- 8 ತಂಡಗಳ ಫ್ರಾಂಚೈಸಿಗಳು ಹರಾಜಿನಲ್ಲಿ ಭಾಗಿ
– ದೇಶಿ ಕ್ರಿಕೆಟಿಗರ ಮೇಲೆ ಫ್ರಾಂಚೈಸಿಗಳ ಹದ್ದಿನ ಕಣ್ಣು
- ಆಟಗಾರರನ್ನು ಖರೀದಿಸಲು ಚಿಂತನ-ಮಂಥನ
Advertisement
ಬೆಂಗಳೂರು: ಹತ್ತನೇ ಆವೃತ್ತಿಯ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ಸೋಮವಾರ ಬೆಂಗಳೂರಿನಲ್ಲಿ ನಡೆಯಲಿದೆ. ದೇಶಿ, ವಿದೇಶಿ ಸಹಿತ ಒಟ್ಟು 357 ಆಟಗಾರರು ಹರಾಜಿನಲ್ಲಿದ್ದಾರೆ. 8 ಫ್ರಾಂಚೈಸಿಗಳು ತೀವ್ರ ಲೆಕ್ಕಾಚಾರಕ್ಕೆ ಇಳಿದಿವೆ. ಆಟಗಾರರನ್ನು ಖರೀದಿಸುವ ಚಿಂತನ ಮಂಥನದಲ್ಲಿ ತೊಡಗಿವೆ.
ಡೆಲ್ಲಿ ಡೇರ್‌ಡೆವಿಲ್ಸ್, ಗುಜರಾತ್ ಲಯನ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್, ಕೋಲ್ಕತಾ ನೈಟ್‌ರೈಡರ್, ಮುಂಬೈ ಇಂಡಿಯನ್ಸ್, ರೈಸಿಂಗ್ ಪುಣೆ ಸೂಪರ್ ಜಯಂಟ್ಸ್, ರಾಯಲ್ ಚಾಲೆಂಜರ್ ಬೆಂಗಳೂರು, ಸನ್‌ರೈಸರ್ ಹೈದರಾಬಾದ್ ತಂಡಗಳ ಫ್ರಾಂಚೈಸಿಗಳು ಹರಾಜಿನಲ್ಲಿ ಪಾಲ್ಗೊಳ್ಳಲಿವೆ.
Related Articles
ಈ ಬಾರಿ ಹರಾಜಿನಲ್ಲಿ ಫ್ರಾಂಚೈಸಿಗಳು ವಿದೇಶಿ ಮತ್ತು ಸ್ಟಾರ್ ಕ್ರಿಕೆಟಿಗರ ಮೇಲೆ ಹೆಚ್ಚಿನ ಬಂಡವಾಳ ಹೂಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ, ಇನ್ನೂ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡದ ಆಟಗಾರರಿಗೆ ಮಣೆ ಹಾಕುವ ಸಾಧ್ಯತೆ ಇದೆ. ಹರಾಜಿನಲ್ಲಿ ಅಂತಾ ರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡದ 227 ಕ್ರಿಕೆಟಿಗರಿದ್ದಾರೆ. ಇವರು ಹರಾಜಿನ ಹಾಟ್ ಫೇವರಿಟ್ ಆಗುವ ಸಾಧ್ಯತೆಗಳಿವೆ.
