Advertisement

ಹೂವು ಯಾರಿಗೆ?

12:10 PM Mar 01, 2018 | Team Udayavani |

ರಾಜಕುಮಾರನಾಗಿಯೇ ಹುಟ್ಟಿದ್ದ ಬುದ್ಧ ಒಂದು ರಾಜಮನೆತನದಲ್ಲಿ ಸುಖವಾಗಿ ಬೆಳೆದವನು. ಆತನ ಶಿಷ್ಯರೆಲ್ಲ ಆತನನ್ನು ದೇವರೆಂದೇ ತಿಳಿದಿದ್ದರು. ಡಿಸೆಂಬರ್‌ನ ಒಂದು ಚಳಿಯ ರಾತ್ರಿಯಲ್ಲಿ ಎಲ್ಲಾ ಹೂವುಗಳು ಬಾಡಿದ ಸಮಯದಲ್ಲಿ ಒಂದೇ ಒಂದು ಹೂವು ಅರಳಿತ್ತು. ಅದು ಸುದಾಸ್‌ ಎಂಬ ಒಬ್ಬ ಹೂಗಾರನ ಮನೆಯ ಕೈದೋಟದ ಕೊಳದಲ್ಲಿ ಅರಳಿತ್ತು. ಅದನ್ನು ಆತ ಕಿತ್ತು, ತೆಗೆದುಕೊಂಡು ರಾಜನ ಕೋಟೆಯ ಬಳಿ ಬಂದು ಸೇವಕನನ್ನು ಒಳಗೆ ಬಿಡಲು ಬೇಡುತ್ತಾನೆ. ಆದರೆ ಆತನನ್ನು ಯಾರೂ ಒಳಬಿಡುವುದಿಲ್ಲ. ಅವನು ಬಹಳ ಬೇಜಾರಿನಿಂದ ತಿರುಗಿ ಹೋಗುತ್ತಿರುವಾಗ ಒಬ್ಬ ದಾರಿಹೋಕನನ್ನು ನೋಡುತ್ತಾನೆ. ಆ ದಾರಿಹೋಕ “ನಿನ್ನ ಹೂವನ್ನು ಕೊಳ್ಳುವೆನು. ಅದಕ್ಕೆ ಬದಲಾಗಿ ಒಂದು ಚಿನ್ನದ ನಾಣ್ಯವನ್ನು ಕೊಡುವೆನು’ ಎಂದು ಹೇಳುತ್ತಾನೆ. ಅದೇ ಸಂದರ್ಭದಲ್ಲಿ ಅಲ್ಲಿಗೆ ಬಂದ ರಾಜ ಪ್ರಸೇನಜಿತ್‌ ಈ ಹೂವನ್ನು ನೋಡಿ “ನಾನು ನಿನಗೆ ಹತ್ತು ನಾಣ್ಯ ಕೊಡುತ್ತೇನೆ. ಆ ಹೂವನ್ನು ನನಗೆ ಕೊಡು. ಈ ಹೂವನ್ನು ನಾನು ಬುದ್ಧನಿಗೆ ಅರ್ಪಿಸುತ್ತೇನೆ’ ಎನ್ನುತ್ತಾನೆ. ದಾರಿಹೋಕ ಮತ್ತು ರಾಜನ ನಡುವೆ ಮಾತಿಗೆ ಮಾತು ಬೆಳೆಯುತ್ತದೆ. ಅದನ್ನು ನೋಡಲಾಗದೆ ಇಬ್ಬರಿಗೂ ಹೂವನ್ನು ಕೊಡುವುದಿಲ್ಲ ಎಂದು ಹೂಗಾರ ಅಲ್ಲಿಂದ ಹೊರಡುತ್ತಾನೆ. ಬುದ್ಧ ದೇವರಿಗೆ ಈ ಹೂವನ್ನು ತಾನೇ ಅರ್ಪಿಸುವ ಮನಸ್ಸಾಗುತ್ತದೆ ಸುದಾಸನಿಗೆ. ಅವನು ಬುದ್ಧ ನ ಪಾದದ ಬಳಿ ಆ ಹೂವನು ಇರಿಸುತ್ತಾನೆ.

Advertisement

ಕಣ್ತೆರೆದ ಬುದ್ಧ “ನಿನ್ನ ಆಸೆ ಏನು ಮಗು?’ ಎಂದು ಕೇಳುತ್ತಾನೆ. ಹೂಗಾರ ಸುದಾಸ “ಏನೂ ಇÉಲ ಗುರುಗಳೇ, ನಿಮ್ಮ ಪಾದದ ಧೂಳೇ ಸಾಕು’ ಎಂದು ಹೇಳುತ್ತಾನೆ. ಆ ಕ್ಷಣವೇ ಸುದಾಸನ ಮನಸ್ಸು ಸಂತೃಪ್ತಿಯಿಂದ ತುಂಬುತ್ತದೆ.

ಮೂಲ: ರವೀಂದ್ರನಾಥ ಟಾಗೋರ್‌
ಅನುವಾದ: ನಿಜಗುಣ ದೇವರಮನಿ, 6ನೇ ತರಗತಿ, ಶ್ರೀ ಭಾರತೀ ವಿದ್ಯಾಲಯ, ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next