Advertisement
ತಮಿಳುನಾಡಿನ ಸೀಯಾಳ ಕಾರಣ?ಬಿಳಿ ನೊಣದ ಹಾವಳಿ ತಮಿಳು ನಾಡಿನಲ್ಲಿ ವಿಪರೀತವಾಗಿದ್ದು, ಅಲ್ಲಿಂದ ಬರುವ ಸೀಯಾಳಗಳ ಜತೆಯಲ್ಲಿ ಇವುಗಳ ಮೊಟ್ಟೆಗಳು ನಮ್ಮೂರಿಗೂ ಬಂದು ಇಲ್ಲಿನ ತೆಂಗಿನಮರಗಳನ್ನೂ ಬಾಧಿಸುತ್ತಿದೆ ಎಂದು ಶಂಕಿಸಲಾಗಿದೆ.
ತೆಂಗಿನ ಮರದ ಬುಡದಲ್ಲಿರುವ ಬಾಳೆ ಗಿಡಗಳೂ ಕಪ್ಪು ವರ್ಣಕ್ಕೆ ತಿರುಗಿದ್ದು, ಎಲೆ ಅಡಿ ಭಾಗದಲ್ಲಿ ಬಿಳೆ ಮಚ್ಚೆಗಳು ಬಿದ್ದು ಎಲೆ ಕೊಳೆತು ಹೋಗುತ್ತಿದೆ. ಬಾಳೆ ದಿಂಡು ಸಂಪೂರ್ಣ ಕಪ್ಪು ಬಣ್ಣಕ್ಕೆ ತಿರುಗುತ್ತಿದೆ. ಕೃಷಿಕ ಚಂದು ಬಂಜನ್ ಉದಯವಾಣಿ ಸುದಿನ ಜತೆ ಮಾತನಾಡಿ, ನಾಲ್ಕಾರು ತಿಂಗಳಿನಿಂದ ತೆಂಗಿನ ಮರಗಳು ಈ ರೋಗಕ್ಕೆ ತುತ್ತಾಗಿವೆ. ಗೆಂದಾಳಿಯ ಸೀಯಾಳ ಒಡೆದು ಬೀಳುತ್ತಿದೆ. ಗರಿಗಳು ಒಣಗಿ, ಬಾಗಿ, ಕಪ್ಪು ಬಣ್ಣಕ್ಕೆ ತಿರುಗಿವೆ ಎಂದು ಹೇಳಿದರು. ರೋಗದ ಲಕ್ಷಣ
ತೆಂಗಿನ ಗರಿಗಳು ಪೂರ್ಣ ಒಣಗಿದಂತೆ ಕಾಣುತ್ತಿದ್ದು, ಕಪ್ಪು ನೀರು ಸುರಿಯುತ್ತಿದೆ. ತೊಟ್ಟಿನ ಹೊರ ಭಾಗ ಕೊಳೆತು ಕಾಯಿಗಳು ಉದುರಿ ಬೀಳುತ್ತಿವೆ ಮಾತ್ರವಲ್ಲದೆ ಗಾತ್ರವೂ ಕುಂಠಿತವಾಗುತ್ತದೆ. ಈ ಹಾವಳಿ ವಿಪರೀತವಾದರೆ ಮುಂದಿನ ದಿನಗಳಲ್ಲಿ ತೆಂಗಿನ ಕೃಷಿಯ ಮೇಲೆ ಅಡ್ಡ ಪರಿಣಾಮ ಬೀಳುವ ಅಪಾಯವಿದೆ.
Related Articles
ಬಿಳಿ ನೊಣ ಉಪಟಳದ ಬಗ್ಗೆ ರೈತರಿಂದಲೂ ದೂರು ಬಂದಿದ್ದು, ಇಲಾಖೆ ವತಿಯಿಂದ ಸ್ಥಳ ಸಮೀಕ್ಷೆ ಕೈಗೊಂಡಿದ್ದೇವೆ. ತಮಿಳುನಾಡಿನಲ್ಲಿ ಈ ಸಮಸ್ಯೆ ಅತಿಯಾಗಿದ್ದು, ಅಲ್ಲಿಂದ ಆಮದಾಗುವ ಸೀಯಾಳದಲ್ಲಿ ಈ ಬಿಳಿ ನೊಣಗಳ ಮೊಟ್ಟೆಗಳು ಇಲ್ಲಿಗೆ ತಲುಪಿರುವ ಸಾಧ್ಯತೆಗಳಿವೆ. ಇದರ ತಡೆಗೆ ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಕೃಷಿಕರು, ಅ ಧಿಕಾರಿಗಳು ಮತ್ತು ತಜ್ಞರ ಸಭೆ ನಡೆಯಲಿದೆ.
– ಪ್ರದೀಪ್ ಡಿ’ಸೋಜಾ, ತಾಲೂಕು ತೋಟಗಾರಿಕಾ ಅಧಿಕಾರಿ
Advertisement
ತೆಂಗು ಕೃಷಿ ಅಪಾಯದಲ್ಲಿತಡಂಬೈಲ್ ಭಾಗದಲ್ಲಿ ತೆಂಗಿನ ಮರಗಳು ನುಸಿ ರೋಗದಿಂದ ಬಾಧಿತವಾಗಿವೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಲಾಗಿದೆ. ರೋಗ ವೇಗವಾಗಿ ಹರಡುವುದರಿಂದ ಸುತ್ತಮುತ್ತಲಿನ ಮರಗಳು ಹಾಳಾಗುವ ಅಪಾಯವಿದೆ.
- ಅಶೋಕ್ ತಡಂಬೈಲ್, ಸ್ಥಳೀಯ ಕಾರ್ಪೊರೇಟರ್