Advertisement

ವೈಟ್‌ ಕಾಲರ್‌ ಜೆಹಾದಿಗಳಿಗೆ ತಡೆ

11:43 PM Aug 29, 2021 | Team Udayavani |

ಶ್ರೀನಗರ: ಸೈಬರ್‌ ಕ್ರೈಂ ಮೂಲಕವೇ ಭಯೋತ್ಪಾದನೆ ನಡೆಸುತ್ತಿರುವ “ವೈಟ್‌ ಕಾಲರ್‌ ಜೆಹಾದಿ’ಗಳ ಚಟುವಟಿಕೆಗಳೂ ಹೆಚ್ಚಾಗಿದೆ.

Advertisement

ಅಂಥವರ ವಿರುದ್ಧ ಕ್ರಮ  ತೆಗೆದುಕೊಳ್ಳಲು ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ ಇಲಾಖೆ ಸಿದ್ಧವಾಗಿದೆ. ಈ ಬಗ್ಗೆ ಮಾತನಾಡಿದ ಡಿಜಿಪಿ ದಿಲ್ಬಾಗ್‌ ಸಿಂಗ್‌ “ಎಲ್ಲ ಉಗ್ರರಿಗಿಂತ ಅತೀ ಅಪಾಯಕಾರಿ ಉಗ್ರರೆಂದರೆ ಅದು ವೈಟ್‌ ಕಾಲರ್‌ ಜೆಹಾದಿಗಳು. ಅವರು ಯಾವುದೋ ಮೂಲೆಯಲ್ಲಿ ಕುಳಿತು ಸಾಮಾಜಿಕ ಜಾಲತಾಣಗಳ ಮೂಲಕವೇ ಯುವಕರ ಬ್ರೈನ್‌ವಾಶ್‌ಮಾಡಿ, ಭಯೋತ್ಪಾದನೆಯ ಹಾದಿಗೆ ತಳ್ಳುತ್ತಾರೆ. ಸುಳ್ಳು ಮಾಹಿತಿ ಹಂಚುತ್ತಾರೆ ಎಂದು ಹೇಳಿದ್ದಾರೆ.

ಶಸ್ತ್ರಾಸ್ತ್ರ ಹಿಡಿದು ಯುದ್ಧಭೂಮಿಯಲ್ಲಿ ಮಾಡುವ ಹೋರಾಟ ಇದಲ್ಲ. ಬದಲಾಗಿ ಮೊಬೈಲ್‌, ಕಂಪ್ಯೂಟರ್‌ನಲ್ಲೇ ಯುದ್ಧ ಮಾಡಬೇಕಾಗಿದೆ. ಅಂಥವರ ಬಗ್ಗೆ ನಿಖರ ಮಾಹಿತಿ ಸಿಗದೆ ಕ್ರಮ ತೆಗೆದುಕೊಳ್ಳಲೂ ಸಾಧ್ಯವಿಲ್ಲ. ನಿಖರ ಮಾಹಿತಿ ಹುಡುಕುವುದೂ ಕಷ್ಟದ ಕೆಲಸವೇ. ವೈಟ್‌ ಕಾಲರ್‌ ಜೆಹಾದಿಗಳನ್ನು ಸದೆಬಡೆಯಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ನಾವು ತೆಗೆದುಕೊಳ್ಳುತ್ತೇವೆಂದು ಅವರು ರವಿವಾರ ಮಾಹಿತಿ ನೀಡಿದ್ದಾರೆ.

ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಐವರು ಶಂಕಿತ ವೈಟ್‌ ಕಾಲರ್‌ ಜೆಹಾದಿಗಳನ್ನು ಬಂಧಿಸಿದ್ದರು. ಸಾರ್ವಜನಿಕರಿಂದ ಸ್ವಯಂ ಸೇವಕರನ್ನು ಆಯ್ಕೆ ಮಾಡಿಕೊಂಡು ಅವರಿಗೂ ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಿಡುವಂತೆ ತಿಳಿಸಲಾಗಿದೆ. ಈ ಯೋಜನೆ ಫೆಬ್ರವರಿಯಿಂದಲೇ ಆರಂಭವಾಗಿದೆ ಎಂದರು ಡಿಜಿಪಿ.

Advertisement

Udayavani is now on Telegram. Click here to join our channel and stay updated with the latest news.

Next