ಬೆಂಗಳೂರು: “ಪ್ರಧಾನಿ ನರೇಂದ್ರ ಮೋದಿಗೆ ಅವರ ಗ್ಯಾರಂಟಿಗಳ ಬಗ್ಗೆಯೇ ಗೊತ್ತಿಲ್ಲ. ನಮ್ಮ ಗ್ಯಾರಂಟಿ ಕುರಿತು ಮಾತನಾಡು ತ್ತಾರೆ. ದೇಶದ ಪ್ರತಿಯೊಬ್ಬ ಪ್ರಜೆಯ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಹೇಳಿದ್ದು ಯಾರು? ನಾವಾ, ನೀವಾ?”
-ಕಾಂಗ್ರೆಸ್ ಗ್ಯಾರಂಟಿಗಳನ್ನು ಟೀಕಿಸಿದ ಪ್ರಧಾನಿ ಮೋದಿಯವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತರಾಟೆಗೆ ತೆಗೆದುಕೊಂಡ ರೀತಿ ಇದು.
ಬಿಜೆಪಿ ನೀಡಿದ ಗ್ಯಾರಂಟಿಗಳು ಯಾವುವು ಎಂಬುದು ಪ್ರಧಾನಿಗೇ ನೆನಪಿಲ್ಲ. ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಹೇಳಿದ್ದು ಬಿಜೆಪಿಯೇ ಹೊರತು ಕಾಂಗ್ರೆಸ್ ಅಲ್ಲ. ರೈತರ ಸಾಲಮನ್ನಾ, ಮಹಿಳೆಯರ ಖಾತೆಗೆ 2-3 ಸಾವಿರ ರೂ. ಜಮೆ, ರೈತರಿಗೆ 7- 10 ಗಂಟೆ ಕರೆಂಟ್ ಕೊಡುವುದಾಗಿ ನಾವು ಹೇಳಿರಲಿಲ್ಲ. ಬಿಜೆಪಿ ಅಧಿಕೃತವಾದ ಪ್ರಣಾಳಿಕೆಯಲ್ಲಿ ಹೇಳಿತ್ತು. ಆದರೆ, ಅದರಲ್ಲಿ ಯಾವುದನ್ನೂ ಅವರು ಪೂರ್ಣಗೊಳಿಸಿಲ್ಲ ಎಂದು ಹೇಳಿದರು.
ಇದು ನಮ್ಮ ಪ್ರತಿಜ್ಞೆ
“ಕಾಂಗ್ರೆಸ್ ನೀಡಿರುವ ಗ್ಯಾರಂಟಿ ಕಾರ್ಡ್ ಅನುಷ್ಠಾನಗೊಳಿಸುವುದು ನಮ್ಮ ಬದ್ಧತೆ ಯಾಗಿದೆ. ಅಧಿಕಾರಕ್ಕೆ ಬಂದ ಮೊದಲ ಸಂಪುಟ ದಲ್ಲೇ ನಮ್ಮ ಗ್ಯಾರಂಟಿಗಳಿಗೆ ಅನುಮೋದನೆ ನೀಡಲಾಗುವುದು. ಜೂನ್‌ನಿಂದಲೇ ಅನುಷ್ಠಾನಗೊಳಿಸಲಾಗುವುದು. ಇಲ್ಲದಿದ್ದರೆ, ನಾವು ಮುಂದೆ ಮತ ಕೇಳುವುದೇ ಇಲ್ಲ. ಇದು ಕಾಂಗ್ರೆಸ್‌ನ ಪ್ರತಿಜ್ಞೆ’ ಎಂದರು.
ಈ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಲಿದೆ ಎಂದು ಅರಿತಿರುವ ಪ್ರಧಾನಿ ಮೋದಿ ಹತಾಶರಾಗಿ ಕಾಂಗ್ರೆಸ್ ಗ್ಯಾರೆಂಟಿಗಳ ಬಗ್ಗೆ ಟೀಕಿಸುತ್ತಿದ್ಧಾರೆ. ಜ.16ರಂದು ಮುಖ್ಯ ಮಂತ್ರಿ ಬೊಮ್ಮಾಯಿ ಅವರ ಸರಕಾರ ಪತ್ರಿಕೆಗಳಿಗೆ ಕೊಟ್ಟಿರುವ ಜಾಹೀರಾತು ನೋಡಿ, ಕಾಂಗ್ರೆಸ್ ಗ್ಯಾರಂಟಿ ಯೋಜನೆ ಮಾದರಿಯಲ್ಲಿ ಮಹಿಳೆಯರಿಗೆ ಪ್ರೋತ್ಸಾಹಧನ ನೀಡುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.
Related Articles
ಇಂದು ಪ್ರಧಾನಿಗಳು ನಮ್ಮ ಗ್ಯಾರಂಟಿಗಳ ಬಗ್ಗೆ ಮಾತನಾಡಿರುವುದು ಬಹಳ ಸಂತೋಷ ವಾಗಿದೆ. ನಮ್ಮ ಗ್ಯಾರಂಟಿ ಯೋಜನೆ ಬಗ್ಗೆ ಮಾತನಾಡುವ ಮೂಲಕ ಮೋದಿ ತಮ್ಮ ಸರಕಾರ ಜನರ ವಿಶ್ವಾಸ ಗಳಿಸಲು ವಿಫಲವಾಗಿದೆ ಎಂದು ಒಪ್ಪಿಕೊಂಡಿದ್ಧಾರೆ. ಬಿಜೆಪಿ ಡಬಲ್ ಎಂಜಿನ್ ಸರಕಾರ ಬೆಲೆ ಏರಿಕೆ ನಿಯಂತ್ರಿಸಲು ವಿಫಲವಾಗಿದೆ ಎಂದು ಹೇಳಿದರು.
“ಬಂಡಾಯ ಅಭ್ಯರ್ಥಿಗಳು ನಿವೃತ್ತಿ ಘೋಷಿಸಿ, ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸ ಬೇಕು. ಇಲ್ಲದಿದ್ದರೆ, ನಿಯಮದ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಈಗಾಗಲೇ ನೋಟಿಸ್ ನೀಡಲಾಗಿದೆ. ಇದು ಕೊನೆಯ ಎಚ್ಚರಿಕೆ” ಎಂದು ಡಿಕೆಶಿ ಹೇಳಿದರು.