Advertisement
ನೀವು ಪ್ರತಿನಿತ್ಯ ಇನ್ಸ್ಟಾಗ್ರಾಮ್ ರೀಲ್ಸ್ ಗಳನ್ನು ನೋಡುತ್ತೀರಾ ಎನ್ನುವುದಾದರೆ ನಿಮ್ಮ ರೀಲ್ಸ್ ಸ್ಕ್ರೂಲ್ ಮಾಡುತ್ತಾ ಹೋದರೆ ಅರ್ಧ ತಲೆ ಬೋಳಾಗಿರುವ ಒಬ್ಬ ವ್ಯಕ್ತಿ ಹಾಗೂ ಯುವತಿಯೊಬ್ಬಳು ಆತನೊಂದಿಗೆ ನೃತ್ಯ ಮಾಡುವ ಹಾಡಿನ ರೀಲ್ಸ್ ವೊಂದು ಖಂಡಿತ ನಿಮ್ಮ ಕಣ್ಣಿಗೆ ಕಂಡಿರುತ್ತದೆ. ಆ ರೀಲ್ಸ್ ಹಾಡು ಒಂದೈದು ಸೆಕೆಂಡ್ ಕೇಳಿದರೆ ಸಾಕು ಇದೇನಪ್ಪ ಈ ಥರಾ ಕರಾಬ್ ಆಗಿದೆ ಅಂದುಕೊಳ್ಳುತ್ತೀರಿ. ಆದರೆ ಅದೇ ರೀಲ್ಸ್ ಮತ್ತೆ ಮತ್ತೆ ಬಂದಾಗ ನೀವು ಕೂಡ ಆ ಸಾಹಿತ್ಯವನ್ನು ಹಾಡುತ್ತೀರಿ.!
Related Articles
Advertisement
ಗಾಯಕ ಯಾರು?
ಚಾಹತ್ ಫತೇ ಅಲಿ ಖಾನ್ ಮಾರ್ಚ್ 1965 ರಲ್ಲಿ ಪಾಕಿಸ್ತಾನದ ಶೇಖುಪುರ ಹುಟ್ಟಿದರು. ಇವರ ಮೂಲ ಹೆಸರು ಕಾಶಿಫ್ ರಾಣಾ. ಹಾಡುಗಳಿಂದ ಖ್ಯಾತಿಯಾಗಿ ವೇದಿಕೆಯ ಹೆಸರನ್ನು ಚಾಹತ್ ಫತೇ ಅಲಿ ಖಾನ್ ಎಂದು ಇಟ್ಟುಕೊಂಡಿದ್ದಾರೆ. ಇವರು ಜನಪ್ರಿಯ ಗಾಯಕ ರಾಹತ್ ಫತೇ ಅಲಿಖಾನ್ ಅವರ ಸಂಬಂಧಿಕರಲ್ಲ.
ಆರಂಭಿಕ ಜೀವನ:
ಚಾಹತ್ ವೃತ್ತಿ ಬದುಕು ಆರಂಭವಾದದ್ದು ಕ್ರಿಕೆಟರ್ ಆಗಿ. ಪ್ರಥಮ ದರ್ಜೆಯ ಟೆಸ್ಟ್ ಕ್ರಿಕೆಟರ್ ಆಗಿ ಲಾಹೋರ್ ಪರ ಆಡಿದ ಇವರು, 1983 -84 ರ ಕ್ವೈಡ್-ಐ-ಅಜಮ್ ಟ್ರೋಫಿಯಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಮೂರು ಇನ್ನಿಂಗ್ಸ್‌ಗಳಲ್ಲಿ ಒಟ್ಟು 16 ರನ್ ಗಳಿಸಿದ್ದಾರೆ. ಆರಂಭಿಕ ಕ್ರಿಕೆಟ್ ವರ್ಷಗಳಲ್ಲಿ ಶೇಖಪುರದ ಸರ್ಕಾರಿ ಶಾಲಾ ಕ್ರಿಕೆಟ್ ತಂಡಕ್ಕೆ ಆಕಿಬ್ ಜಾವೇದ್ ಅವರನ್ನು ಆಯ್ಕೆ ಮಾಡುವಲ್ಲಿ ತೊಡಗಿಸಿಕೊಂಡಿದ್ದರು. ಜಾವೇದ್ ಅವರ ನಾಯಕತ್ವದಲ್ಲಿ ಆಡಿದ್ದರು ಎಂದು ಸಂದರ್ಶನವೊಂದರಲ್ಲಿ ಚಾಹತ್ ಹೇಳಿದ್ದಾರೆ.
