Advertisement
ಬಿಳಿ ಬಣ್ಣದಿಂದ ಅಂದ ಹೆಚ್ಚಳಶಾಂತಿ ಸಂಕೇತವಾಗಿರುವ ಬಿಳಿ ಬಣ್ಣ ಮನೆಯ ಅಂದ ಹೆಚ್ಚಿಸುತ್ತದೆ. ಒಂದು ರೀತಿಯಾದ ಪ್ರಶಾಂತತೆಯನ್ನು ಮನೆಯಲ್ಲಿ ಈ ಬಣ್ಣ ನಿರ್ಮಾಣ ಮಾಡುತ್ತದೆ. ಧನಾತ್ಮಕ ಶಕ್ತಿಯನ್ನು ಕೂಡ ಮನೆಯೊಳಗೆ ತುಂಬವಲ್ಲಿ ಬಿಳಿ ಬಣ್ಣ ಸಹಕಾರಿ.
ಮನೆಯ ಅಂದವನ್ನು ಹೆಚ್ಚಿಸುವುದರೊಂದಿಗೆ ಬಿಳಿ ಬಣ್ಣ ಯಾವುದೇ ಬಣ್ಣದ ಪೀಠೊಪಕರಣಗಳೊಂದಿಗೆ ಹೊಂದಿಕೆಯಾಗುತ್ತದೆ. ಮನೆ ಗೋಡೆಯ ಬಣ್ಣದೊಂದಿಗೆ ಪೀಠೊಪಕರಣಗಳು ಹೊಂದಿಕೆಯಾದರೆ ಮನೆಯು ಇನ್ನಷ್ಟು ಸುಂದರವಾಗಿ ಕಾಣುತ್ತದೆ. ಮನೆಯಲ್ಲಿರುವ ಯಾವುದೇ ಬಣ್ಣಗಳ ಸೋಫಾ, ಕರ್ಟನ್‌ಗಳಿಗೆ ಬಿಳಿಬಣ್ಣವೂ ಮ್ಯಾಚ್ ಆಗುತ್ತದೆ. ಬಿಳಿ ಬಣ್ಣವು ಇತರ ಬಣ್ಣಗಳನ್ನು ಪೋಷಿಸುತ್ತದೆ. ಕೋಣೆಯಲ್ಲಿ ಬೆಳಕು ಬಿಳಿ ಬಣ್ಣವು ಶುಭ್ರತೆಯ ಸಂಕೇತ. ಇದು ಬೆಳಕನ್ನು ಆಕರ್ಷಿಸುವುದು. ಒಳಾಂಗಣದ ಬಣ್ಣ ಬಿಳಿ ಬಣ್ಣದಿಂದ ಕೂಡಿದ್ದರೆ, ಸ್ವಲ್ಪ ಬೆಳಕು ಇದ್ದರೂ ಹೆಚ್ಚು ಬೆಳಕನ್ನು ಹೊಂದಿರುವಂತೆ ತೋರುವುದು. ಕೋಣೆ ವಿಶಾಲ
ಬಿಳಿ ಗೋಡೆಯು ವಿಸ್ತರಣೆಯನ್ನು ಹೆಚ್ಚಿಸಿರುವಂತೆ ತೋರುವುದು. ಸುತ್ತಲೂ ಬಿಳಿ ಬಣ್ಣದಿಂದ ಕೂಡಿದ್ದರೆ ಕೊಠಡಿಯು ಅತ್ಯಂತ ವಿಶಾಲತೆಯಿಂದ ಕೂಡಿರುವಂತೆ ಕಾಣುತ್ತದೆ.
Related Articles
ಯಾವ ಬಣ್ಣದ ಗೋಡೆಯಾಗಿದ್ದರೂ ಅದು ಸ್ವಲ್ಪ ಸಮಯದ ಬಳಿಕ ಮಂಕಾಗುವುದು. ಆಗ ಪುನಃ ಬಣ್ಣವನ್ನು ಬಳಿಯಬೇಕು. ನಾವು ಬಿಳಿ ಬಣ್ಣವನ್ನು ಹೊಂದಿದ್ದರೆ ಸುಲಭವಾಗಿ ಪುನಃ ಪುನಃ ಬಣ್ಣಗಳನ್ನು ಬಳಿಯಬಹುದು. ವಿಭಿನ್ನವಾದ ಬಣ್ಣಗಳನ್ನು ಹೊಂದಿದ್ದರೆ ಅದರ ನಿರ್ವಹಣೆ ಕಷ್ಟವಾಗುವುದು.
Advertisement
ಎಂದಿಗೂ ಟ್ರೆಂಡ್ಬಿಳಿ ಬಣ್ಣ ಎಂದಿಗೂ ಹಳೆಯ ಬಣ್ಣ ಎಂದೇನಿಸುವುದಿಲ್ಲ. ಅದೇ ಇತರ ಬಣ್ಣಗಳು ಕೆಲವು ಸಮಯದ ನಂತರ ತನ್ನ ಟ್ರೆಂಡ್ ಅನ್ನು ಕಳೆದುಕೊಳ್ಳಬಹುದು. ಆಗ ಪುನಃ ಬೇರೆ ಬಣ್ಣಗಳ ಆಯ್ಕೆಗೆ ಮೊರೆ ಹೋಗಬೇಕಾಗುವುದು. ನೈಸರ್ಗಿಕ ಬೆಳಕು
ಬಿಳಿ ಬಣ್ಣ ಬೆಳಕಿನ ಉತ್ತಮ ಪ್ರತಿಫಲಕ. ಕೋಣೆಗೆ ಬರುವ ನೈಸರ್ಗಿಕ ಬೆಳಕನ್ನು ಅಗಲವಾಗಿ ಮತ್ತು ಪ್ರಕಾಶಮಾನವಾಗಿ ಬಿಳಿ ಬಣ್ಣ ಹರಡುತ್ತದೆ. ಇದರಿಂದ ಕಡಿಮೆ ಪ್ರಮಾಣದಲ್ಲಿ ವಿದ್ಯುತ್ ಅನ್ನು ಬಳಕೆ ಮಾಡಬಹುದು.