Advertisement
ಗಮನ ಸೆಳೆಯುವ ವಿದೇಶಿ ಕ್ರಿಕೆಟಿಗರುವಿದೇಶಿ ಆಟಗಾರರ ಪೈಕಿ ಹರಾಜಿನಲ್ಲಿ ನಿರೀಕ್ಷೆಗೂ ಮೀರಿ ಹಣ ಪಡೆಯಬಹುದಾದ ಸಂಭಾವ್ಯ ಕ್ರಿಕೆಟಿಗರಿ ದ್ದಾರೆ. ಸದ್ಯ ಹರಾಜಿನಲ್ಲಿ 130 ವಿದೇಶಿ ಆಟಗಾರರು ಇದ್ದಾರೆ. ಬೆನ್ ಸ್ಟೋಕ್ಸ್, ಎವೋನ್ ಮಾರ್ಗನ್, ಏಂಜೆಲೊ ಮ್ಯಾಥ್ಯೂಸ್, ಪ್ಯಾಟ್ರಿಕ್ ಕಮಿನ್ಸ್, ಮಿಚೆಲ್ ಜಾನ್ಸನ್, ಕ್ರಿಸ್ ವೋಕ್ಸ್ 2 ಕೋಟಿ ರೂ. ಮೂಲ ಬೆಲೆ ಹೊಂದಿದ್ದು, ಭಾರೀ ನಿರೀಕ್ಷೆ ಮೂಡಿಸಿದ್ದಾರೆ. ಅಫ್ಘಾನ್, ಯುಎಇ ಆಟಗಾರರ ಸರದಿ
ಸಹ ಸದಸ್ಯ ರಾಷ್ಟ್ರದ ಒಟ್ಟು 6 ಮಂದಿ ಕ್ರಿಕೆಟಿಗರು ಈ ಬಾರಿ ಐಪಿಎಲ್ ಹರಾಜಿನಲ್ಲಿ ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ. ಅಫ್ಘಾನಿಸ್ಥಾನ ತಂಡದ ನಾಯಕ ಆಸYರ್ ಸ್ತಾನಿಕ್‌ಜಾಯ್, ಮೊಹಮ್ಮದ್ ನಬಿ. ಮೊಹಮ್ಮದ್ ಶೆಹಜಾದ್, ರಶೀದ್ ಖಾನ್, ದೌಲತ್ ಜದ್ರಾನ್ 50 ಲಕ್ಷ ರೂ. ಒಳಗಿನ ಮೂಲ ಬೆಲೆ ಪಡೆದಿದ್ದಾರೆ ಎನ್ನು ವುದು ವಿಶೇಷ. ಅಂತೆಯೇ ಯುಎಇ ತಂಡದ ಆಟಗಾರ ಚಿರಾಗ್ ಸೂರಿ ಕೂಡ ಹರಾಜಿನ ಪ್ರಮುಖ ಆಕರ್ಷಣೆ. ಅವರು 10 ಲಕ್ಷ ರೂ. ಮೂಲ ಬೆಲೆ ಹೊಂದಿದ್ದಾರೆ. ಹಾಟ್ ಫೇವರಿಟ್
ಅಗ್ರ 6 ವಿದೇಶಿ ಕ್ರಿಕೆಟಿಗರು ಮತ್ತು ಮೂಲ ಬೆಲೆ
ಎವೋನ್ ಮಾರ್ಗನ್ (ಇಂಗ್ಲೆಂಡ್-ಬ್ಯಾಟ್ಸ್‌ಮನ್): 2 ಕೋಟಿ ರೂ.
ಪ್ಯಾಟ್ರಿಕ್ ಕಮಿನ್ಸ್ (ಆಸ್ಟ್ರೇಲಿಯ- ಬೌಲರ್): 2 ಕೋಟಿ ರೂ.
ಮಿಚೆಲ್ ಜಾನ್ಸನ್ (ಆಸ್ಟ್ರೇಲಿಯ-ಬೌಲರ್): 2 ಕೋಟಿ ರೂ.
ಕ್ರಿಸ್ ವೋಕ್ಸ್ (ಇಂಗ್ಲೆಂಡ್- ಆಲ್‌ರೌಂಡರ್): 2 ಕೋಟಿ ರೂ.
ಬ್ರಾಡ್ ಹ್ಯಾಡಿನ್ (ಆಸ್ಟ್ರೇಲಿಯ-ವಿಕೆಟ್ ಕೀಪರ್): 1.50 ಕೋಟಿ ರೂ.
ಕ್ಯಾಗಿಸೊ ರಬಾಡ (ದಕ್ಷಿಣ ಆಫ್ರಿಕಾ-ಬೌಲರ್): 1 ಕೋಟಿ ರೂ. ಭಾರತದ ಅಗ್ರ 6 ಆಟಗಾರರು ಮತ್ತು ಮೂಲ ಬೆಲೆ
ಇಶಾಂತ್ ಶರ್ಮ (ಬೌಲರ್ ): 2 ಕೋಟಿ ರೂ.
ಚೇತೇಶ್ವರ್ ಪೂಜಾರ (ಬ್ಯಾಟ್ಸ್‌ಮನ್): 50 ಲಕ್ಷ ರೂ.
ಇರ್ಫಾನ್ ಪಠಾಣ್ (ಆಲ್‌ರೌಂಡರ್): 50 ಲಕ್ಷ ರೂ.
ರಿಷಿ ಧವನ್ (ಆಲ್‌ರೌಂಡರ್): 30 ಲಕ್ಷ ರೂ.
ಪರ್ವೇಜ್ ರಸೂಲ್ (ಆಲ್‌ರೌಂಡರ್): 30 ಲಕ್ಷ ರೂ.
ಕರಣ್ ಶರ್ಮ (ಆಲ್‌ರೌಂಡರ್): 30 ಲಕ್ಷ ರೂ.