Advertisement
ಕಳೆದ 20 ವರ್ಷಗಳಿಗೂ ಹೆಚ್ಚು ಕಾಲದಿಂದ ಯಡಿಯೂರಪ್ಪ ಜತೆ ಬಲವಾಗಿ ನಿಂತಿದ್ದ ವೀರಶೈವ- ಲಿಂಗಾಯತ ಮತಗಳು ಈ ಚುನಾ ವಣೆಯಲ್ಲಿ ಚದುರಿ ಹೋಗಲಿವೆ ಎಂಬ ಆತಂಕ ಬಿಜೆಪಿಯನ್ನು ಕಾಡುತ್ತಿ ದ್ದರೆ, ಚದುರಿದ ಮತಗಳು ನಮಗೆ ಬೀಳಲಿವೆ ಎಂಬ ವಿಶ್ವಾಸ ಕಾಂಗ್ರೆಸ್‌ನದು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ವೀರಶೈವ-ಲಿಂಗಾಯತ ಮತಗಳನ್ನು ಸೆಳೆಯಲು ಕಾಂಗ್ರೆಸ್‌ನಲ್ಲಿ “ಯಾರು ನಾಯಕ’ ಎಂಬ ಪ್ರಶ್ನೆಗಳು ಮೂಡಿವೆ.
Related Articles
Advertisement
ಇನ್ನು ಎಂ.ಬಿ.ಪಾಟೀಲರು ಪ್ರಭಾವಿ ನಾಯಕ. ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ರೂಪಿಸಿ ಅಲ್ಪಸಂಖ್ಯಾಕ ಸ್ಥಾನಮಾನ, ಮೀಸ ಲಾತಿಗಾಗಿ ಸ್ವತಂತ್ರ ಧರ್ಮ ಹೋರಾಟದ ಮೂಲಕ ಲಿಂಗಾಯತರಲ್ಲಿ ಜಾಗೃತಿ ಮೂಡಲು ಎಂ.ಬಿ.ಪಾಟೀಲರು ಕಾರಣ ಎಂಬ ಮಾತಿದೆ. ಈಗ ಎಂ.ಬಿ.ಪಾಟೀಲರು “ರಾಜತಾಂತ್ರಿಕ’ವಾಗಿ ಹೆಜ್ಜೆ ಇಡಲು ಹೊರಟಿದ್ದಾರೆ ಎನ್ನಲಾಗಿದೆ. ಕಾವೇರಿ ಜಲ ವಿವಾದವೂ ಸಹಿತ ನೀರಾವರಿ ಖಾತೆ ನಿರ್ವಹಿಸಿದ ಬಗ್ಗೆ ಅನುಭವ ಹೊಂದಿದ್ದಾರೆ. ದಿಲ್ಲಿಯಲ್ಲಿ ಪಕ್ಷದ ವರಿಷ್ಠರೊಂದಿಗಿನ ಒಳ್ಳೆಯ ಸಂಪರ್ಕ, ಸಂಬಂಧವಿಟ್ಟುಕೊಂಡು ಪ್ರಭಾವಿ ನಾಯಕರಾಗಿದ್ದಾರೆ. ನಾನು ಕೂಡ ಸಿಎಂ ಹುದ್ದೆ ಆಕಾಂಕ್ಷಿ ಎಂದು ಹಲವು ಸಲ ಹೇಳಿಕೊಂಡಿದ್ದಾರೆ. ಹೀಗಾಗಿ ಈಗ ಕಾಂಗ್ರೆಸ್‌ನಲ್ಲಿ ಲಿಂಗಾಯತ ನಾಯಕತ್ವಕ್ಕೆ ಖಂಡ್ರೆ ಮತ್ತು ಎಂ.ಬಿ.ಪಾಟೀಲರ ನಡುವೆ ಪೈಪೋಟಿ ಇದೆ. ಆದರೆ ಪಾಟೀಲರು ಪಕ್ಷಕ್ಕೆ “ಸಂಪನ್ಮೂಲ’ ವ್ಯಕ್ತಿಯಾಗಬಲ್ಲವರಾಗಿರುವುದರಿಂದ ಇವರ ಹೆಸರು ಮುಂಚೂಣಿಯಲ್ಲಿದೆ ಎಂದು ಪಕ್ಷದೊಳಗೆ ವಿಶ್ಲೇಷಿಸಲಾಗುತ್ತಿದೆ.
