ತನ್ನ ಇಬ್ಬರು ಮಕ್ಕಳೊಂದಿಗೆ ಮನೆ ಸಮೀಪದ ಅತ್ತೆ ಮನೆಗೆ ಹೋಗಿದ್ದು, ಅಲ್ಲಿಂದ ಸಂಜೆ 6-30ರ ವೇಳೆಗೆ ತಾನೊಬ್ಬಳೇ ಮನೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ವಾಪಸ್ ಬಂದಿಲ್ಲ. ಮನೆಯಲ್ಲಿದ್ದ ಆಕೆಯ ಬಟ್ಟೆಬರೆ, ಚಿನ್ನಾಭರಣ, ನಗದು, ದಾಖಲೆ ಪತ್ರಗಳ ಸಹಿತ ಆಕೆಯ ಬ್ಯಾಗ್ ಕೂಡ ನಾಪತ್ತೆಯಾಗಿದೆ.
ಪತಿ ಮಹಮ್ಮದ್ ಆರೀಫ್ ಮೀನಿನ ಲಾರಿಯಲ್ಲಿ ಚಾಲಕನಾಗಿದ್ದು, ಮಾ. 20ರಂದು ಕೆಲಸದ ನಿಮಿತ್ತ ಲಾರಿಯಲ್ಲಿ ಕೇರಳಕ್ಕೆ ಹೋಗಿದ್ದರು. ಮಾ. 21ರ ಸಂಜೆ ಆಕೆಯ ಅಣ್ಣ ಆಸೀರ್ ಅವರು ಆರೀಫ್ಗೆ ಕರೆ ಮಾಡಿ ಕರೀಶ್ಮಾ ಕಾಣೆಯಾದ ಬಗ್ಗೆ ತಿಳಿಸಿದ್ದಾರೆ. ಕೂಡಲೇ ಮನೆಗೆ ಬಂದ ಆರೀಫ್ ಪೊಲೀಸರಿಗೆ ದೂರು ನೀಡಿದ್ದಾರೆ. ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement