ಚೆನ್ನೈ: ದಳಪತಿ ವಿಜಯ್ ರಾಜಕೀಯ ಪ್ರವೇಶ ಮಾಡಿದ ಬಳಿಕ ತೆರೆಗೆ ಬರುತ್ತಿರುವ ʼಗ್ರೇಟೆಸ್ಟ್ ಆಫ್ ಆಲ್ ಟೈಮ್ʼ ಸಿನಿಮಾ ನಿರೀಕ್ಷೆಯನ್ನು ಹೆಚ್ಚಿಸಿದೆ.
ಈ ಸಿನಿಮಾವನ್ನು ವೆಂಕಟ್ ಪ್ರಭು ನಿರ್ದೇಶನ ಮಾಡುತ್ತಿದ್ದು, ಇತ್ತೀಚೆಗೆ ಸಿನಿಮಾದ ರಿಲೀಸ್ ಡೇಟ್ ನ್ನು ಚಿತ್ರತಂಡ ರಿವೀಲ್ ಮಾಡಿದೆ. ಇದಲ್ಲದೆ ಮೊದಲ ಹಾಡನ್ನು ರಿಲೀಸ್ ಮಾಡುವುದಾಗಿ ಡೇಟ್ ಅನೌನ್ಸ್ ಮಾಡಿತ್ತು. ಅದರಂತೆ ʼಗೋಟ್ʼ ಚಿತ್ರದ ಫಸ್ಟ್ ಸಿಂಗಲ್ ʼವಿಸಿಲ್ ಪೋಡುʼ ರಿಲೀಸ್ ಆಗಿದೆ.
ಯುವನ್ ಶಂಕರ್ ರಾಜ ಅವರರು ಹಾಡಿಗೆ ಮ್ಯೂಸಿಕ್ ನೀಡಿದ್ದು, . ʼಆರ್ ಆರ್ ಆರ್ʼ ಮತ್ತು ʼಬಾಹುಬಲಿʼ ಬರಹಗಾರ ಮದನ್ ಕಾರ್ಕಿ ಸಾಹಿತ್ಯ ಬರೆದಿದ್ದಾರೆ. ಸಖತ್ ಎನರ್ಜಿವುಳ್ಳ ಹಾಡಿನಲ್ಲಿ ಪ್ರಭುದೇವ ಹಾಗೂ ದಳಪತಿ ವಿಜಯ್ ಕಾಣಿಸಿಕೊಂಡಿದ್ದು,ದಳಪತಿ ವಿಜಯ್, ವೆಂಕಟ್ ಪ್ರಭು, ಯುವನ್ ಮತ್ತು ಪ್ರೇಮ್ಗಿ ಅಮರೇನ್ ಅವರು ಹಾಡಿಗೆ ಧ್ವನಿ ನೀಡಿದ್ದಾರೆ.
ವಿಜಯ್ ರಾಜಕೀಯ ರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಹಾಡಿನ ಸಾಹಿತ್ಯದಲ್ಲಿ “ನಾನು ನನ್ನ ಪ್ರಚಾರವನ್ನು ಪ್ರಾರಂಭಿಸುತ್ತೇನೆ, ನಾನು ಮೈಕ್ ಅನ್ನು ನನ್ನ ಕೈಯಲ್ಲಿ ತೆಗೆದುಕೊಳ್ಳಬೇಕೇ?” ಮುಂತಾದ ಸಾಹಿತ್ಯ ಅವರ ರಾಜಕೀಯ ಪ್ರವೇಶದ ಕುರಿತಾಗಿಯೇ ಹೇಳಿದ್ದಾರೆ ಎನ್ನುವ ಮಾತುಗಳು ಕಾಲಿವುಡ್ ವಲಯದಲ್ಲಿ ಹರಿದಾಡಿದೆ.
ಬಹು ನಿರೀಕ್ಷಿತ ಸಿನಿಮಾದಲ್ಲಿ ಪ್ರಭುದೇವ, ಜಯರಾಮ್, ಮೀನಾಕ್ಷಿ ಚೌಧರಿ, ಮೈಕ್ ಮೋಹನ್, ಪ್ರಶಾಂತ್, ಅಜ್ಮಲ್ ಸೇರಿದಂತೆ ಇತರೆ ಪ್ರಮುಖ ನಟಿಸಿದ್ದಾರೆ. ಇದೇ ವರ್ಷದ ಸೆ.5 ರಂದು ಸಿನಿಮಾ ಅದ್ಧೂರಿಯಾಗಿ ತೆರೆ ಕಾಣಲಿದೆ.