ಪುತ್ತೂರು: ಅರಿಯಡ್ಕ ಗ್ರಾ.ಪಂ. ವ್ಯಾಪ್ತಿಯಲ್ಲಿ ರವಿವಾರ ಬೀಸಿದ ಸುಂಟರ ಗಾಳಿಯಿಂದ ಅಪಾರ ಹಾನಿ ಉಂಟಾಗಿದೆ.
ಅರಿಯಡ್ಕ ಗ್ರಾಮದ ಕೌಡಿಚ್ಚಾರು ಸಿಆರ್‌ಸಿ ಕಾಲನಿಯಲ್ಲಿ ಮರ ಬಿದ್ದು ರಬ್ಬರ್ ನಿಗಮಕ್ಕೆ ಸೇರಿದ ಎರಡು ಮನೆಗಳಿಗೆ ಹಾನಿಯಾಗಿದೆ. ಅದರಲ್ಲಿ ಅಮರಾವತಿ ಮತ್ತು ತಂಗರಾಜ್ ಅವರ ಕುಟುಂಬ ವಾಸವಿದೆ.
ಕಾಲನಿಯ ನಾಗಮ್ಮ ಅವರ ಮನೆಯ ಛಾವಣಿ ಮೇಲೆ ಮರ ಬಿದ್ದು ಹಾನಿಯಾಗಿದೆ. ಪೇಚಾಯಿ, ಸೆಂದಿಲ್‌ಕುಮಾರ್ ಅವರ ಮನೆಯ ಶೀಟುಗಳು ಹಾರಿಹೋಗಿವೆ. ರವಿರಾಜ್ ಅವರ ಆಡಿನ ಕೊಟ್ಟಿಗೆಯ ಶೀಟುಗಳು ಹಾರಿಹೋಗಿದೆ. ಕಾಲನಿಯ ಹಲವು ಮನೆಗಳಿಗೆ ಹಾನಿ ಸಂಭವಿಸಿದೆ.
ಕೌಡಿಚ್ಚಾರು-ಸುಳ್ಯಪದವು ರಸ್ತೆಯ ಬದಿಯಲ್ಲಿದ್ದ ಮರ ರಸ್ತೆಗೆ ಉರುಳಿ ಬಿದ್ದಿದೆ. ಕಾವು ವಿದ್ಯುತ್ ಸಬ್‌ಸ್ಟೇಷನ್ ಸಂಪರ್ಕಿಸುವ ವಿದ್ಯುತ್ ತಂತಿ ಮೇಲೆ ಕೌಡಿಚ್ಚಾರು ಸೇತುವೆ ಸಮೀಪ ಮರ ಉರುಳಿ ಬಿದ್ದಿದೆ. ಮಾಟ್ನೂರು ಗ್ರಾಮದ ಬೆರ್ನಂತಿಯಲ್ಲಿ ಉಮೇಶ್ ಅವರ ಕೊಟ್ಟಿಗೆ ಮೇಲೆ ಮರ ಬಿದ್ದಿದೆ. ಕೌಡಿಚ್ಚಾರು ಸೇತುವೆಯ ವಿದ್ಯುತ್ ತಂತಿಗೂ ಹಾನಿಯಾಗಿದೆ.
ಸ್ಥಳಕ್ಕೆ ಅರಿಯಡ್ಕ ಗ್ರಾ.ಪಂ. ಜನಪ್ರತಿನಿಧಿಗಳು ಹಾಗೂ ಪಾಣಾಜೆ ವಲಯ ಅರಣ್ಯಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದರು.