ಜಿನೆವಾ:ಕೋವಿಡ್ 19 ಮೂಲ ಸ್ಥಳಕ್ಕೆ ಭೇಟಿ ನೀಡುವ ತಂಡಕ್ಕೆ ಅನುಮತಿ ನೀಡಲು ಚೀನಾ ವಿಳಂಬ ನೀತಿ ಅನುಸರಿಸುತ್ತಿರುವುದು ತುಂಬಾ ನಿರಾಸೆ ತಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕ ಟೆಡ್ರೊಸ್ ಅಧಾನೊಮ್ ಚೆಬ್ರೈಯೆಸ್ ಮಂಗಳವಾರ(ಜನವರಿ 05, 2021) ತಿಳಿಸಿದ್ದಾರೆ.
ಕೋವಿಡ್ 19 ಉಗಮವಾದ ವುಹಾನ್ ಪ್ರದೇಶಕ್ಕೆ ಭೇಟಿ ನೀಡುವ ತಂಡಕ್ಕೆ ಚೀನಾ ಅಗತ್ಯವಿರುವ ಅನುಮತಿ ನೀಡುವ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂಬುದು ನಮಗೆ ತಿಳಿದು ಬಂದಿದೆ. ಈಗಾಗಲೇ ಇಬ್ಬರು ಸದಸ್ಯರು ತಮ್ಮ ಪ್ರಯಾಣ ಆರಂಭಿಸಿದ್ದಾರೆ. ಅನುಮತಿ ವಿಳಂಬದ ವಿಷಯ ಕೇಳಿ ತುಂಬಾ ನಿರಾಸೆಯಾಗಿದೆ. ಯಾಕೆಂದರೆ ಇನ್ನುಳಿದ ತಂಡದ ಸದಸ್ಯರು ಕೊನೆ ಗಳಿಗೆಯಲ್ಲಿ ಹೊರಡಲು ಸಾಧ್ಯವಾಗುವುದಿಲ್ಲ ಎಂದು ಟೆಡ್ರೊಸ್ ಅಧಾನೊಮ್ ಹೇಳಿದ್ದಾರೆ.
ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡದ ಸದಸ್ಯರು ಕಳೆದ 24ಗಂಟೆಯಲ್ಲಿ ಕೋವಿಡ್ ಚೀನಾದ ಕೋವಿಡ್ ಉಗಮ ಸ್ಥಾನದ ಸ್ಥಳಕ್ಕೆ ಭೇಟಿ ನೀಡಲು ಪ್ರಯಾಣ ಆರಂಭಿಸಿದ್ದರು. ಇದನ್ನು ವಿಶ್ವಸಂಸ್ಥೆ ಜಂಟಿಯಾಗಿ ಆಯೋಜಿಸಿತ್ತು ಎಂದು ಟೆಡ್ರೋಸ್ ತಿಳಿಸಿದ್ದಾರೆ.
ಇದನ್ನೂ ಓದಿ:ದಾಖಲೆಗಳ ಭದ್ರತೆಗೆ ರಾಜ್ಯದಲ್ಲಿ ʼಶೈಕ್ಷಣಿಕ ಡಿಜಿ ಲಾಕರ್ʼ ವ್ಯವಸ್ಥೆಗೆ ಚಿಂತನೆ; ಡಿಸಿಎಂ
ವಿಜ್ಞಾನಿಗಳ ತಂಡ ವುಹಾನ್ ನತ್ತ ಪ್ರಯಾಣ ಬೆಳೆಸಿದ್ದು, ಚೀನಾ ಸರ್ಕಾರ ಈವರೆಗೆ ಅವರಿಗೆ ಅನುಮತಿ ನೀಡುವ ಬಗ್ಗೆ ಯಾವುದೇ ಸೂಚನೆ ಕೊಟ್ಟಿಲ್ಲ ಎಂದು ಟೆಡ್ರೋಸ್ ದೂರಿದ್ದಾರೆ.