Advertisement
ಒಂದು ವೇಳೆ ಉದ್ಯೋಗಿಗಳು ಟ್ವಿಟರ್ ಖಾತೆ ದೃಢೀಕರಣಗೊಂಡು, ಬ್ಲೂಟಿಕ್ ಬೇಕಿದ್ದರೆ ಅದನ್ನು ಖುದ್ದಾಗಿ ಪಾವತಿ ಮಾಡಬೇಕು. ಜತೆಗೆ ಅದನ್ನು ಕ್ಲೇಮು ಮಾಡಲು ಅವಕಾಶ ಇಲ್ಲವೆಂದು ಸೂಚಿಸಿದೆ. ಇದರ ಜತೆಗೆ ಶ್ವೇತ ಭವನ ಕೂಡ ಒಂದು ಸಂಸ್ಥೆಯಾಗಿ ಅದಕ್ಕೆ ಪಾವತಿ ಮಾಡಿ, ದೃಢೀಕರಿಸಿದ ವ್ಯವಸ್ಥೆಯನ್ನು ಹೊಂದುವುದಿಲ್ಲ ಎಂದು ಹೇಳಿದೆ.
ಮತ್ತೂಂದು ಬೆಳವಣಿಗೆಯಲ್ಲಿ ಪ್ರಮುಖ ಪತ್ರಿಕೆ “ದ ನ್ಯೂಯಾರ್ಕ್ ಟೈಮ್ಸ್’ ಆಡಳಿತ ಮಂಡಳಿ ಟ್ವಿಟರ್‌ನ ಬ್ಲೂಟಿಕ್‌ಗೆ ಪಾವತಿ ಮಾಡುವುದಿಲ್ಲ ಎಂದು ಹೇಳಿದೆ. ಇದಾದ ಕೆಲವೇ ಕ್ಷಣಗಳಲ್ಲಿ ಪತ್ರಿಕೆಯ ಪ್ರಧಾನ ಖಾತೆಗೆ ಇರುವ “ಗೋಲ್ಡ್ ವೆರಿಫೈಡ್ ಮಾರ್ಕರ್’ ಅನ್ನು ರದ್ದುಪಡಿಸಿದೆ. ಇದರ ಜತೆಗೆ ಇನ್ನೂ ಹಲವಾರು ಸುದ್ದಿ ಕ್ಷೇತ್ರಕ್ಕೆ ಸಂಬಂಧಿಸಿದ ಸಂಸ್ಥೆಗಳು ಬ್ಲೂಟಿಕ್‌ಗೆ ಪ್ರತಿ ತಿಂಗಳು ಪಾವತಿ ಮಾಡುವುದಿಲ್ಲ ಎಂದು ಹೇಳಿಕೊಂಡಿವೆ.