ಹಾಸನ: ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರೆ ಸರ್ಕಾರ ಸಾರ್ವಜನಿಕವಾಗಿ ಮಾಹಿತಿ ಮಾಹಿತಿ ನೀಡುವ ನಿಟ್ಟಿನಲ್ಲಿ ಶ್ವೇತಪತ್ರ ಹೊರಡಿಸಬೇಕು ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ನಿಯಂತ್ರಣಕ್ಕೆ ವಿವಿಧ ಮೂಲಗಳಿಂದ ಬಂದಿರುವ ನೆರವಿನ ಮಾಹಿತಿ, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬಿಡುಗಡೆಯಾಗಿರುವ ಆರ್ಥಿಕ ನೆರವಿನ ಬಗ್ಗೆಯೂ ಸರ್ಕಾರ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.
ಶಾಸಕರ ಕ್ಷೇತ್ರಾಭಿವೃದಿಯ ಕಾಮಗಾರಿ ಗಳ ಅನುಷ್ಠಾನ ಮೊದಲಿದ್ದಂತೆ ಜಿಲ್ಲಾಧಿ ಕಾರಿ ಕಾರ್ಯವ್ಯಾಪ್ತಿಯಲ್ಲಿಯೇ ಇರಲಿ. ಇತ್ತೀಚೆಗೆ ವಿಧಾನಸಭಾಧ್ಯಕ್ಷರು ಉಪ ವಿಭಾಗಾಧಿಕಾರಿಗಳ ವ್ಯಾಪ್ತಿಗೆ ವಹಿಸಿದ್ದಾರೆ ಎಂಬ ಮಾಹಿತಿ ಇದೆ. ಈ ವಿಚಾರದಲ್ಲಿ ಸ್ಪೀಕರ್ ಮಧ್ಯ ಪ್ರವೇಶಿಸಬಾರದು ಎಂದು ರೇವಣ್ಣ ಹೇಳಿದರು.
ಮುಖ್ಯಮಂತ್ರಿ ಸಚಿವಾಲಯದಲ್ಲಿ ಶಾಸಕರ ಪತ್ರ ಸ್ವೀಕರಿಸುವ ಮತ್ತು ಹಿಂಬರ ನೀಡುವ ವ್ಯವಸ್ಥೆಯೂ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರೈತರಿಂದ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಮುಂದಾಗಬೇಕು. ಕ್ವಿಂಟಾಲ್‌ಗೆ 1,780 ರೂ. ಬೆಂಬಲ ಬೆಲೆ ನೀಡಬೇಕು ಒತ್ತಾಯಿಸಿದರು.
ಸರ್ಕಾರ ಈ ಹಿಂದೆ ಗುತ್ತಿಗೆ ನಿರ್ವಹಿಸಿದ ಸಣ್ಣ -ಪುಟ್ಟ ಗುತ್ತಿಗೆ ದಾರರ ಬಾಕಿ ಬಿಲ್ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ರಾಜ್ಯ ಸರ್ಕಾರ ಹೊರ ರಾಜ್ಯದಲ್ಲಿದ್ದ ವರಿಗೆ ಬರಲು ಅನುಮತಿ ನೀಡಿರುವುದ ರಿಂದ ಹಸಿರು ವಲಯದಲ್ಲಿದ್ದ ಹಾಸನ ಜಿಲ್ಲೆಯಲ್ಲಿ ಇಂದು 67 ಕೊರೊನಾ ಸೋಂಕು ಪತ್ತೆಯಾಗಿದೆ ಎಂದರು. ಹೊರ ರಾಜ್ಯಗಳಿಂದ ಬರುವವರ ಮೇಲೆ ನಿಗಾ ವಹಿಸಬೇಕು ಎಂದರು.