Advertisement

ಮುಂಬೈ ಈಶಾನ್ಯದಲ್ಲಿ ಯಾರು?

11:20 AM May 04, 2019 | Team Udayavani |

ಮುಂಬೈನ ಪ್ರಮುಖ ಲೋಕಸಭಾ ಕ್ಷೇತ್ರಗಳಲ್ಲೊಂದು ಮುಂಬೈ ಈಶಾನ್ಯ. ಶಿವಸೇನೆ ಮತ್ತು ಬಿಜೆಪಿ ಮಹಾರಾಷ್ಟ್ರದಲ್ಲಿ ಜತೆಗೂಡಿ ಸ್ಪರ್ಧಿಸಲಿವೆಯೇ ಇಲ್ಲವೋ ಎಂಬ ಗೊಂದಲದ ನಡುವೆಯೇ ಭಿನ್ನಾಭಿಪ್ರಾಯಗಳನ್ನು ಮರೆತು ಎರಡೂ ಪಕ್ಷಗಳು ಒಟ್ಟಾಗಿದವು. ಹಾಲಿ ಸಂಸದ ಡಾ.ಕಿರೀಟ್ ಸೋಮಯ್ಯ ಶಿವಸೇನೆಯ ನಾಯಕತ್ವದ ವಿರುದ್ಧ ಮಾತನಾಡಿ ಟಿಕೆಟ್ ವಂಚಿತರಾಗಿದ್ದಾರೆ. ಬದಲಾಗಿ ಬೃಹನ್ಮುಂಬೈ ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯ ಮನೋಜ್‌ ಕೊಟಕ್‌ ಅವರಿಗೆ ಸ್ಪರ್ಧಿಸುವ ಅವಕಾಶ ಕೊಡಲಾಗಿದೆ. ಇವರು ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವಿಸ್‌ಗೆ ನಿಕಟವರ್ತಿ. ಇನ್ನು ಕಾಂಗ್ರೆಸ್‌- ಎನ್‌ಸಿಪಿ ಮೈತ್ರಿಕೂಟದಿಂದ ಹಿಂದಿನ ಬಾರಿ ದ್ವಿತೀಯ ಸ್ಥಾನಿಯಾಗಿರುವ ಸಂಜಯ ದಿನಾ ಪಾಟೀಲ್ ಮತ್ತೂಮ್ಮೆ ಕಣಕ್ಕೆ ಇಳಿದಿದ್ದಾರೆ.

Advertisement

ಜಾತಿ ಲೆಕ್ಕಾಚಾರ: ಇಲ್ಲಿ ಎಸ್‌ಸಿ ಸಮುದಾಯದ ಶೇ.8.14, ಎಸ್‌ಟಿ ಸಮುದಾಯದ ಶೇ.1.22 ಮಂದಿ ಇದ್ದಾರೆ. ಅವರನ್ನು ಬಿಜೆಪಿ ಮತ್ತು ಎನ್‌ಸಿಪಿ ನಾಯಕರು ಪ್ರಚಾರದ ಸಂದರ್ಭದಲ್ಲಿ ಓಲೈಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಶಿವಸೇನೆಯ ಬೆಂಬಲ ಅಗತ್ಯ. ಭಾಂಡುಪ್‌, ವಿಖ್ರೋಲಿ, ಮುಲುಂದ್‌ ಕ್ಷೇತ್ರಗಳಲ್ಲಿ ಮರಾಠಿ ಭಾಷಿಕರ ಮತಗಳು ಹೆಚ್ಚಾಗಿವೆ. ಬಿಜೆಪಿ ಶಾಸಕರು ಇದ್ದರೂ, ಶಿವಸೇನೆಯ ಪ್ರಭಾವ ಈ ಕ್ಷೇತ್ರಗಳಲ್ಲಿ ಹೆಚ್ಚಾಗಿಯೇ ಇರುವುದರಿಂದ ಮತ್ತು ಹಾಲಿ ಸಂಸದರ ವಿರುದ್ಧ ಶಿವಸೇನೆ ಕಾರ್ಯಾಧ್ಯಕ್ಷ ಉದ್ಧವ್‌ ಠಾಕ್ರೆ ಖಡಾ ಖಂಡಿತವಾಗಿ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿರುವುದೂ ಬದಲಾವಣೆಗೆ ಕಾರಣ ಎಂದು ಹೇಳಲಾಗುತ್ತಿದೆ. ಈ ವ್ಯಾಪ್ತಿಯಲ್ಲಿರುವ ಗುಜರಾತಿ ಸಮುದಾಯದ ಮತಗಳು ಮತ್ತು ಮೋದಿಯವರ ಪ್ರಭಾವಳಿ ಚುನಾವಣೆಯಲ್ಲಿ ಮತಗಳಾಗಿ ಪರಿವರ್ತನೆಯಾಗಲಿದೆ ಎಂದು ಬಿಜೆಪಿ ನಂಬಿಕೊಂಡಿದೆ. 2009ರಲ್ಲಿ ರಾಜ್‌ ಠಾಕ್ರೆ ನೇತೃತ್ವದ ಎಂಎನ್‌ಎಸ್‌ ಅಭ್ಯರ್ಥಿಯಿಂದಾಗಿ ಬಿಜೆಪಿ ಸೋಲು ಅನುಭವಿಸಿತ್ತು.