ಆ ಬಳಿಕ ಯುನೈಟೆಡ್ ಕಿಂಗ್‌ಡಮ್(ಲಂಡನ್) ಗೆ ಹೋದ ಚಾಹತ್, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿ, ಅಲ್ಲಿನ ಕ್ಲಬ್ ಕ್ರಿಕೆಟ್ ನಲ್ಲಿ 12 ವರ್ಷ ಆಡಿದ್ದರು. ಆ ಬಳಿಕ ನಿವೃತ್ತಿಯಾಗಿ ಟ್ಯಾಕ್ಸಿ ಡ್ರೈವರ್ ಆಗಿ ದುಡಿಯಲು ಆರಂಭಿಸಿದ್ದರು ಎಂದು ವರದಿಗಳು ತಿಳಿಸಿವೆ.
ಗಾಯನದ ಬಗ್ಗೆ ಹುಟ್ಟಿದ ಆಸಕ್ತಿ: ಬಾಲ್ಯದಿಂದಲೇ ಚಾಹತ್ ಅವರಿಗೆ ಹಾಡಿನ ಬಗ್ಗೆ ಆಸಕ್ತಿ ಇತ್ತು. ಪಾಕಿಸ್ತಾನದ ದಿಗ್ಗಜ ಗಾಯಕ ರಾಹತ್ ಫತೇ ಅಲಿ ಖಾನ್ ಅವರ ಹಾಡು, ಕವಾಲಿಗಳನ್ನು ಕೇಳುತ್ತಿದ್ದರು.
ಕರ್ಕಶ ಧ್ವನಿ , ಆದರೂ ವೈರಲ್ ಆದ ಹಾಡು.. ಅದು ಕೋವಿಡ್ ಸಮಯ. ಚಾಹತ್ ಹಾಡುಗಳು ಮೊದಲ ಬಾರಿಗೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ ದಿನಗಳದು. ಫೇಸ್ ಬುಕ್ ಲೈವ್ ನಲ್ಲಿ ಬಂದು ಹಾಡುಗಳನ್ನು ಹಾಡಿ, ಅದನ್ನು ಪೋಸ್ಟ್ ಮಾಡುತ್ತಿದ್ದ ಚಾಹತ್ ನಿಧಾನವಾಗಿ ಸೋಶಿಯಲ್ ಮೀಡಿಯಾದಲ್ಲಿ ಗುರುತಿಸಿಕೊಳ್ಳಲು ಪ್ರಾರಂಭವಾಗುತ್ತಾರೆ. ಅವರ ಹಾಡುಗಳಲ್ಲಿ ಇಂಪಾದ ಸ್ವರ ಇರಲಿಲ್ಲ. ಸಾಹಿತ್ಯಕ್ಕಂತೂ ಅರ್ಥವೇ ಇರಲಿಲ್ಲ. ಹಾಡಿಗೆ ಮೆಚ್ಚುಗೆ ಸಿಗುವುದಕ್ಕಿಂತ ಹೆಚ್ಚಾಗಿ ಟ್ರೋಲ್ ಆಗುತ್ತಿತ್ತು.
ಇವರ ಜನಪ್ರಿಯತೆ ಎಲ್ಲಿಯವರೆಗೆ ಹೆಚ್ಚಾಯಿತು ಎಂದರೆ. ಪಾಕಿಸ್ತಾನದಲ್ಲಿ ಸ್ಥಳೀಯರು ಇವರನ್ನು ಮದುವೆಯಲ್ಲಿ ಹಾಡಲು ಹಾಗೂ ಇತರೆ ಶುಭ ಕಾರ್ಯಕ್ರಮದಲ್ಲಿ ಹಾಡಲು ಅತಿಥಿಯಾಗಿ ಆಹ್ವಾನ ನೀಡಲು ಶುರು ಮಾಡುತ್ತಾರೆ.
