Advertisement

ತ್ರಿವಳಿ ತಲಾಖ್ ರದ್ದು ಮಾಡಿ ಮುಸ್ಲಿಂ ಮಹಿಳೆಯರಿಗೆ ರಕ್ಷಣೆ ಕೊಟ್ಟಿದ್ದು ಯಾರು?:ಸಚಿವ ಸುನೀಲ್

03:22 PM Feb 05, 2022 | Team Udayavani |

ಮಂಗಳೂರು : ನಾಡಿನ ಎಲ್ಲಾ ಮುಸಲ್ಮಾನ ಮಹಿಳೆಯರಿಗೆ ವಿನಂತಿ ಮಾಡುತ್ತೇನೆ, ನಿಮಗೆ ತ್ರಿವಳಿ ತಲಾಕ್ ರದ್ದತಿ ಮಾಡಿ ಭದ್ರತೆ ಯನ್ನು ಕೊಟ್ಟಿದ್ದು ಮೋದಿ ಸರಕಾರ. ಅದನ್ನು ಅರ್ಥ ಮಾಡಿಕೊಂಡು ಮುಂದಿನ ದಿನಗಳಲ್ಲಿ ಸಮಾಜದ ಮುಖ್ಯವಾಹಿನಿಗೆ ಬರುವ ಪ್ರಯತ್ನ ಮಾಡಬೇಕು ಎಂದು ಸಚಿವ ಸುನೀಲ್ ಕುಮಾರ್ ಶನಿವಾರ ಹೇಳಿಕೆ ನೀಡಿದ್ದಾರೆ.

Advertisement

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿವಾದ ಕರ್ನಾಟಕದಲ್ಲಿ ಏನೋ ಒಂದು ರೀತಿಯಾದಂತಹ ಅರಾಜಕತೆಯನ್ನು ಹುಟ್ಟು ಹಾಕಲು ಕೆಲವು ವಿದ್ಯಾರ್ಥಿಗಳನ್ನು ಬಿಟ್ಟು ಮಾಡಿರುವ ವ್ಯವಸ್ಥಿತ ಷಡ್ಯಂತ್ರ ಎಂದರು.

ಸಿದ್ದರಾಮಯ್ಯನವರಾದಿಯಾಗಿ ಹಲವರು,ಜಿಜಾಬ್ ವ್ಯಕ್ತಿ ಸ್ವಾತಂತ್ರ್ಯ ಎಂದು ಬೊಬ್ಬೆ ಹಾಕುತ್ತಿದ್ದಾರೆ , ಮಹಿಳೆಯರಿಗೆ ಮಸೀದಿಯೊಳಗೆ ಪ್ರವೇಶ ನೀಡಲಿ ಎಂದು ಸವಾಲು ಹಾಕಿದರು. ಸರ್ಕಾರಿ ಶಾಲೆಗಳಲ್ಲಿ ಅವರೇ ನಿಯಮಗಳನ್ನು ಮಾಡುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದರು.

ಯಾರೋ ಸಿದ್ದರಾಮಯ್ಯನವರೋ, ಖಾದರ್, ಎಸ್ ಡಿ ಪಿ ಐ ನವರು ಕೊಡುವ ಹೇಳಿಕೆಗಳನ್ನು ಕೇಳಿ ಪ್ರತಿಭಟನೆ ಮಾಡಬೇಡಿ, ವ್ಯಕ್ತಿ ಸ್ವಾತಂತ್ರ್ಯ ದ ಬಗ್ಗೆ ಮಾತನಾಡುವವರು ಮಹಿಳೆಯರನ್ನು ಮಸೀದಿಯೊಳಗೆ ಕರೆದುಕೊಂಡು ಹೋಗುವ ನೇತೃತ್ವವನ್ನು ತೆಗೆದುಕೊಳ್ಳಲಿ ಎಂದು ಕಿಡಿ ಕಾರಿದರು.

Advertisement

ಕಚೇರಿ ಉದ್ಘಾಟನೆ
ಮಂಗಳೂರಿನ ಡಿ.ಸಿ ಕಚೇರಿಯ ನೆಲ ಅಂತಸ್ತಿ ನಲ್ಲಿ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಅವರ ಕಚೇರಿ ಉದ್ಘಾಟನೆಗೊಲಿಸಲಾಯಿತು. ಈ ವೇಳೆ ವಿಧಾನಸಭೆಯ ವಿಪಕ್ಷ ಉಪ ನಾಯಕ ಯು.ಟಿ.ಖಾದರ್ ಆಗಮಿಸಿ ಶುಭ ಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next