Advertisement

ಸಿಎಂ ಸ್ಥಾನಕ್ಕೆ ಖರ್ಗೆ ಹೆಸರು ತಿರಸ್ಕರಿಸಿದವರು ಯಾರು? ದೇವೇಗೌಡರಿಗೆ ಸಿದ್ದರಾಮಯ್ಯ ಪ್ರಶ್ನೆ

05:26 PM Dec 27, 2020 | Mithun PG |

ಮೈಸೂರು: ಬೇರೊಬ್ಬರ ಮೇಲೆ ಆರೋಪ ಮಾಡುವ ಬದಲು ಸಿಎಂ ಸ್ಥಾನಕ್ಕೆ ಖರ್ಗೆ ಹೆಸರು ತಿರಸ್ಕರಿಸಿದ್ದು ಯಾರು ಎಂಬುದನ್ನು ದೇವೇಗೌಡರೇ ಬಹಿರಂಗಪಡಿಸಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

Advertisement

ಸಿಎಂ ಸ್ಥಾನಕ್ಕೆ ಖರ್ಗೆ ಹೆಸರು ತಿರಸ್ಕರಿಸಿದ್ದು ನಾನಂತೂ ಅಲ್ಲ. ಯಾರು ಖರ್ಗೆ ಹೆಸರು ತಿರಸ್ಕಾರ ಮಾಡಿದವರು ಎಂಬ ಹೆಸರು ಹೇಳಲಿ. ಯಾರು ಮಾಡಿದರು ಎಂಬ ಬಗ್ಗೆ ನನಗೆ ಗೊತ್ತಿಲ್ಲ. ಅವರಿಗೆ ಗೊತ್ತಿದ್ದರೆ ಹೆಸರು ಹೇಳಲಿ ಎಂದು ಮಾಧ್ಯಮಗಳೊಂದಿಗೆ ಮಾರ್ಮಿಕವಾಗಿ ನುಡಿದರು.

ದೇವೇಗೌಡರ ಬಗ್ಗೆ ನಾನು ಪ್ರತಿಕ್ರಿಯೆ ನೀಡಬಾರದು ಎಂದುಕೊಂಡಿದ್ದೇನೆ. 1999ರಲ್ಲಿ ಜೆಡಿಎಸ್ ಅಧ್ಯಕ್ಷರಾಗಿದ್ದು ಯಾರು? 6 ವರ್ಷಗಳ ಕಾಲ‌ ಜೆಡಿಎಸ್ ಅಧ್ಯಕ್ಷನಾಗಿದ್ದು ನಾನು? ಹಾಗಾದರೆ ನಾನು ಅಧ್ಯಕ್ಷನಾಗಿದ್ದು ವ್ಯರ್ಥನಾ? ಎಂದು ಪ್ರಶ್ನಿಸಿದರು.

ಇಬ್ಬಾಗ ಮಾಡುವ ಹುನ್ನಾರ :

Advertisement

ಡಿ.29ಕ್ಕೆ ಮೈಸೂರಿನಲ್ಲಿ ಕುರುಬರ ಎಸ್‌ಟಿ‌ ಮೀಸಲಾತಿ ಹೋರಾಟ ಹಿನ್ನೆಲೆ ಪ್ರತಿಕ್ರಿಯಿಸಿದ ಅವರು, ಕುರುಬ ಸಮುದಾಯ ಎಸ್‌ಟಿಗೆ ಸೇರಿಸಲು ಹೋರಾಟದ ಅಗತ್ಯವೇ ಇಲ್ಲ. ಇದು ಕುರುಬರನ್ನು ಇಬ್ಬಾಗ ಮಾಡುವ ಹುನ್ನಾರ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಾನು ಸಿಎಂ ಆಗಿದ್ದಾಗಲೇ ಕುಲಶಾಸ್ತ್ರ ಅಧ್ಯಯನಕ್ಕೆ ಶಿಫಾರಸ್ಸು ಮಾಡಿದ್ದೆ. ಈಶ್ವರಪ್ಪ, ವಿಶ್ವನಾಥ್ ಇಬ್ಬರೂ ಬಿಜೆಪಿ ಸರ್ಕಾರದಲ್ಲಿದ್ದಾರೆ. ಅವರು ಕುಲಶಾಸ್ತ್ರ ಅಧ್ಯಯನ ವರದಿ ಪಡೆದು ಕೇಂದ್ರಕ್ಕೆ ಶಿಫಾರಸ್ಸು ಮಾಡಿಸಲಿ ಎಂದರು.

ಸಿದ್ದರಾಮಯ್ಯ ನನ್ನ ಫ್ರೆಂಡು:

ಸಿದ್ದರಾಮಯನಹುಂಡಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯರವರನ್ನ ಭೇಟಿಯಾಗಲು ಲಕ್ಷ್ಮಮ್ಮ ಎಂಬ ವೃದ್ದೆ ಊರುಗೋಲು ಹಿಡಿದುಕೊಂಡು ಕಾದು ಕುಳಿತಿದ್ದಲ್ಲದೆ, ಸಿದ್ದರಾಮಯ್ಯ ನನ್ನ ಫ್ರೆಂಡ್. ಅದಕ್ಕೋಸ್ಕರ ಅವರನ್ನು ಭೇಟಿ ಮಾಡಲು ಬಂದಿದ್ದೀನಿ ಎಂದು ಲಕ್ಷ್ಮಮ್ಮ ಎಂಬ ವೃದ್ದೆ ಎಲ್ಲರನ್ನೂ ಆಕರ್ಷಿಸಿದ ಘಟನೆ ನಡೆಯಿತು.

ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆ ಮತದಾನ ಮಾಡಲು ಸ್ವಗ್ರಾಮ ಸಿದ್ದರಾಮಯನಹುಂಡಿಗೆ ಸಿದ್ದರಾಮಯ್ಯ ಆಗಮಿಸಿದ್ದ ವೇಳೆ ಲಕ್ಷ್ಮಮ್ಮ ಮತಗಟ್ಟೆ ಬಳಿಗೆ ಆಗಮಿಸಿದ್ದರು. ಮಾತ್ರವಲ್ಲದೆ ನಾನು ಸಿದ್ದರಾಮಯ್ಯನನ್ನು ನೋಡಲೇಬೇಕೆಂದು ಮತಗಟ್ಟೆ ಹೊರಗೆ ಕಾದುಕುಳಿತಿದ್ದ ಲಕ್ಷ್ಮಮ್ಮ, ಸಿದ್ದರಾಮಯ್ಯ ಮತಹಾಕಿ ಹೊರಬಂದ ಕೂಡಲೇ ಕಾರಿನ ಬಳಿ ನಿಂತು ಲಕ್ಷ್ಮಮ್ಮ ಮಾತನಾಡಿಸಿದರು.

ನನಗೂ ಸಿದ್ದರಾಮಯ್ಯರವರಿಗೂ ಆಸುಪಾಸು ಒಂದೇ ವಯಸ್ಸು. ಸಿದ್ದರಾಮಯ್ಯ ನನ್ನ ಫ್ರೆಂಡ್.

Advertisement

Udayavani is now on Telegram. Click here to join our channel and stay updated with the latest news.

Next