ನವದೆಹಲಿ: ಕಳೆದ ಒಂದು ವರ್ಷದಿಂದ ಭಾರತದ ಎನ್ ಸಿಬಿ(ಮಾದಕವಸ್ತು ನಿಗ್ರಹ ದಳ) ಮಾದಕ ವಸ್ತು ವಿರುದ್ಧದ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಭಾರೀ ಪ್ರಮಾಣದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಜೊತೆಗೆ ಕಳೆದ ಕೆಲವು ತಿಂಗಳಿನಿಂದ ಡ್ರಗ್ ಲಾರ್ಡ್ಸ್ ಹಾಜಿ ಸಲೀಂ ಅಲಿಯಾಸ್ ಹಾಜಿ ಅಲಿ ಹೆಸರು ಎನ್ ಸಿಬಿ ಅಧಿಕಾರಿಗಳು ಎಚ್ಚೆತ್ತುಕೊಳ್ಳುವಂತೆ ಮಾಡಿದೆ.
ಇದನ್ನೂ ಓದಿ:ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ವರದಿಯ ಪ್ರಕಾರ, ಹಾಜಿ ಅಲಿಯ ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ಎನ್ ಸಿಬಿ ಹಾಗೂ ಭಾರತದ ಗೂಢಚಾರ ಸಂಸ್ಥೆಗಳು ತುಂಬಾ ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ತಿಳಿಸಿದೆ. ಹಾಜಿ ಅಲಿ ಪಾಕಿಸ್ತಾನದಲ್ಲಿ ಠಿಕಾಣಿ ಹೂಡಿದ್ದು, ವಿಶ್ವದ ಹಲವೆಡೆ ತನ್ನ ಡ್ರಗ್ಸ್ ದಂಧೆಯ ಸಾಮ್ರಾಜ್ಯ ಸ್ಥಾಪಿಸಿರುವುದಾಗಿ ವರದಿ ವಿವರಿಸಿದೆ.
ಈತ ಪಾಕಿಸ್ತಾನ ಐಎಸ್ ಐನ ಹೊಸ ದಾವೂದ್ ಇಬ್ರಾಹಿಂ!
Related Articles
ವಿವಿಧ ಗುಪ್ತಚರ ಸಂಸ್ಥೆಗಳ ಮಾಹಿತಿ ಪ್ರಕಾರ, ಹಾಜಿ ಸಲೀಂ(ಈತನ ಯಾವುದೇ ಫೋಟೊ ಲಭ್ಯವಿಲ್ಲ) ಭಾರತ, ಮಾಲ್ಡೀವ್ಸ್, ಶ್ರೀಲಂಕಾ ಹಾಗೂ ಮಧ್ಯ ಏಷ್ಯಾದ ಕೆಲವು ದೇಶಗಳಲ್ಲಿ ಅಫ್ಘಾನ್ ಹೆರಾಯಿನ್ ಮತ್ತು ಅಕ್ರಮ ಮಾದಕ ವಸ್ತುಗಳ ಕಳ್ಳಸಾಗಣೆ ಮಾಡುವ ಬೃಹತ್ ಜಾಲವನ್ನು ಹೊಂದಿರುವುದಾಗಿ ತಿಳಿಸಿದೆ.
ಈತ ಮೂಲತಃ ಅಫ್ಘಾನಿಸ್ತಾನದ ನಿವಾಸಿಯಾಗಿದ್ದು, ಮೊದಲು ಅಫ್ಘಾನಿಸ್ತಾನ್- ಪಾಕಿಸ್ತಾನ್ ಗಡಿಭಾಗದ ಮೂಲಕ ಮಾದಕವಸ್ತು ಕಳ್ಳಸಾಗಣೆ ಮಾಡಿಸುತ್ತಿದ್ದು, ಇದೀಗ ತನ್ನ ಕಾನೂನು ಬಾಹಿರ ಡಗ್ಸ್ ಕಳ್ಳಸಾಗಣೆ ಜಾಲವನ್ನು ಹಲವು ದೇಶಗಳಿಗೆ ವಿಸ್ತರಿಸಿದ್ದು, ಪಾಕ್ ನ ಐಎಸ್ ಐ ಆಶ್ರಯ ನೀಡಿದ ನಂತರ ಹಾಲೀ ಸಲೀಂ ದೊಡ್ಡ ಡ್ರಗ್ ಲಾರ್ಡ್ ಆಗಿಬಿಟ್ಟಿದ್ದ ಎಂದು ವರದಿ ತಿಳಿಸಿದೆ.
ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡಲು ಅನುಕೂಲವಾಗುಂತೆ ಲಷ್ಕರ್ ಎ ತೊಯ್ಬಾ ಹಾಗೂ ಪಾಕಿಸ್ತಾನದ ಐಎಸ್ ಐ ಹಾಜಿ ಸಲೀಂ ಜತೆ ಕೈಜೋಡಿಸಿರುವುದಾಗಿ ವರದಿ ವಿರಿಸಿದೆ.
ಪಾಕಿಸ್ತಾನದಲ್ಲಿ ಅಡಗಿರುವ ಹಾಜಿ ಸಲೀಂನ ಖಾಸಗಿ ಅಂಗರಕ್ಷಕರಿಗೆ ಭಾರೀ ಎ.ಕೆ.47 ಹಾಗೂ ಮಾರಣಾಂತಿಕ ಲೆಥಾಲ್ ಶಸ್ತ್ರಸ್ತ್ರಗಳನ್ನು ಒದಗಿಸಲಾಗಿದೆಯಂತೆ. ಹಾಜಿ ಸಲೀಂ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ನಿಕಟವರ್ತಿಯಾಗಿದ್ದಾನೆ ಎಂದು ಮಾಧ್ಯಮ ವರದಿ ತಿಳಿಸಿದೆ.
ಇತ್ತೀಚೆಗೆ ಕೇರಳದ ಕೊಚ್ಚಿ ಕರಾವಳಿ ಪ್ರದೇಶದಲ್ಲಿ ಎನ್ ಸಿಬಿ ಬರೋಬ್ಬರಿ 25,000 ಸಾವಿರ ಕೋಟಿ ರೂಪಾಯಿ ಮೌಲ್ಯದ ಮಾದಕವಸ್ತುವನ್ನು ವಶಪಡಿಸಿಕೊಂಡಿತ್ತು. ಈ ಬೃಹತ್ ಕಳ್ಳಸಾಗಣೆಯ ರೂವಾರಿ ಹಾಜಿ ಸಲೀಂ ಎಂದು ಅಧಿಕಾರಿಗಳು ತಿಳಿಸಿದ್ದರು.