ಒಕ್ಕಲಿಗರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು, ಕುರುಬ ಸಮುದಾಯದ ಮಂದಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಹಾಗೂ ಲಿಂಗಾಯತರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ತಮ್ಮ ಸಮಾಜದ ನಾಯಕರಾಗಿ ಒಪ್ಪಿಕೊಂಡಿದ್ಧಾರೆ. ಆದರೆ ಈಗ ಯಡಿಯೂರಪ್ಪ ಅವರ ರಾಜಕೀಯ ಚಿತ್ರಣ ಬದಲಾಗಿರುವುದರಿಂದ ಲಿಂಗಾ ಯತರಿಗೆ ಮತ್ತೂಬ್ಬ ನಾಯಕ ಬೇಕಿದೆ. ಹೀಗಾಗಿ ಸದ್ಯಕ್ಕೆ ಲಿಂಗಾ ಯತರು ಕಾಂಗ್ರೆಸ್ ಕಡೆ ಮುಖ ಮಾಡುವ ಸಾಧ್ಯತೆಗಳಿರು ವುದರಿಂದ ಅವರನ್ನು ಸೆಳೆಯಲು ಕಾಂಗ್ರೆಸ್‌ನಲ್ಲಿ ಲಿಂಗಾಯತರ ನಾಯಕ ಯಾರು ಎಂಬ ಪ್ರಶ್ನೆಗಳಿಗೆ ಉತ್ತರವಿಲ್ಲ.
ಕಾಂಗ್ರೆಸ್ ಪಕ್ಷದಲ್ಲಿ ರಾಜ್ಯ ಹಾಗೂ ದಿಲ್ಲಿಯಲ್ಲಿ ಅತ್ಯಂತ ಪ್ರಭಾವಿ ನಾಯಕರಾಗಿದ್ದ ವೀರೇಂದ್ರ ಪಾಟೀಲರು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ತರುವಲ್ಲಿ ತಮ್ಮದೇ ಕೊಡುಗೆ ನೀಡಿದ್ದಾರೆ. 1989ರಲ್ಲಿ 178 ಕ್ಷೇತ್ರಗಳಲ್ಲಿ ಅಭೂತಪೂರ್ವ ಜಯ ತಂದುಕೊಟ್ಟ ವೀರೇಂದ್ರ ಪಾಟೀಲರನ್ನು ಕೆಳಗಿಳಿಸಿದ ಕ್ರಮದಿಂದಾಗಿ ಲಿಂಗಾಯತ ಸಮಾಜ ಅಂದಿನಿಂದಲೂ ಕಾಂಗ್ರೆಸ್‌ನಿಂದ ದೂರ ಉಳಿದಿದೆ ಎಂಬುದನ್ನು ಕಾಂಗ್ರೆಸಿಗರೇ ಒಪ್ಪುತ್ತಾರೆ.ಲಿಂಗಾಯತರಿಗೆ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್, ಯಡಿಯೂರಪ್ಪ ಅನಂತರ ಯಾರು ನಾಯಕರಾಗಬಲ್ಲರು ಎನ್ನುವುದು ಎಲ್ಲ ಪಕ್ಷಗಳಿಗೂ ಕಾಡುವ ಯಕ್ಷ ಪ್ರಶ್ನೆಯಾಗಿದೆ. -ಎಂ.ಎನ್.ಗುರುಮೂರ್ತಿ