ಬೆಳಗಾವಿ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶೆಫರ್ಡ್ಸ್ ಇಂಡಿಯಾ ಇಂಟರನ್ಯಾಶನಲ್ ವತಿಯಿಂದ ಮಂಗಳವಾರ ನಡೆಯುತ್ತಿರುವ ರಾಷ್ಟ್ರೀಯ 9ನೇ ಮಹಾ ಅಧಿವೇಶನಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಭಿಕರು ಚಪ್ಪಾಳೆ, ಶಿಳ್ಳೆ ಹೊಡೆಯುವ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿದರು.
ಸಿದ್ದರಾಮಯ್ಯ ಅವತು ವೇದಿಕೆಗೆ ಬರುತ್ತಿದ್ದಂತೆ ಕುರುಬ ಸಮಾಜ ಬಾಂಧವರು ನಿರಂತರ ಚಪ್ಪಾಳೆ, ಕೇ ಕೇ, ಶಿಳ್ಳೆ ಹೊಡೆಯುವ ಮೂಲಕ ಸ್ವಾಗತಿಸಿದರು. ಸಿದ್ದರಾಮಯ್ಯ ಅವರ ಹೆಸರು ಕೂಗಿದ ಕೂಡಲೇ ಜನರಿಂದ ಉದ್ಘಾರ ಮೊಳಗಿತು. ಸಿದ್ದರಾಮಯ್ಯ ಅವರ ನೂರಾರು ಭಾವಚಿತ್ರಗಳನ್ನು ಪ್ರದರ್ಶಿಸಿ ಅಭಿನಂದನೆ ಸಲ್ಲಿಸಿದರು.
ಇದನ್ನೂ ಓದಿ:Child Marriage: ಬಾಲ್ಯವಿವಾಹದ ವಿರುದ್ಧ ಕಾರ್ಯಾಚರಣೆ… 800 ಕ್ಕೂ ಹೆಚ್ಚು ಮಂದಿ ಬಂಧನ
ಭವ್ಯ ವೇದಿಕೆಗೆ ಸಿದ್ದರಾಮಯ್ಯ ಅವರು ಬಂದಾಗ ನಾಯಕರು ಅವರ ಕಾಲು ಮುಟ್ಟಿ ನಮಸ್ಕರಿಸಿದರು. ಕೆಲ ಹೊತ್ತು ಸಿದ್ದರಾಮಯ್ಯ ಅವರನ್ನೇ ಸುತ್ತುವರಿದು ನಿಂತಿದ್ದರು.
ಸಿದ್ದರಾಮಯ್ಯ ಸೇರಿದಂತೆ ಪ್ರಮುಖರಿಗೆ ಕಂಬಳಿ ಹೊದಿಸಿ ಹಳದಿ ಪೇಟಾ ಹಾಕಿ ಸನ್ಮಾನಿಸಲಾಯಿತು.