ಬಿಜೆಪಿ-ಶಿವಸೇನೆ ಮೈತ್ರಿಕೂಟದ ಅಭ್ಯರ್ಥಿಗೆ ಸವಾಲಾಗಿರುವ ಮತ್ತೂಂದು ಅಂಶವೆಂದರೆ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಎನ್‌ಸಿಪಿಗೆ ಬೆಂಬಲ ಘೋಷಣೆ ಮಾಡಿರುವುದು. ಇದರ ಜತೆಗೆ ದಲಿತರ ಮತ್ತು ಮುಸ್ಲಿಂ ಸಮುದಾಯದ ಮತಗಳು ಯಾರಿಗೆ ಚಲಾವಣೆಗೊಳ್ಳಲಿವೆ ಎನ್ನುವುದು ಪ್ರಮುಖವಾಗಲಿದೆ.

ಸ್ಥಳೀಯರ ಪ್ರಕಾರ ಎಂಎನ್‌ಎಸ್‌ 2009ರಲ್ಲಿ ಮಾಡಿದಂತೆ ಬಿಜೆಪಿಯನ್ನು ಸೋಲಿಸುವ ಸಾಮರ್ಥ್ಯ ಇದೆ ಎನ್ನುತ್ತಾರೆ. ಇನ್ನು ಮುಲುಂದ್‌ ವ್ಯಾಪ್ತಿಯಲ್ಲಿರುವ ಹೌಸಿಂಗ್‌ ಸೊಸೈಟಿಗಳು, ಮನ್‌ಖುದ್‌ರ್ನಲ್ಲಿರುವ ಸಣ್ಣ ನಿವಾಸಗಳ ಗುಂಪು, ಭಾಂಡುಪ್‌ನಲ್ಲಿರುವ ಉದ್ಯೋಗಕ್ಕೆ ತೆರಳಿ ಜೀವಿಸುವ ಕುಟುಂಬಗಳು, ಘಾಟ್ಕೋಪರ್‌-ಮುಲುಂದ್‌ನಲ್ಲಿರುವ ಐಷಾರಾಮಿ ಬಂಗಲೆಗಳಲ್ಲಿರುವವರು ಈಗಾಗಲೇ ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದ್ದಾರೆ.

ಒಂದು ಕ್ಷೇತ್ರದಲ್ಲಿ ಎಸ್‌ಪಿ: ಈ ಕ್ಷೇತ್ರದಲ್ಲಿ ಮುಲುಂದ್‌ (ಬಿಜೆಪಿ), ವಿಖ್ರೋಲಿ (ಶಿವಸೇನೆ), ಭಾಂಡೂಪ್‌ ವೆಸ್ಟ್‌ (ಶಿವಸೇನೆ), ಘಾಟ್ಕೋಪರ್‌ ವೆಸ್ಟ್‌ (ಬಿಜೆಪಿ), ಘಾಟ್ಗೋಪರ್‌ ಈಸ್ಟ್‌ (ಬಿಜೆಪಿ), ಮನ್‌ಖುದ್‌ರ್ ಶಿವಾಜಿ ನಗರ (ಎಸ್‌ಪಿ) ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ ಒಂದು ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಶಾಸಕರು ಇದ್ದಾರೆ.

Advertisement

ಈ ಬಾರಿ ಕಣದಲ್ಲಿ
ಮನೋಜ್‌ ಕೊಟಕ್‌(ಬಿಜೆಪಿ)
ಸಂಜಯ ದಿನಾ ಪಾಟೀಲ್ (ಎನ್‌ಸಿಪಿ)

Advertisement

Udayavani is now on Telegram. Click here to join our channel and stay updated with the latest news.

Next