Advertisement

ಮೆರಿಟ್‌ ಆಧರಿತ ವೀಸಾ ನೀಡಲು ಅಮೆರಿಕ ನಿರ್ಧಾರ?

06:30 AM Dec 16, 2017 | Team Udayavani |

ವಾಷಿಂಗ್ಟನ್‌: ಅಮೆರಿಕದಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ  ಕುಟುಂಬ ಆಧಾರಿತ ವಲಸೆ ವೀಸಾ ನೀತಿಯನ್ನು ಮೆರಿಟ್‌ ಆಧರಿತವನ್ನಾಗಿ ಬದಲಿಸಲು ಡೊನಾಲ್ಡ್‌ ಟ್ರಂಪ್‌ ಸರಕಾರ ಚಿಂತನೆ ನಡೆಸುತ್ತಿದೆ. ಈ ಸಂಬಂಧ ಪ್ರಾಥಮಿಕ ತಯಾರಿ ವೈಟ್‌ಹೌಸ್‌ನಲ್ಲಿ ಆರಂಭವಾಗಿದೆ. ಈಗಾಗಲೇ ಇರುವ ವೀಸಾ ನೀತಿ ಅಮೆರಿಕದ ಕೆಲಸಗಾರರಿಗೆ ಅಪಾ ಯವಷ್ಟೇ ಅಲ್ಲ, ಹಾನಿಕರವೂ ಆಗಿದೆ ಎಂದು ಹೇಳಲಾಗುತ್ತಿದೆ. ಈ ವಿಚಾರವನ್ನು ಟ್ರಂಪ್‌ ಚುನಾವಣಾ ಪ್ರಣಾಳಿಕೆಯಲ್ಲೇ ಪ್ರಸ್ತಾವಿಸಿದ್ದರು. ಇದನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಈಗ ಕ್ರಮ ಕೈಗೊಳ್ಳಲಾಗುತ್ತಿದೆ.

Advertisement

2005ರಿಂದ 2016ರ ಅವಧಿಯಲ್ಲಿ ಅಮೆರಿಕಕ್ಕೆ ವಲಸೆ ಬಂದ 1.3 ಕೋಟಿ ಜನರ ಪೈಕಿ 93 ಲಕ್ಷ ಜನರು ಕುಟುಂಬ ಸದಸ್ಯರನ್ನೂ ಕರೆತಂದಿದ್ದಾರೆ. ಅಲ್ಲದೆ ಕಳೆದ ಒಂದು ದಶಕದಲ್ಲಿ ಸರಾಸರಿ 15 ವಲಸಿಗರಲ್ಲಿ ಒಬ್ಬರಿಗೆ ಮಾತ್ರ ಗ್ರೀನ್‌ ಕಾರ್ಡ್‌ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next