ಹೀಗಿದ್ದ ಚಾಹತ್ ಅವರು ರಾತ್ರೋ ರಾತ್ರಿ ವೈರಲ್ ಆಗುವುದು ಪಾಕಿಸ್ತಾನ್ ಪ್ರಿಮಿಯರ್ ಲೀಗ್ ಸೀಸನ್ -8 ನ ಗೀತೆಯಾದ (ಆಂಥಮ್) “ಯೇ ಜೋ ಪ್ಯಾರಾ ಪಿಎಸ್ಎಲ್ ಹೈ” ಮೂಲಕ. ತಮ್ಮದೇ ಸಾಹಿತ್ಯವನ್ನು ಹಾಕಿ ಈ ಹಾಡನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿದು ಬಿಟ್ಟ ಅವರಿಗೆ ಮತ್ತೆ ಪ್ರಶಂಸೆಯ ಬದಲಿಗೆ ಟ್ರೋಲ್ ಗಳೇ ಹೆಚ್ಚಾಗಿ ಕಾಡಲಾರಂಭಿಸಿತ್ತು.
“ಪ್ಯಾರಾ PSL”, “ಲೋಟ ಲೋಟ”, “ಗೋಲ್ ಕತ್ತಾರ”, ಮತ್ತು “ತು ಚೋರ್ ಚೋರ್ ಚೋರ್” ಹಾಡುಗಳು ಯೂಟ್ಯೂಬ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ಬಹಳ ವೇಗವಾಗಿ ವೈರಲ್ ಆಗುತ್ತದೆ.
ಕೋವಿಡ್ ಸಮಯದಲ್ಲಿ ನಾನು ದಿನಕ್ಕೆ ಎಂಟು ಗಂಟೆ ಹಾಡುಗಳನ್ನು ಅಭ್ಯಾಸ ಮಾಡುತ್ತಿದ್ದೆ. ಗಾಯಕನಾಗಿ ಏಳು ವರ್ಷದಿಂದ ಗುರುತಿಸಿಕೊಂಡಿದ್ದೇನೆ ಎಂದು ರಾಹತ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
2022 ರಲ್ಲಿ ಪಾಕಿಸ್ತಾನದ ಸ್ವಾತಂತ್ರ್ಯ ದಿನದಂದು “ಯೇ ಜೋ ಝಂಡಾ ಹೈ, ಯೇ ಜೋ ಪ್ಯಾರಾ ಝಂಡಾ ಹೈʼ ರಾಹತ್ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚುವಂತೆ ಮಾಡಿತ್ತು.
ಚಾಹತ್ ಯಾವುದೇ ಮ್ಯೂಸಿಕ್ ಲೇಬಲ್‌ನ ಬೆಂಬಲವಿಲ್ಲದೆ ತನ್ನ ಹಾಡುಗಳನ್ನು ಸ್ವತಃ ಬರೆಯುತ್ತಾರೆ, ಸಂಯೋಜಿಸುತ್ತಾರೆ, ರೆಕಾರ್ಡ್ ಮಾಡುತ್ತಾರೆ ಮತ್ತು ಬಿಡುಗಡೆ ಮಾಡುತ್ತಾರೆ ಎಂದು ವರದಿಗಳು ತಿಳಿಸಿವೆ.
ರಾಜಕೀಯ ಅಖಾಡಕ್ಕೆ ಧುಮಿಕ್ಕಿದ್ದ ಅವರು, ಸ್ವತಂತ್ರ ಸ್ಪರ್ಧಿಯಾಗಿ ನಾಮಿನೇಷನ್ ಸಲ್ಲಿಸಿದ್ದರು. ಆದರೆ ಅವರ ನಾಮಪತ್ರ ತಿರಸ್ಕೃತವಾಗಿತ್ತು.