Advertisement

ರಂಜನ್ ಗೋಗೋಯ್: ಇವರ ಬಗ್ಗೆ ನಿಮಗೆ ಗೊತ್ತಿರಲೇ ಬೇಕಾದ ಕೆಲವು ಮಾಹಿತಿ 

09:57 AM Nov 10, 2019 | keerthan |

ಹೊಸದಿಲ್ಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ರಂಜನ್ ಗೋಗೋಯ್  ಕಳೆದ ಕೆಲ ದಿನಗಳಿಂದ ಟ್ರೆಂಡಿಂಗ್ ನಲ್ಲಿರುವ ಹೆಸರು. ಸದ್ಯ ಭಾರತವಷ್ಟೇ ಅಲ್ಲ ವಿಶ್ವದಾದ್ಯಂತ ಕೋಟ್ಯಾಂತರ ಜನ ಇವರ ಆ ಒಂದು ತೀರ್ಪಿಗಾಗಿ ಕಾದು ಕುಳಿತಿದ್ದಾರೆ. ಅಂದಹಾಗೆ ರಂಜನ್ ಗೋಗೋಯ್ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲವು ಕುತೂಹಲಕಾರಿ ಮಾಹಿತಿಗಳು ಇಲ್ಲಿವೆ.

Advertisement

ಸದ್ಯ ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿರುವ ರಂಜನ್ ಗೋಗೋಯ್ ಜನಿಸಿದ್ದು 18 ನವೆಂಬರ್‌ 1954ರಂದು. ಅಸ್ಸಾಂನ ದಿಬುರ್ ಗಢ್ ಇವರ ಜನ್ಮ ಸ್ಥಳ. ಇವರ ತಂದೆ ಕೇಶವ್ ಚಂದ್ರ ಗೋಗೋಯ್  ಕಾಂಗ್ರೆಸ್‌ ನ ಹಿರಿಯ ನಾಯಕರಾಗಿದ್ದರು. ಎರಡು ತಿಂಗಳ ಕಾಲ ಅಸ್ಸಾಂ ನ ಮುಖ್ಯಮಂತ್ರಿಯೂ ಆಗಿದ್ದರು.

ದೆಹಲಿಯ ಸ್ಟೀಫನ್‌ ಕಾಲೇಜಿನಲ್ಲಿ ಇತಿಹಾಸ ವಿಭಾಗದಲ್ಲಿ ಪದವಿ ಪಡೆದ ರಂಜನ್ ನಂತರ ದೆಹಲಿ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆಯುತ್ತಾರೆ. 1978ರಲ್ಲಿ ಗುವಾಹಾಟಿ ಹೈಕೋರ್ಟ್ ನಲ್ಲಿ ಅಭ್ಯಾಸ ಆರಂಭಿಸಿದ ರಂಜನ್ ಗೋಗೋಯ್ 2001ರ  ಫೆಬ್ರವರಿಯಲ್ಲಿ ಗುವಾಹಟಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗುತ್ತಾರೆ. 2010ರ ಸಪ್ಟೆಂಬರ್ ನಲ್ಲಿ ಪಂಜಾಬ್ ಮತ್ತು ಹರ್ಯಾಣ ಕೋರ್ಟ್ ಗೆ ವರ್ಗಾವಣೆಯಾಗುತ್ತಾರೆ. 2011ರ ಫೆಬ್ರವರಿಯಲ್ಲಿ ಅಲ್ಲಿನ ಮುಖ್ಯ ನ್ಯಾಯಾಧೀಶರಾಗಿ ನೇಮಕವಾಗುತ್ತಾರೆ.

2012 ಎಪ್ರಿಲ್‌ ತಿಂಗಳಲ್ಲಿ ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರಾಗಿ ಆಯ್ಕೆಯಾದ ರಂಜನ್ ಗೋಗೋಯ್ 2018 ರ ಅಕ್ಟೋಬರ್ 3ರಂದು ದೀಪಕ್ ಮಿಶ್ರಾ ಅವರ ಉತ್ತರಾಧಿಕಾರಿಯಾಗಿ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ಆಯ್ಕೆಯಾಗುತ್ತಾರೆ.

ಗೋವಿಂದ ಸ್ವಾಮಿ ವರ್ಸಸ್ ಕೇರಳ ರಾಜ್ಯ ಪ್ರಕರಣ, ಎನ್ ಆರ್ ಸಿ, ಅಮಿತಾಭ್ ಬಚ್ಚನ್ ಆದಾಯ ಪ್ರಕರಣ ಹೀಗೆ ಮಹತ್ವದ ತೀರ್ಪುಗಳನ್ನು ನೀಡಿರುವ ರಂಜನ್ ಗೋಗೋಯ್ ಗೆ ಅಯೋಧ್ಯೆ ತೀರ್ಪು ಮಹತ್ವದ್ದಾಗಿದೆ.

Advertisement

ಇದೇ ನವೆಂಬರ್ 17ರಂದು ರಂಜನ್ ಗೋಗೋಯ್ ನಿವೃತ್ತಿಯಾಗಲಿದ್ದಾರೆ. ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಶರದ್ ಅರವಿಂದ ಬೋಬ್ಡೆ ಅವರನ್ನು ಆಯ್ಕೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next