Advertisement

ಯಾರ ಸಾವಿಗೆ ಯಾರೂಕಾರಣರಲ್ಲ: ಎಚ್.ವಿಶ್ವನಾಥ

04:02 PM May 10, 2019 | Team Udayavani |

ಹಾವೇರಿ: ಯಾರ ಸಾವಿಗೆ ಯಾರೂ ಕಾರಣರಲ್ಲ. ಸಿ.ಎಸ್‌. ಶಿವಳ್ಳಿ ಅವರ ಸಾವಿನ ಬಗ್ಗೆ ಶ್ರೀರಾಮುಲು ನೀಡಿದ ಹೇಳಿಕೆ ಬಾಲಿಶತನದ್ದು, ಇಂಥ ವಿಷಯಗಳನ್ನು ಯಾರೂ ಮಾತನಾಡಬಾರದು. ಅದನ್ನು ನಂಬಲೂ ಬಾರದು ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ ಹೇಳಿದರು.

Advertisement

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಠಾಧಿಪತಿಗಳು ಸಹ ಒಬ್ಬ ಮತದಾರರು. ಅವರು ತಮ್ಮ ಅಭಿಮಾನದಿಂದ ಇಂಥವರು ಸಿಎಂ ಆಗಬೇಕು ಎಂದು ಹೇಳುವುದರಲ್ಲಿ ತಪ್ಪಿಲ್ಲ. ಆದರೆ, ಯಾವುದೇ ಪಕ್ಷದ ಪರ ಮತ ಹಾಕಿ ಎನ್ನುವುದು ತಪ್ಪು. ಅದೇ ರೀತಿ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ಹೇಳಿದ್ದರಲ್ಲಿ ತಪ್ಪೇನೂ ಇಲ್ಲ. ಸಿದ್ದರಾಮಯ್ಯ ಈಗಾಗಲೇ ಸಿಎಂ ಖುರ್ಚಿ ಖಾಲಿ ಇಲ್ಲ. ಇದು ಸಂದರ್ಭವೂ ಅಲ್ಲ ಎಂದು ಹೇಳಿದ್ದಾರೆ. ಮುಂದೆ ಜನರು ಆಶೀರ್ವಾದ ಮಾಡಿದರೆ ಸಿಎಂ ಆಗುತ್ತೇನೆ ಎಂದಿದ್ದಾರೆ. ಹೀಗಾಗಿ ಅವರೇ ಎಲ್ಲರ ಪ್ರಶ್ನೆಗಳಿಗೂ ಉತ್ತರ ನೀಡಿದ್ದಾರೆ ಎಂದರು.

ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಹದಿನಾಲ್ಕು ದಿನ ಬಾಕಿ ಇದೆ. ಯಾರು ಯಾರಿಗೆ ಮತ ಹಾಕಿದ್ದಾರೆ ಎಂದು ಸತ್ಯ ಹೇಳುತ್ತಿಲ್ಲ. ಈ ಬಾರಿ ಹೆಚ್ಚು ಮತದಾನ ಆಗಿದೆ. ಹೆಚ್ಚು ಮತದಾನ ಆದಾಗ ಆಡಳಿತ ಪಕ್ಷ‌ದ ವಿರುದ್ಧ ಮತದಾನ ಆಗಿರುತ್ತದೆ. ಆದರೆ, ಅದು ರಾಜ್ಯದ ವಿರುದ್ಧವೋ ಅಥವಾ ಕೇಂದ್ರದ ವಿರುದ್ಧವೋ ಎಂಬುದು ಮತ ಎಣಿಕೆ ನಂತರವೇ ಗೊತ್ತಾಗಲಿದೆ. ನೀತಿ ಸಂಹಿತೆ ಇರುವುದರಿಂದ ಕುಡಿಯುವ ನೀರಿನ ಸಮಸ್ಯೆ ಕುರಿತು ಸಭೆ ನಡೆಸಲು ಆಗಿಲ್ಲ. ಕೆಲವರು ಅನವಶ್ಯಕವಾಗಿ ಸಿಎಂ ಕುಮಾರಸ್ವಾಮಿ ಅವರನ್ನು ದೂರುತ್ತಿದ್ದಾರೆ. ಇದು ಸರಿಯಲ್ಲ. ಸಾಲಮನ್ನಾ ವಿಚಾರವಾಗಿ ಸಿಎಂ ಸುಧೀಧಿರ್ಘ‌ ಸಭೆ ಮಾಡಿದ್ದಾರೆ. ಶೀಘ್ರದಲ್ಲಿಯೇ ಸಿಹಿ ಸುದ್ದಿಯೂ ನೀಡುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next