ಬೆಂಗಳೂರು: ”ಕೆಂಪಣ್ಣ ಆರೋಪಕ್ಕೆ ಡೈರೆಕ್ಟರ್, ಪ್ರೊಡ್ಯೂಸರ್ ಯಾರು ಎನ್ನುವುದು ಸದ್ಯದಲ್ಲೇ ಗೊತ್ತಾಗುತ್ತದೆ. ಬಿಬಿಎಂಪಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ಆರೋಪ ಮಾಡಲಾಗಿದ್ದು,ಇದು ಪಾರ್ಟ್ ಆಫ್ ಟೂಲ್ ಕಿಟ್” ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಿಡಿ ಕಾರಿದ್ದಾರೆ.
ದಾಖಲೆ ನೀಡಿ ಎಂದರೆ ನೀಡುವುದಿಲ್ಲ. ಆರೋಪ ಮಾಡೋದು ಸುಲಭ. ಕೆಂಪಣ್ಣ ಗೆ ಪ್ರಚೋದನೆ ಎಲ್ಲಿಂದ ಸಿಗುತ್ತಿದೆ.ಅವರ ಗುಂಪಿನಲ್ಲಿ ಒಬ್ಬ ಚಿಕ್ಕಮಗಳೂರು ವ್ಯಕ್ತಿ ಇದ್ದ. ಅವನು ನನ್ನ ವಿರುದ್ಧ ಸ್ಪರ್ಧೆ ಮಾಡಿದ್ದ. ನ್ಯಾಯಾಂಗ ತನಿಖೆ ನೀಡುವುದಕ್ಕೆ ಒಂದು ಬೇಸಿಕ್ ಪ್ರಕರಣ ಬೇಕು.ನಾಳೆ ನ್ಯಾಯಾಂಗ ತನಿಖೆ ಮಾಡುವುದಕ್ಕೆ ನಿರ್ದಿಷ್ಟ ವಿಚಾರ ಬೇಕು.ಇವರು ಹೇಳುತ್ತಾರೆ ಎಂದು ನೀಡಿದರೆ, ಅವರಿಗೆ ತಲೆ ಕೆಟ್ಟಿದೆ ಎಂದು ನಿಮಗೂ ತಲೆ ಕೆಟ್ಟಿದ್ಯಾ ಎಂದು ಕೇಳಬಹುದು ಎಂದರು.
ಬಾಂಬ್ ಅಂತು ಹಾಕಲ್ಲ
ಮದರಸಾ ಶಿಕ್ಷಣ ಬಗ್ಗೆ ಮಕ್ಕಳ ಶಿಕ್ಷಣ ದ ಬಗ್ಗೆ ಕೇಳೊದು ಏನು ತಪ್ಪು.ತಾಲೀಬಾನ್ ಏನಾಗಿದೆ ಇವತ್ತು.ಶಿಕ್ಷಣ ಇಲಾಖೆ ಮದರಸ ಬಗ್ಗೆ ಗಮನ ನೀಡೊದು ಏನು ತಪ್ಪು. ಗಣೇಶ ಹಬ್ಬ ಚಾಮರಾಜಪೇಟೆ ಮೈದಾನದಲ್ಲಿ ಮಾಡುವುದರಲ್ಲಿ ತಪ್ಪೇನಿದೆ? ಬಿಜೆಪಿ ಸರ್ಕಾರ ಇದ್ದಾಗ ಯಾಕೆ ಮಾಡಬಾರದು? ಹಬ್ಬ ಮಾಡೋರು ಯಾರೂ ಬಾಂಬ್ ಅಂತು ಹಾಕಲ್ಲ. ಅಷ್ಟು ಗ್ಯಾರಂಟಿ ನಾನು ಕೊಡುತ್ತೇನೆ. ಹೆಚ್ಚು ಅಂದರೆ ಗಣಪತಿ ಬೊಪ್ಪ ಮೋರಯ ಎಂದು ಕೂಗಬಹುದು ಎಂದರು.
ಗುತ್ತಿಗೆದಾರರ ಬಿಲ್ ಪಾವತಿಗೆ ಶೇ.40ರಷ್ಟು ಕಮಿಷನ್ ಪಾವತಿ ಆರೋಪವನ್ನು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ನಿಯೋಗ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದು ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.