಿಸುತ್ತಾರೆ. ಅಂತವರಿಗೆ ಮತ ನೀಡಬೇಡಿ. ಬದಲಾವಣೆಗೆ ಮಹಿಳೆಗೆ ಅವಕಾಶ ನೀಡಬೇಕು ಎಂದರು.
ಜಿಪಂ ಸದಸ್ಯೆ ಶಾರದಮ್ಮ ಹಿರೇಗೌಡರ ಮಾತನಾಡಿ, ಗದ್ದಿಗೌಡರ ಅವರಿಗೆ ವಿಶ್ರಾಂತಿ ನೀಡಿ. ಮೊದಲ ಬಾರಿಗೆ
ವೀಣಾ ಅವರಿಗೆ ಅವಕಾಶ ಎಲ್ಲರೂ ಮತ ನೀಡಿ ಗೆಲ್ಲಿಸೋಣ ಎಂದು ತಿಳಿಸಿದರು. ಎಸ್.ಆರ್. ಪಾಟೀಲ, ಮೈತ್ರಿ ಅಭ್ಯರ್ಥಿ
ವೀಣಾ ಕಾಶಪ್ಪನವರ ಮಾತನಾಡಿದರು. ಈ ಮುನ್ನ ನರಗುಂದದ ಮೆಣಸಗಿಯ ಮುದಿಯಪ್ಪಮಠ, ಗುರಯ್ಯಸ್ವಾಮಿ ಮಠಕ್ಕೆ ತೆರಳಿ ಅಜ್ಜರ ದರ್ಶನ ಮಾಡಿದರು.
ಮಾಜಿ ಶಾಸಕ ಬಿ.ಆರ್. ಯಾವಗಲ್, ಎಸ್.ಆರ್. ಪಾಟೀಲ, ಮಲ್ಲಣ್ಣ ನಾಡಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಕೋಳೇರಿ, ಆರ್.ಎನ್. ಪಾಟೀಲ್, ಬಿ.ಅರ್. ಯಾವಗಲ್ ಉಪಸ್ಥಿತರಿದ್ದರು.